20.6 C
Shimoga
Friday, December 9, 2022

ಮೊಟ್ಟೆ ಖರೀದಿಗೆ ಹೋದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯನಿಗೆ ಅಂಗಡಿ ಮಾಲೀಕನಿಂದ ಕಪಾಳಮೋಕ್ಷಾ !!


ರಿಪ್ಪನ್‌ಪೇಟೆ: ಸಮೀಪದ ಕಾರೇಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾದ್ಯಾಯ ಬಿಸಿಯೂಟದ ಮಕ್ಕಳಿಗಾಗಿ ಮೊಟ್ಟೆ ಖರೀದಿಸಲು ಅಂಗಡಿಗೆ ಹೋದಾಗ ಶಿಕ್ಷಕನ ಮೇಲೆ ಕಪಾಳಮೋಕ್ಷಾ ಮಾಡುವ ಮೂಲಕ ಹಲ್ಲೆ ಎಸಗಿರುವ ಪ್ರಕರಣ ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಗಿದೆ.


ಕಾರೇಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಎಂಬ ಶಿಕ್ಷಕ ರಿಪ್ಪನ್‌ಪೇಟೆಯ ಬಿಸ್ಮಿಲಾ ಮೊಟ್ಟೆ ಅಂಗಡಿಯಲ್ಲಿ ಮೊಟ್ಟೆ ಖರೀದಿಸಲು ಹೋದಾಗ ಟ್ರೇ ವಿಚಾರದಲ್ಲಿ ಅಂಗಡಿ ಮಾಲೀಕ ಅವಾಚ್ಯವಾಗಿ ನಿಂದಿಸಿ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾರೆಂದು ಶಿಕ್ಷಕ ಮಂಜುನಾಥ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಠಾಣೆಗೆ ದೂರು ನೀಡಿದ್ದಾರೆ.

ಶಿಕ್ಷಕ ನೀಡಿದ ದೂರಿನಲ್ಲೇನಿದೆ ?

ನಾನು ಕಾರೇಮಟ್ಟಿ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದು ನ. 03ರಂದು ಸಂಜೆ 4-00 ಗಂಟೆಗೆ ಎಸ್ ಡಿ ಎಂ ಅಧ್ಯಕ್ಷರಾದ ಅರವಿಂದ ಅತಿಥಿ ಶಿಕ್ಷಕರಾದ ಪ್ರಶಾಂತ್ ರವರುಯ ಸೇರಿ ಪೋಷಣ್
ಅಭಿಯಾನದ ಅಡಿ ಬಿಸಿಯೂಟದೊಂದಿಗೆ ಕೊಡಬೇಕಾದ ಕೋಳಿ ಮೊಟ್ಟೆ ಖಾಲಿಯಾಗಿದ್ದರಿಂದ ಮೊಟ್ಟೆ ಟ್ರೇಗಳನ್ನು ಕೊಟ್ಟು ಮೊಟ್ಟೆ ತುಂಬಿಕೊಡಲು ಕೇಳಿದ್ದಕ್ಕೆ ಮೊಟ್ಟೆ
ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮೊಹಮ್ಮದ್ ಅಲಿ ರಾಹೀಲ್ ರವರು ಮೊಟ್ಟೆ ಟ್ರೇಗಳು ನಮ್ಮದು ಅವುಗಳನ್ನು ಕೊಡುವುದಿಲ್ಲ ಎಂದಿದ್ದಕ್ಕೆ ನಾನು 4 ಮೊಟ್ಟೆಯ ಟ್ರೇಗಳನ್ನು ನಿಮ್ಮ ತಂದೆಯ ಬಳಿ 40 ರೂ. ಗಳಂತೆ ವ್ಯಾಪಾರ ಮಾಡಿಕೊಂಡಿದ್ದೇವೆ ಎಂದಿದ್ದಕ್ಕೆ ಮೊಹಮ್ಮದ್ ರಾಹೀಲ್ ರವರು ಏಕಾಏಕಿ ಬೋ… ಮಗನೇ ನಿನ್ನ ಅ…..ಎಂದು ಅವಾಚ್ಯ ಶಬ್ದಗಳಿಂದ ಬೈದು ಮೊಟ್ಟೆ ಟ್ರೇಗಳನ್ನು ಕೊಡುವುದಿಲ್ಲ ಏನು ಮಾಡುತ್ತೀಯಾ ಮಾಡಿಕೋ ಎಂದಿದ್ದು ಅಲ್ಲಿಗೆ ಬಂದ ಮೊಹಮ್ಮದ್ ರಾಹೀಲ್ ರವರ ತಂದೆಯು ಸಹಾ ಒಪ್ಪಿಕೊಂಡಿರುತ್ತಾರೆ.

ಅದನ್ನು ಒಪ್ಪಿಕೊಳ್ಳದೇ ಮೊಹಮ್ಮದ್ ರಾಹೀಲ್ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ನಾನು ಏಕೆ ಬೈಯುತ್ತೀಯಾ ಎಂದು ಕೇಳಿದ್ದಕ್ಕೆ ಏಕಾಏಕಿ ಬಂದವನೆ ನನ್ನನ್ನು ತಳ್ಳಾಡಿ ಕೈಯಿಂದ ಕೆನ್ನೆಗೆ ಮತ್ತು ತಲೆಗೆ ಹೊಡೆದಿದ್ದು ಕಿವಿ ಮತ್ತು ಕಪಾಳ ನೋವಾಗಿರುತ್ತದೆ.

ಕೂಡಲೇ ನಾನು ಆಸ್ಪತ್ರೆಗೆ ಹೊರಟಾಗ ನೀನು ಇನ್ನೊಮ್ಮೆ ನನ್ನ ಮೊಟ್ಟೆ ಅಂಗಡಿ ಕಡೆ ಬಂದರೆ ನಿನಗೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಶಿಕ್ಷಕ ಮಂಜುನಾಥ್ ರಿಪ್ಪನ್‌ಪೇಟೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ U/S 504,323,186, 332, 353, 506 IPC ಅಡಿ ಪ್ರಕರಣ ದಾಖಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!