ಮೊಬೈಲ್‌ನಿಂದ ಜಗತ್ತು ಆಕ್ರಮಿಸುವ ಕಾಲ ದೂರವಿಲ್ಲ ; ಶ್ರೀಗಳು

0
267

ರಿಪ್ಪನ್‌ಪೇಟೆ: ಯುದ್ಧ, ಬಾಂಬ್ ಸಿಡಿಸಿ ದೇಶ ನಾಶಮಾಡುವ ಹಲವು ವಿಧದಲ್ಲಿ ದೇಶವನ್ನು ಬೆದರಿಸುವ ಕಾಲವೊಂದು ಇತ್ತು . ಈಗ ಕೊರೊನಾ ರೋಗವನ್ನು ಹರಿಬಿಟ್ಟು ಜಗತ್ತು ನಾಶಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ, ಮೊಬೈಲ್‌ನಿಂದ ಜಗತ್ತು ಆಕ್ರಮಿಸುವ ಕಾಲ ದೂರವಿಲ್ಲ. ಹೀಗೆ ತಂತ್ರಜ್ಞಾನದಿಂದಾಗಿ ದೇಶ ಮುನ್ನಡೆ ಸಾಧಿಸಿದ್ದರೂ ಕೂಡಾ ಮುಂದೊಂದು ದಿನ ಜಗತ್ತಿಗೆ ಗಂಡಾಂತರ ಬರುವ ಕಾಲ ದೂರವಿಲ್ಲ ಎಂದು ಆನಂದಪುರ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಅಭಿಪ್ರಾಯಪಟ್ಟರು.

ಕೋಣಂದೂರು ಬೃಹನ್ಮಠದಲ್ಲಿ ಸಂಕ್ರಾಂತಿಯ ಧನುರ್ಮಾಸ ಮುಕ್ತಾಯ ಸಮಾರಂಭ ಮತ್ತು ಧರ್ಮಸಭೆಯ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಭೂಮಿ ಸುತ್ತುತ್ತದೆ ನಾವು ದೇಶ ಸುತ್ತತ್ತೇವೆ ಹಾಗೆ ಉತ್ತರಾಯಣ ಪುಣ್ಯ ಕಾಲದಲ್ಲಿ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ ಪ್ರಕೃತಿ ಸಹ ಕಾಲಕಾಲಕ್ಕೆ ಬದಲಾಗುತ್ತದೆ ಎಂದ ಹೇಳಿದ ಶ್ರೀಗಳು, ಕರ್ತವ್ಯಕ್ಕಿಂತ ಕಾಯಕ ನಿಷ್ಟೆ ಮುಖ್ಯವಾಗಿದೆ ಇನ್ನೂ ಮುಂದೆ ದಿನಮಾನಗಳಲ್ಲಿ ಬದುಕು ಕಷ್ಟಕರವಾಗಿದೆ.

ಎಷ್ಟೆ ಕಷ್ಟಬಂದರು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬಸವಾದಿ ಪ್ರಮರ್ಥರು ಹನ್ನರಡನೇ ಶತಮಾನದಲ್ಲಿ ರೂಪಿಸಿದಂತಹ ವಚನಗಳು ಇಂದಿಗೂ ಬದುಕಿಗೆ ಮಾರ್ಗದರ್ಶಿಯಾಗಿವೆ. ಕೋವಿಡ್ ಬದುಕಿನ ಪಾಠವನ್ನು ಕಲಿಸಿದೆ.ನಮ್ಮ ನಡುವಳಿಕೆಯನ್ನು ತಿದ್ದಿಕೊಂಡು ಬದುಕುವುದನ್ನು ಅಳವಡಿಸಿಕೊಳ್ಳಬೇಕು. ದೇವರು ಧರ್ಮದ ನಂಬಿಕೆಯ ಮೇಲೆ ದೇಶ ನಿಂತಿದೆ. ದೇವರ ಪ್ರತಿರೂಪ ಗುರು. ಸಮಾಜದ ಪ್ರತಿನಿಧಿಯಾಗಿ ಮಧ್ಯವರ್ತಿಯಾಗಿ ಗುರುಕೆಲಸಮಾಡಬೇಕು. ಭಗವಂತ ಮತ್ತು ಸಮಾಜದ ಕಾಯಕ ಸತ್ಯ ಶುದ್ದವಾಗಿ ಮಾಡುವವನೆ ಗುರು. ಶಿಷ್ಯನ ಮನಸ್ಸು ಆಕರ್ಷಿಸುವನ್ನು ಗುರುವಾಗಿದ್ದಾನೆ. ಮಠ ಶಾಲೆಯಲ್ಲ ಮಠಗಳು ಬದುಕಿನ ಪಾಠಹೇಳಿಕೊಡುವ ಸಮರ್ಥವಾಗಿ ಮುನ್ನಡೆಯುವಂತೆ ಮಾಡುವುದೆ ಮಠದ ಕಾರ್ಯವಾದರೆ ಶಾಲೆಗಳು ಜ್ಞಾನದ ಪಾಠ ಹೇಳಿಕೊಡುತ್ತವೆ ಎಂದರು.

ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಧರ್ಮಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿ ಸಂದೇಶಾಮೃತ ನೀಡಿ, ಇಷ್ಟಲಿಂಗದ ಮಹಾಪೂಜೆ ಶ್ರೇಷ್ಟವಾಗಿದ್ದು ನಮ್ಮಲ್ಲಿರುವ ಅನಿಷ್ಟವನ್ನು ದೂರಮಾಡಿ ಸದ್ಗುಣವನ್ನು ಬೆಳಸುವ ಶಕ್ತಿ ಇಷ್ಟಲಿಂಗ ಮಹಾಪೂಜೆಗೆ ಇದೆ ಅಷ್ಟಾವರಣಗಳು ಗುರುವಿಗೆ ಶ್ರೇಷ್ಟ ಸ್ಥಾನ ಕಲ್ಪಿಸಿದೆ ಎಂದರು.

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಜಿ, ಹಂಸಸಾಗರ ಮಠದ ಶಿವರುದ್ರಶಿವಾಚಾರ್ಯರು, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಉದ್ಯಮಿ ಎಪಿಎಂಸಿ ನಿರ್ದೇಶಕ ಕೆ.ಆರ್.ಪ್ರಕಾಶ್ ಬೆಳಕೋಡು ಹಾಲಸ್ವಾಮಿಗೌಡರು, ಹುಗುಡಿ ಹೆಚ್.ಎಂ.ವರ್ತೇಶ್‌ಗೌಡ, ದೀಪೋತ್ಸವ ಸಮಿತಿ ಅಧ್ಯಕ್ಷ ಎಲ್.ವೈ.ದಾನೇಶಪ್ಪಗೌಡ ಇನ್ನಿತರರು ಪಾಲ್ಗೊಂಡಿದ್ದರು.

ಪುಟ್ಟಯ್ಯ ಶಾಸ್ತ್ರಿ ವೇದಘೋಷ ಮಾಡಿದರು. ಹಾಲಸ್ವಾಮಿಗೌಡ ಸ್ವಾಗತಿಸಿದರು. ಹೆಚ್.ಎಂ.ವರ್ತೇಶ್‌ಗೌಡರ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here