ಮೋದಿ ಸಂವಿಧಾನವನ್ನ ಕೊಲ್ಲುವ ಕೆಲಸಕ್ಕೆ ಕೈಹಾಕಿದ್ದಾರೆ ; ರಮೇಶ್ ಕುಮಾರ್ ಗಂಭೀರ ಆರೋಪ

0
198

ತೀರ್ಥಹಳ್ಳಿ: ‘ಅಂದು ನಾಥೂ ರಾಮ್ ಗೋಡ್ಸೆ ಗಾಂಧಿ ಕಾಲಿಗೆ ನಮಸ್ಕರಿಸಿ ಗುಂಡು ಹಾರಿಸಿ ಕೊಂದ ರೀತಿಯಲ್ಲಿಯೇ ಮೋದಿ ಸಂಸತ್ ಗೆ ನಮಸ್ಕರಿಸಿ ಸಂವಿಧಾನವನ್ನ ಕೊಲ್ಲುವ ಕೆಲಸಕ್ಕೆ ಕೈಹಾಕಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಭಾಪತಿ ರಮೇಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಅವರು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.

‘ನೇರವಾಗಿ ಸಂವಿಧಾನ ಮುಟ್ಟುವ ಧೈರ್ಯ ಬಿಜೆಪಿಗರಿಗೆ ಇಲ್ಲ. ಹಾಗಾಗಿ ಬೇರೆ ಬೇರೆ ಮಾರ್ಗದಲ್ಲಿ ಅದರ ಶಕ್ತಿ ಕುಂದಿಸುವ ಕೆಲಸ ಮಾಡ್ತಿದ್ದಾರೆ. ಗಾಂಧಿಯನ್ನು ಕೊಂದಿದ್ದು ಯಾರು..? ನಾಥ್ ರಾಮ್ ಗೂಡ್ಸೆ ಕೊಂದ. ಗಾಂಧಿಯನ್ನು ಕೊಲ್ಲುವ ದಿನ ನಾಥ್ ರಾಮ್ ಗೂಡ್ಸೆ ಕಾಲಿಗೆ ನಮಸ್ಕರಿಸಿ ಗುಂಡು ಹಾರಿಸುತ್ತಾನೆ. ಮೋದಿ ಸಹ ಪ್ರಧಾನಿಯಾದಾಗ ಸಂಸತ್ತಿಗೆ ನಮಸ್ಕರಿಸಿ, ಸಂವಿಧಾನ ಕೊಲ್ಲುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳುವ ಮೂಲಕ ಗಂಭೀರ ಆರೋಪ ಮಾಡಿದರು. ಟ್ಯುಟೋರಿಯಲ್ ನಡೆಸುವವರು ಪಠ್ಯ ಪರಿಷ್ಕರಣೆ ಸಮಿತಿಯಲ್ಲಿದ್ದಾರೆ’ ಎಂದು ಮಾಜಿ ಸಭಾಪತಿ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಮಣ್ಣಿನಲ್ಲಿ ಕುವೆಂಪು ಜನ್ಮ ತಾಳಿದರು. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಜನಿಸಿದ ಊರು ಇದು. ಇಂದು ಅವರ ಹೆಸರು ಹೇಳಲು ಸಹ ನಾವು ಅರ್ಹತೆ ಕಳೆದುಕೊಳ್ಳುತ್ತಿದ್ದೇವೆ.ನಾಡಿನ ಹಲವು ಮೇಧಾವಿಗಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.

ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಇದ್ದವರು ಯಾರು..ಟ್ಯೂಟೋರಿಯಲ್ಸ್ ನಡೆಸುವವರು ಸಮಿತಿಯಲ್ಲಿದ್ದಾರೆ.ಸಂವಿಧಾನ ರಚನೆ ಮಾಡಲು ಈ ದೇಶದಲ್ಲಿ ಬಹಳ ಜನರಿದ್ದರು.ಆವಾಗ ಮೀಸಲಾತಿ ಇರಲಿಲ್ಲ. ಆದರೂ ಅಂಬೇಡ್ಕರ್ ಅವರನ್ನು ಕರಡು ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಯಾಕೆಂದ್ರೆ ಎಲ್ಲಾ ದೇಶದ ಸಂವಿಧಾನವನ್ನು ಅಂಬೇಡ್ಕರ್ ಅರ್ಥೈಸಿಕೊಂಡಿದ್ದರು.ಪ್ರಗತಿ ವಿರೋಧಿಗಳು, ‌ಮತ್ತು ಪ್ರಗತಿಪರರ ನಡುವೆ ನಡೆಯುತ್ತಿರುವ ಯುದ್ದ ಇದು. ಸಂವಿಧಾನ ನಿರರ್ಥಕಗೊಳಿಸುವುದು ಇವರ ಉದ್ದೇಶವಿದು. ಈ ಹಿಂದೆ ರಾಮನನ್ನು ಜಹಾಗೀರ್ ತೆಗೆದುಕೊಂಡಿದ್ದರು. ಈಗ ದೇಶ ಭಕ್ತಿಯನ್ನ ಜಹಗೀರ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಮಕ್ಕಳ ಮನಸ್ಸಿನಲ್ಲಿ ಹೆಡಗೆವಾರ್ ವಿಚಾರ ತುಂಬಿ ಏನು ಸಾಧಿಸಲು ಹೊರಟ್ಟಿದ್ದೀರಿ ಎಂದು ಬಿಜೆಪಿ ಸರಕಾರವನ್ನ ಕಟುವಾಗಿ ಟೀಕಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here