ಚಿಕ್ಕಮಗಳೂರು: ದಿ ಮೋಟರ್ಸ್ ಸ್ಫೋಟ್ಸ್ ಕ್ಲಬ್ ವತಿಯಿಂದ ಮೇ. 14 ಮತ್ತು 15 ರಂದು ರ್ಯಾಲಿ ಆಫ್ ಚಿಕ್ಕಮಗಳೂರು ದ್ವಿಚಕ್ರ ವಾಹನ ರ್ಯಾಲಿಯನ್ನು ಆಯೋಜಿಸಲಾ ಗಿದೆ ಎಂದು ಕ್ಲಬ್ ಕಾರ್ಯದರ್ಶಿ ಅಭಿಜಿತ್ ಪೈ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂಆರ್ಎಫ್ ಮಾಗ್ರಿಫ್ ಎಫ್ಎಂಎಸ್ಸಿಐ ನ್ಯಾಷನಲ್ ರ್ಯಾಲಿ ಚಾಂಪಿಯನ್ಶೀಫ್ 2022 ದ್ವಿಚಕ್ರ ವಾಹನದ ಸ್ಟೇಜ್ ರ್ಯಾಲಿಯ ಮೊದಲ ಸುತ್ತು ನಡೆಯಲಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಮೊದಲ ಸುತ್ತು, ಮೇ. 22 ರಂದು ಮಂಗಳೂರಿನಲ್ಲಿ, ಜುಲೈ 17ರಂದು ಕೊಯಂಬತ್ತೂರಿನಲ್ಲಿ, ಆಗಸ್ಟ್ 14ರಂದು ಬೆಂಗಳೂರು, ಡಿಸೆಂಬರ್ 14ರಂದು ಪುಣೆ, ಡಿಸೆಂಬರ್ 18ರಂದು ನಾಸಿಕ್ನಲ್ಲಿ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ರ್ಯಾಲಿ ಎಂಆರ್ಎಫ್ ಟೈಯರ್ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಸಹ ಪ್ರಯೋಜಕತ್ವವನ್ನು ಎಫ್ಎಂಎಸ್ಸಿಐ ಟಿವಿಎಸ್ ಅಪಾಚಿ ಹಾಗೂ ಚಂದನ್ ಮೋಟಾರ್ಸ್ ಪ್ರಯೋಜಕತ್ವದಲ್ಲಿ ನಡೆಯಲಿದೆ ಎಂದರು.
ಚಿಕ್ಕಮಗಳೂರಿನಲ್ಲಿ ನಡೆಯುವ ಮೊದಲ ಸುತ್ತಿನ ರ್ಯಾಲಿ ಮೇ. 14ರಂದು ಸಂಜೆ 5ಗಂಟೆ ಗೆ ಸವೆನ್ ಇವನ್ ರೆಸಾರ್ಟ್ ಅಲ್ಲಂಪುರದಲ್ಲಿ ಚಾಲನೆ ದೊರೆಯಲಿದೆ. ಈ ರ್ಯಾಲಿಯು 8 ಸ್ಟೇಜ್ಗಳನ್ನು ಹೊಂದಿದ್ದು, ಮೇ. 15 ಭಾನುವಾರ ವಸಂತ್ ಕೂಲ್ ಎಸ್ಟೇಟ್ನಲ್ಲಿ 8 ಕಿ. ಮೀ, ತಿಪ್ಪನಹಳ್ಳಿ ಎಸ್ಟೇಟ್ನಲ್ಲಿ 6 ಕಿ.ಮೀ. ರ್ಯಾಲಿ ನಡೆಯಲಿದೆ.
Related
You cannot copy content of this page