ಮೊಬೈಲ್ ಫೋನ್ ಬಳಕೆಯಲ್ಲಿ ಜಾಗ್ರತೆ ವಹಿಸಿ | ವಿದ್ಯಾರ್ಥಿಗಳಿಗೆ ಅದೊಂದು ಶಸ್ತ್ರಾಸ್ತ್ರ, ಅದು ಮಾತನಾಡುವ ಸಾಧನ ಮಾತ್ರವಲ್ಲ, ಅದು ಕ್ರೈಂ ಸಾಧನ ! : ರವಿಕುಮಾರ್ ಕೆ.

0
385

ಹೊಸನಗರ : ಮೊಬೈಲ್ ಫೋನ್ ಬಳಕೆಯಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅಪಾಯಕಾರಿಯಾಗಿದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ ಕೆ. ಯವರಿಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಫೋನ್‌ನಿಂದ ಬಂದ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡುವುದು ಅಪಾಯಕಾರಿ ವ್ಯವಸ್ಥೆಯಾಗಿದೆ. ಮೊಬೈಲ್ ಫೋನ್ ವ್ಯವಸ್ಥೆಯನ್ನು ತಿರುಚುವ ಸಾಧನವಾಗಿದೆ. ಅಪರಾಧಿಕ ಮೆಸೇಜುಗಳನ್ನು ಗೊತ್ತಿಲ್ಲದೆ ಫಾರ್ವರ್ಡ್ ಮಾಡಿದರು ದಂಡ ಹಾಗೂ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಮೊಬೈಲ್ ಬಳಕೆಯಲ್ಲಿ ಬಳಸುವ ಆಸಕ್ತಿಯನ್ನು ಪಠ್ಯಪುಸ್ತಕಗಳಿಗೆ ತೋರಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಸಂದರ್ಭ ಈ ಸಂದರ್ಭದಲ್ಲಿ ಸಂವಿಧಾನ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕು ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠ ಗ್ರಂಥವೆಂದು ಪರಿಗಣಿಸಲಾಗುತ್ತಿದೆ ಭಾರತದ ಸಂವಿಧಾನ ಆಚರಣೆಗೆ ಬಂದು 70 ವರ್ಷ ಕಳೆದಿದೆ. ಯಾವುದೇ ಅರಾಜಕತೆಯುಂಟಾಗದಿರುವುದು ಭಾರತದ ಸಂವಿಧಾನದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಸಮಾರಂಭದ ಸಂಪನ್ಮೂಲ ವ್ಯಕ್ತಿಯಾದ ವಕೀಲರಾದ ಚಂದ್ರಪ್ಪನವರು ಮಾತನಾಡಿ, ಬಾಲ್ಯದಲ್ಲಿ ಕಲಿತ ವಿದ್ಯೆ ಕಲ್ಲಿನಲ್ಲಿ ಕೆತ್ತಿದಂತೆ. ನಂತರ ಕಲಿಯುವ ವಿದ್ಯೆ ಮರಳಿನಲ್ಲಿ ಬರೆದಂತೆ ಆದ್ದರಿಂದ ವಿದ್ಯಾರ್ಥಿಗಳು ನಮ್ಮ ಜೀವನವನ್ನು ನಡೆಸುವ ಪ್ರಮುಖ ಅಂಗವಾದ ವಿದ್ಯೆಯನ್ನು ಗಮನವಿಟ್ಟು ಕಲಿತು ಉತ್ತಮ ಭವಿಷ್ಯ ಹೊಂದಬೇಕೆಂದರು.

ಮಾನವ ಜನ್ಮ ಅತ್ಯುತ್ತಮವಾದದ್ದು ಹುಟ್ಟು ಆಕಸ್ಮಿಕ ಈ ಹುಟ್ಟನ್ನು ನಾವು ಸಾರ್ಥಕಗೊಳಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಉತ್ತಮವಾಗಿ ಅಭ್ಯಾಸಿಸಬೇಕು. ಹಳ್ಳಿಗಳಲ್ಲಿ ಈಗಲೂ ಜೀವಂತವಾಗಿರುವ ಅಸ್ಪೃಶ್ಯತೆ ತೊಡೆದುಹಾಕಬೇಕು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೂಲಭೂತ ಹಕ್ಕು ತಾರತಮ್ಯ ಹಾಗೂ ಕರ್ತವ್ಯಗಳ ಬಗ್ಗೆ ವಿವರಣೆ ನೀಡಿದರು.

ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಂದರ ರವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಗಣೇಶ ಐತಾಳ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಹೆಚ್ ಸ್ವಾಮಿರಾವ್ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕ ಗಣಪತಿ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here