ಮೂವರು ಬೈಕ್ ಕಳ್ಳರ ಬಂಧನ ; 08 ಲಕ್ಷ ರೂ. ಮೌಲ್ಯದ 06 ಬೈಕ್’ಗಳು ವಶಕ್ಕೆ !

0
282

ಶಿವಮೊಗ್ಗ: ಮೂವರು ಬೈಕ್ ಕಳ್ಳರನ್ನು ಬಂಧಿಸಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 08 ಲಕ್ಷ ರೂ. ಮೌಲ್ಯದ 06 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2022 ರ ಜೂ. 02ರಂದು ಹೊಸನಗರದ ಮಾರುತಿಪುರ ಗ್ರಾಮದ ವಾಸಿಯೊಬ್ಬರು ಕೆಲಸದ ನಿಮಿತ್ತ ತಮ್ಮ ಬಜಾಜ್ ಪಲ್ಸರ್ ಬೈಕ್ ನಲ್ಲಿ ಸಾಗರಕ್ಕೆ ಬಂದಿದ್ದು, ಬೈಕ್ ಅನ್ನು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ನಗರದಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ನೀಡಿದ ದೂರಿನ ಮೇರೆಗೆ ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪಿಐ ಮತ್ತು ಪಿಎಸ್ಐ ಸಾಗರ ಟೌನ್, ಪಿಎಸ್ಐ ಕಾರ್ಗಲ್ ಮತ್ತು ಸಿಬ್ಬಂದಿಗಳ ತಂಡವು ಈ ಪ್ರಕರಣದ ತನಿಖೆ ಕೈಗೊಂಡು ಜೂ. 28 ರಂದು ಈ ಪ್ರಕರಣದ ಆರೋಪಿಳಾದ ಶಿಕಾರಿಪುರದ ಅಂಜನಾಪುರ ಸಮೀರ್ @ ಸೈಕ್ (23), ಶಿವಮೊಗ್ಗದ ಶಾಂತಿನಗರ ಮಹಮದ್ ಖಾದ್ರಿ @ ಸುಹೇಲ್ (19) ಮತ್ತು ಶಿವಮೊಗ್ಗ ಟ್ಯಾಂಕ್ ಮೊಹಲ್ಲಾ ಜುನೈದ್ ಖಾನ್ @ ಡಾನ್ ಡಾಲಿ (30) ರವರುಗಳನ್ನು ಬಂಧಿಸಿ ಆರೋಪಿಗಳಿಂದ ಸಾಗರ ಟೌನ್ -01, ಭದ್ರಾವತಿ ಓಲ್ಡ್ ಟೌನ್ 01, ಹರಿಹರ 01, ದಾವಣಗೆರೆಯ ವಿದ್ಯಾನಗರ 01, ಬಡಾವಣೆ ಪೊಲೀಸ್ ಠಾಣೆ ದಾವಣಗೆರೆ 01 ಮತ್ತು ಹಾಸನ ಟೌನ್ 01 ಪ್ರಕರಣ ಸೇರಿದಂತೆ ಒಟ್ಟು 06 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 8,20,000 ರೂ. ಗಳ 06 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here