ಮೇ 24 ರಂದು ಹೊಸನಗರ ಕೃಷಿ ಉತ್ಪನ ಮರುಕಟ್ಟೆ ಸಾಗರಕ್ಕೆ ವರ್ಗಾವಣೆ ಹಾಗೂ ಬೈಪಾಸ್ ರಸ್ತೆಯ ವಿರುದ್ಧ ಪ್ರತಿಭಟನೆ: ಕಲಗೋಡು ರತ್ನಾಕರ್

0
344

ಹೊಸನಗರ: ಹೊಸನಗರದಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪಿತವಾಗಿ ಉತ್ತಮ ರೀತಿಯಲ್ಲಿ ರೈತರಿಗೆ ಸೇವೆ ಸಲ್ಲಿಸುತ್ತಿರುವ ಕೃಷಿ ಉತ್ಪನ ಮರುಕಟ್ಟೆಯನ್ನು ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆಯೊಂದಿಗೆ ವಿಲಿನಗೊಳಿಸುವ ಸಂಚು ನಡೆದಿದ್ದು ಅಲ್ಲದೇ ರಾಣೆಬೆನ್ನೂರಿನಿಂದ ಬೈಂದೂರು ರಾಷ್ಟ್ರೀಯ ಹೆದ್ದಾರಿಯನ್ನು ಹೊಸನಗರ ಟೌನ್ ಬಿಟ್ಟು ಮಾವಿನಕೊಪ್ಪದಿಂದ ಬೈಪಾಸ್ ರಸ್ತೆ ನಿರ್ಮಿಸಲು ಉದ್ದೇಶಿಸಿರುವ ಕ್ರಮವನ್ನು ಖಂಡಿಸಿ ಹೊಸನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮೇ 24 ರಂದು ಬೆಳಿಗ್ಗೆ 11ಗಂಟೆಗೆ ಎ.ಪಿ.ಎಂ.ಸಿ ಕಛೇರಿಯಿಂದ ತಹಶೀಲ್ದಾರ್ ಕಛೇರಿಯವರೆಗೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್‌ರವರು ಹೇಳಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಬೈಪಾಸ್ ರಸ್ತೆ ಗುಮ್ಮ:

ಸುಮಾರು ವರ್ಷಗಳಿಂದ ಹೊಸನಗರ ಪಟ್ಟಣದ ಜನತೆಯಲ್ಲಿ ಯಾವಾಗ ರಸ್ತೆ ಅಗಲೀಕರಣವಾಗುತ್ತದೆ ಎಂದು ಕಾದು ಕುಳಿತಿರುವ ಜನತೆಗೆ ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ.ವೈ ರಾಘವೇಂದ್ರರವರು ಬಿಗ್ ಶಾಕ್ ನೀಡಿದ್ದು ಬೈಪಾಸ್ ರಸ್ತೆ ಮಾಡುವುದಾಗಿ ತಿಳಿಸಿದ್ದಾರೆ. ಸರ್ವೆ ಕಾರ್ಯವು ನಡೆಯುತ್ತಿದೆ ಇದರಿಂದ ಮೊದಲೇ ಕುಠಿತವಾಗಿ ಸಾಗುತ್ತಿದ್ದ ಹೊಸನಗರ ಹೋಗಿ ಹಳೇ ಹೊಸನಗರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಕೆಲವು ಬಿಜೆಪಿ ಮುಖಂಡರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ ಮಾವಿನಕೊಪ್ಪದಿಂದ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಹೊರಟಿರುವ ಕ್ರಮವನ್ನು ಖಂಡಿಸಿ ಉಗ್ರ ಹೋರಾಟ ಅನಿವಾರ್ಯವೆಂದು ತಿಳಿಸಿದರು.

ಈ ಉಗ್ರ ಹೋರಾಟದ ನೇತೃತ್ವವನ್ನು ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ವಹಿಸಲಿದ್ದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೇಳೂರು ಗೋಪಾಲಕೃಷ್ಣ ಮತ್ತು ರಾಜನಂದಿನಿ ಜಿಲ್ಲೆಯಿಂದ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರುಗಳು ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೃಷಿ ಉತ್ಪನ ಮಾರುಕಟ್ಟೆ ಮೀಲಿನಕ್ಕೆ ಶಾಸಕ ಹಾಲಪ್ಪನವರೇ ಕಾರಣ: ರಾಜನಂದಿನಿ:

ಹೊಸನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಉತ್ತಮ ರೀತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದರೂ ಇದನ್ನು ಏಕಾಏಕಿ ಸಾಗರ ಕೃಷಿ ಉತ್ಪನ್ನ ಮಾರು ಕಟ್ಟೆಗೆ ಮಿಲೀನಗೊಳಿಸುವುದರ ಕ್ರಮವು ಹೊಸನಗರ ತಾಲ್ಲೂಕಿನ ರೈತರಿಗೆ ಮಾಡುತ್ತಿರುವ ಅವಮಾನದ ಜೊತೆಗೆ ತಾಲ್ಲೂಕಿನ ರೈತರಿಗೆ ತೊಂದರೆ ನೀಡುವ ಉದ್ದೇಶದಿಂದ ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಹಾಲಪ್ಪನವರು ಈ ರೀತಿ ಮಾಡುತ್ತಿದ್ದು ಎಪಿಎಂಸಿ ಚುನಾವಣೆಯ ದಿನಾಂಕ ನಿಗದಿಯಾದರೆ ಹೊಸನಗರ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷದ ಸದಸ್ಯರು ಗೆಲ್ಲುವುದಿಲ್ಲ ಚುನಾವಣೆ ಘೋಷಣೆಯಾಗುವುದರ ಒಳಗೆ ವಿಲೀನಗೊಳಿಸಿದರೆ ಮೂರು ವರ್ಷಗಳ ಕಾಲ ಚುನಾವಣೆ ನಡೆಸದೇ ಆಡಳಿತ ನಡೆಸಬಹುದು ಎಂಬ ಉದ್ದೇಶದಿಂದ ವಿಲೀನಗೊಳಿಸಲು ಹೊರಟ್ಟಿದ್ದು ಇದು ಹೊಸನಗರ ತಾಲ್ಲೂಕಿನ ರೈತರಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಾಜನಂದಿನಿಯವರು ಪತ್ರಿಕಾ ಘೋಷ್ಠಿಯಲ್ಲಿ ಹೇಳಿದರು.

ಈ ಪತ್ರಿಕಾಘೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ.ನಾಗರಾಜ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ಬಂಡಿ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದ್ರಮೌಳಿ, ಎರಗಿ ಉಮೇಶ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಜಯಶೀಲಪ್ಪ ಗೌಡ, ಎಂ.ಪಿ ಸುರೇಶ್, ಟೀಕಪ್ಪ ಜಯನಗರ ಗುರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here