23.2 C
Shimoga
Sunday, November 27, 2022

ಮೂವರು ಶ್ರೀಗಂಧ ಕಳ್ಳರಿಗೆ 5 ವರ್ಷ ಜೈಲು ಶಿಕ್ಷೆ ಜೊತೆಗೆ ₹ 50 ಸಾವಿರ ದಂಡ !

ಶಿವಮೊಗ್ಗ : ಮೂವರು ಶ್ರೀಗಂಧ ಕಳ್ಳರಿಗೆ 5 ವರ್ಷ ಜೈಲು ಶಿಕ್ಷೆ ಜೊತೆಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.

ಘಟನಾ ವಿವರ :

2017 ರ ನ.09 ರಂದು ಶಿಕಾರಿಪುರ ಟೌನ್‌ ಠಾಣಾ ವ್ಯಾಪ್ತಿ ಮುದಿಗೌಡರ ಕೇರಿಯಲ್ಲಿ ಶ್ರೀ ಗಂಧದ ಮರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಲಿಸಿ ಆಗಿನ ತನಿಖಾಧಿಕಾರಿಗಳಾದ ಬಸವರಾಜ್‌, ಸಿಪಿಐ, ಶಿಕಾರಿಪುರ ವೃತ್ತರವರು ತನಿಖೆ ಕೈಗೊಂಡು ಆರೋಪಗಳನ್ನು ಬಂಧಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕರವರಾದ ಮಮತಾ ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ&ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಮಾನು ಕೆ. ಎಸ್ ರವರು ಅ.18 ರಂದು ಆರೋಪಿಗಳಾದ ಮಹಮ್ಮದ್‌ ರಿಜ್ವಾನ್‌, (25) ಬಿಲ್ಲಹಳ್ಳಿ, ತರಿಕೆರೆ, ಮಹಮ್ಮದ್‌ ಆಜಂ (25) ಹೊನ್ನೆಬಾಗಿ,ಚನ್ನಗಿರಿ ಮತ್ತು ಬರ್ಕತ್‌ ಅಲಿ (54) ಬಿಲ್ಲಹಳ್ಳಿ, ತರಿಕೆರೆ ಇವರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 5 ವರ್ಷ ಸಾಧಾ ಕಾರಾವಾಸ ಶಿಕ್ಷೆ ಜೊತೆಗೆ 50,000ರೂ ದಂಡ, ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!