23.2 C
Shimoga
Sunday, November 27, 2022

ಮೇಲಿನಬೆಸಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಅಕ್ರಮ ಕಲ್ಲುಕ್ವಾರೆ ;
ಕಂದಾಯ, ಗಣಿ ಇಲಾಖೆ ಜೊತೆ ಪೊಲೀಸ್ ಇಲಾಖೆಯ ದಿವ್ಯಮೌನ !?


ಹೊಸನಗರ: ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 766ಸಿ ಸಮೀಪದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ದೂರುಗಳು ಕೇಳಿಬರುತ್ತಿದೆ.


ಇಲ್ಲಿನ ಚಾಮುಂಡೇಶ್ವರಿ ದೇವಾಲಯದ ಬೆಟ್ಟದ ತಪ್ಪಲ್ಲಿನಲ್ಲಿ ಹಾಗೂ ಅದೇ ದೇವಾಲಯದ ಎದುರು ರಸ್ತೆಯ ಇಕ್ಕೆಲಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಅಕ್ರಮ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆದೆ ಇರುವುದು ಅಲವು ಅನುಮಾನಗಳಿಗೆ ಕಾರಣವಾಗಿದೆ.

ಸರ್ವೆ ನಂಬರ್ 22, 24 ಹಾಗು 40ರ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿ ರಾಜಾರೋಷವಾಗಿ ಅಕ್ರಮ ಕಲ್ಲುಗಣಿಗಾರಿಕೆ ತಲೆಯೆತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲೇ ಈ ಅಕ್ರಮ ದಂಧೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವ ಹಿಂದಿನ ರಹಸ್ಯ ಪ್ರಶ್ನಿಸುವಂತಿದೆ.

ಈಗಾಗಲೇ ಜಯನಗರದಿಂದ ಸಿಂಗಾಪುರದವರೆಗೂ ಹತ್ತಾರು ಕಡೆ ಅಕ್ರಮ ಕಲ್ಲಗಣಿಗಾರಿಕೆ ನಡೆಯುತ್ತಿದ್ದರೆ, ಸರ್ಕಾರದ ಜೀವವೈವಿಧ್ಯದ ಮೇಲೆ ಹಗಲುದರೋಡೆ ನಡೆದಿದೆ. ಪರವಾನಿಗೆ ಇಲ್ಲದೆ ಕಂದಾಯ ಭೂಮಿಯಲ್ಲಿ ಕಲ್ಲುಗಣಿಕಾರಿಗೆ ನಡೆಯುತ್ತಿರುವುದು, ಗಣಿಗಾರಿಕೆ ಇಂದಲೇ ನೂರಾರು ಅಡಿಗಳಷ್ಟು ಪ್ರಪಾತ ನಿರ್ಮಾಣ ಆಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಸುಮಾರು ಒಟ್ಟಾರೆ 60ಕ್ಕೂ ಹೆಚ್ಚು ಮಂದಿ ಈ ಅಕ್ರಮ ಕಲ್ಲುಗಣಿಕಾರಿಕೆಯಲ್ಲಿ ತೊಡಗಿರುವುದು ಕೇಳಿಬರುತ್ತಿದೆ. ಪ್ರತಿ ತಿಂಗಳ 20ನೇ ದಿನಾಂಕದಂದು ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಮಾಮೂಲು ಸಲ್ಲಿಸುವ ಪರಿ ಸಹ ಇದೆ ಎಂಬ ಮಾತು ಕೇಳಿಬರುತ್ತಿದೆ.

ಕೂಡಲೇ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಪರಿಸರಾಸಕ್ತರ ಮನವಿಯಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!