ಮೂವರು ಅಂತರ್ ರಾಜ್ಯ ಸರಗಳ್ಳರ ಬಂಧನ !

0
312

ಶಿವಮೊಗ್ಗ: ಕೋಟೆ ಠಾಣೆ ಪೊಲೀಸರು ಮೂವರು ಅಂತರ್ ರಾಜ್ಯ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ವಿವರ :

ಮೇ 23 ರಂದು ಸಂಜೆ ಶೇಷಾದ್ರಿಪುರಂ ಶಿವಮೊಗ್ಗದ ವಾಸಿಯೊಬ್ಬರು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆದಿಶಕ್ತಿ ಶೋರೂಂ ಹತ್ತಿರ ಹೋಗುತ್ತಿದ್ದಾಗ ಬೈಕಿನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕಲಂ 392 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿತ್ತು.

ಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಈ ಪ್ರಕರಣದ ತನಿಖೆ ಕೈಗೊಂಡು ಮೇ 28 ರಂದು ಆರೋಪಿಗಳಾದ ಅಶೋಕ್ ಕುಮಾರ್ (24), ಬಾವರ್ಲ ಗ್ರಾಮ, ಸ್ಯಾಂಚೋರ್‌ ತಾಲ್ಲೂಕು, ಜಾಲೋರ್‌ ಜಿಲ್ಲೆ, ರಾಜಸ್ಥಾನ ಮತ್ತು ಅಶ್ವಿನ್ ಪ್ರಜಾಪತಿ (23) ಕಿಲೋಪಿಯಾ ಗ್ರಾಮ, ಸ್ಯಾಂಚೋರ್‌ ತಾಲ್ಲೂಕು, ಜಾಲೋರ್‌ ಜಿಲ್ಲೆ, ರಾಜಸ್ಥಾನ ರವರನ್ನು ಬಂಧಿಸಿದ್ದರು.

ಜೂ. 09 ರಂದು ಇನ್ನೊಬ್ಬ ಆರೋಪಿ ವಿಕಾಸ್ ಕುಮಾರ್ (22), ಪರಾವ ಗ್ರಾಮ, ಸ್ಯಾಂಚೋರ್‌ ತಾಲ್ಲೂಕು, ಜಾಲೋರ್‌ ಜಿಲ್ಲೆ, ರಾಜಸ್ಥಾನ ಈತನನ್ನು ಬಂಧಿಸಿ ಆರೋಪಿಗಳಿಂದ ಕೋಟೆ -02, ವಿನೋಬನಗರ-02, ದೊಡ್ಡಪೇಟೆ-01 ಮತ್ತು ತುಂಗಾನಗರ ಠಾಣೆಯ-01 ಪ್ರಕರಣ ಸೇರಿ ಒಟ್ಟು 06 ಸರಗಳ್ಳತನ ಪ್ರಕರಣಗಳು ಹಾಗೂ ಕೋಟೆ ಮತ್ತು ವಿನೋಬನಗರ ಪೊಲೀಸ್ ಠಾಣೆಯ ತಲಾ 01 ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ‌ ಸೇರಿದ ಒಟ್ಟು 225 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here