ಮೈಸೂರು ಸಿಲ್ಕ್ ಮಹಿಳೆಯರಿಗೆ ಅಚ್ಚುಮೆಚ್ಚು: ವಿಜಯಕುಮಾರ್

0
357

ಶಿವಮೊಗ್ಗ: ಮೈಸೂರು ಸಿಲ್ಕ್ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ಅದರಲ್ಲೂ ಮಹಿಳೆಯರಿಗೆ ವಿವಾಹಗಳು ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯ ಸೀರೆ ಮೈಸೂರು ಸಿಲ್ಕ್ ಸೀರೆಗಳಾಗಿವೆ ಎಂದು ಕೆ.ಎಸ್.ಐ.ಸಿ. ನಿರ್ದೇಶಕರಾದ ವಿಜಯ್ ಕುಮಾರ್ ಹೇಳಿದರು.

ಇಂದು ನಗರದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸರ್ಕಾರದ ಕೆ.ಎಸ್.ಐ.ಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ)ವು ಐದು ದಿನಗಳ ಕಾಲ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡಿದರು.

ಭಾರತದಲ್ಲಿ ದೊರೆಯುವ ಇತರೆ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ವಿಭಿನ್ನವಾಗಿದೆ. ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡುತ್ತದೆ. ಮೈಸೂರು ಸಿಲ್ಕ್ ಗೆ ಉಪಯೋಗಿಸಲ್ಪಡುವ ರೇಷ್ಮೆಯು ಪರಿಶುದ್ಧವಾಗಿದ್ದು ಹಾಗೂ ಜರಿಯ ಪರಿಶುದ್ದ ಚಿನ್ನವಾಗಿದ್ದು, ಅಪ್ಪಟ ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ಹಾಗೂ ಕೆ.ಎಸ್.ಐ.ಸಿ.ಯ ಮೈಸೂರು ಸಿಲ್ಕ್ ಸೀರೆಯು ಭೌಗೋಳಿಕ ಗುರುತಿನ ನೋಂದಣಿ GI-11 ಪಡೆದುಕೊಂಡಿದೆ. ಇದಲ್ಲದೆ ಕಂಪನಿಯು ISO 9001-2015, EMS 14001-2015 ಹಾಗೂ OHSAS18001-2007ರ ದ್ರುಢೀಕಣ ಪತ್ರವನ್ನು ಪಡೆದಿದೆ. ಸತತವಾಗಿ ನಾಲ್ಕು ವರ್ಷಗಳು ಕರ್ನಾಟಕ ದ ಅತ್ಯುತ್ತಮ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ “ಮುಖ್ಯ ಮಂತ್ರಿಗಳ ವಾರ್ಷಿಕ ರತ್ನ ” ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಇವರು ಹೇಳಿದರು.

ಈ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವು ದಿನಾಂಕ 19-03-2021 ರಿಂದ 23-03-2021ರ ವರೆಗೆ ನಡೆಯಲಿದೆ ಹಾಗೂ ಈ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೆ ಕ್ರೇಪ್ ಡಿ ಚೈನ್ ಸೀರೆಗಳು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳು, ಟೈ, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ ಹಾಗೂ ಉತ್ಪನ್ನಗಳ ಮೇಲೆ ಶೇಕಡಾ 25% ರ ವರೆಗೆ ವಿಶೇಷ ರಿಯಾಯಿತಿ ಯನ್ನು ನೀಡುತ್ತಿದೆ ಹಾಗೂ ಕೋವಿಡ್-19 ಸಾಂಕ್ರಾಮಿಕದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗ್ರಾಹಕರು ಮತ್ತು ಮಹಿಳೆಯರು ಯಾವುದೇ ಭಯ ಪಡದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೆ.ಎಸ್.ಐ.ಸಿ ಜನರಲ್ ಮ್ಯಾನೇಜರ್ ಭಾನುಪ್ರಕಾಶ್ ಇವರು ಹೇಳಿದರು.

ಕಾರ್ಯಕ್ರಮದಲ್ಲಿ ರೈಲ್ವೆ ಸಲಹಾ ಸಮಿತಿಯವರಾದ ಮೋಹನ್, ಶ್ರೀನಿವಾಸ್ ಮತ್ತಿತರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here