ಮೊಬೈಲ್ ಟವರ್‌ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಮಾಡಿದ್ದ ಆರೋಪಿಗಳು ಅಂದರ್ !

0
1729


ಹೊಸನಗರ: ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಏರ್‌ಟೆಲ್ ಮೊಬೈಲ್ ಟವರ್‌ಗೆ ಅಳವಡಿಸಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀಳಂಬಿಯ ನಿವಾಸಿಗಳಾದ ಮಯೂರ (23) ಹಾಗೂ ಖಲೀಲ್ (32) ಬಂಧಿತ ಆರೋಪಿಗಳಾಗಿದ್ದು, ಸೆ.12 ರಂದು ಮೊಬೈಲ್ ಸಿಗ್ನಲ್ ಟವರ್‌ನಲ್ಲಿ ಅಳವಡಿಸಿದ್ದ 18 ಬ್ಯಾಟರಿಗಳನ್ನು ಆರೋಪಿಗಳು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಟವರ್ ಒಡೆತನ ಹೊಂದಿದ ಸಂಸ್ಥೆ ಸಲ್ಲಿಸಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಸಬ್ಇನ್ಸ್‌ಪೆಕ್ಟರ್ ನೀರರಾಜ್ ನರಲಾರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ಬ್ರಹ್ಮೇಶ್ವರದ ಮತ್ತೊಂದು ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಲು ಹೊಂಚು ಹಾಕಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here