ಮ.ಟೈ. ಬಿಗ್ ಇಂಪ್ಯಾಕ್ಟ್: “ಮರುಜೀವ ಪಡೆದ ಕಟ್ಟುಕೋವಿ ಪ್ರಕರಣ – ಡಿ.ವೈ.ಎಸ್.ಪಿ ಯಿಂದ ತನಿಖೆ ಶುರು”

0
931

ರಿಪ್ಪನ್‌ಪೇಟೆ : ಕಳೆದ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ನಡೆದ ಕಟ್ಟುಕೋವಿ ಪ್ರಕರಣದಿಂದ ಕಾಲು ಕಳೆದುಕೊಂಡು ರೈತ ಯುವಕ ನ್ಯಾಯಕ್ಕಾಗಿ ರಾಜ್ಯ ಗೃಹ ಸಚಿವರನ್ನು ಮತ್ತು ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ ಪ್ರವೀಣ ಎಂಬುವವರಿಗೆ ಕೊನೆಗೂ ಪ್ರವೀಣನ ಪ್ರಕರಣಕ್ಕೆ ಮರುಜೀವ ಬಂದತಾಗಿದೆ ಎಂದು ಸಾರ್ವಜನಿಕವಾಗಿ ಕೇಳುಬರುತ್ತಿದೆ.

ಇತ್ತೀಚೆಗೆ ‘ಮಲ್ನಾಡ್ ಟೈಮ್ಸ್’ ನಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಜಾಗೃತಗೊಂಡು ತೀರ್ಥಹಳ್ಳಿ ಡಿ.ವೈಎಸ್.ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬೇಲಿಗೆ ಕಟ್ಚುಕೋವಿಯನ್ನು ಅಳವಡಿಸುವುದು ಪುರಾತನ ಕಾಲದಿಂದಲೂ ವಾಡಿಕೆಯಾಗಿದ್ದು ಇದರಿಂದ ಕಾಡುಪ್ರಾಣಿಗಳು ರಾತ್ರಿ ವೇಳೆ ಫಸಲು ಹಾನಿಗೊಳಿಸುತ್ತವೆ ಎಂಬ ಉದ್ದೇಶದಿಂದ ಇಂತಹ ಕೃತ್ಯವನ್ನು ನಡೆಸಿರುತ್ತಾರೆ. ಆದರೆ ಕಳೆದ ಡಿಸೆಂಬರ್‌ನಲ್ಲಿ ಪ್ರವೀಣ ಎಂಬ ಯುವಕ ತನ್ನ ಜಮೀನಲ್ಲಿನ ಬೆಳೆದಿದ್ದ ಬೆಳೆಯನ್ನು ರಾತ್ರಿ ಕಾಡು ಪ್ರಾಣಿಗಳು ತಿನ್ನುತ್ತಿದ್ದಾವೆಂದು ಓಡಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಟ್ಟುಕೋವಿಯಿಂದ ಗುಂಡು ಸಿಡಿದು ಕಾಲು ತುಂಡಾಗಿರುತ್ತದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ಪೊಲೀಸ್ ಇಲಾಖೆ ಮತ್ತು ಇತರ ಸ್ಥಳಿಯ ರಾಜಕೀಯ ಮುಖಂಡರ ಕೈವಾಡದಿಂದ ಮುಚ್ಚಿ ಹೋಗುತ್ತಿದ್ದ ಪ್ರಕರಣಕ್ಕೆ ಮರುಜೀವ ನೀಡುವ ಮೂಲಕ ಕಾಲು ಕಳೆದುಕೊಂಡ ನತದೃಷ್ಟ ಪ್ರವೀಣನಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯದ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಮುಂದಾಗಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಾರೆ.

ಈ ಪ್ರಕರಣದ ಕುರಿತು ಯಾವುದೆ ಪ್ರತಿಷ್ಠಿತ ನಾಯಕ ಮುಖಂಡರಾಗಿದ್ದರು ಕೈ ಬಿಡುವ ಪ್ರಶ್ನೆಯೆ ಇಲ್ಲ ಎಂದು ಆರಗ ಜ್ಙಾನೇಂದ್ರ ಅವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಂತಾಗಿ ಪ್ರಕರಣದಲ್ಲಿ ಭಾಗಿಗಳಾಗಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ಇಲಾಖೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಇನ್ನಾದರು ಪೊಲೀಸ್ ಇಲಾಖೆ ಎಂತಹ ದೊಡ್ಡ ವ್ಯಕ್ತಿಯಾಗಿದ್ದರು ಇಂತಹ ಹೀನ ಕೃತ್ಯದಲ್ಲಿ ತೊಡಗಿರುವ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ಮುಂದಾಗಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

ನಿಯೋಗ ಭೇಟಿ:

ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಕಟುಕೋವಿ ಪ್ರಕರಣದಿಂದ ಕಾಲು ಕಳೆದುಕೊಂಡು ನಿರಾಶ್ರಿತನಾಗಿದ್ದ ಪ್ರವೀಣನ ಪರವಾಗಿ ರಾಜ್ಯದ ಗೃಹ ಸಚಿವ ಆರಗ ಜ್ಙಾನೇಂದ್ರ ಮತ್ತು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ಬಳಿ ಬಿ.ಜೆ.ಪಿ ಮುಖಂಡರಾದ ಎಂ.ಎಸ್.ಉಮೇಶ್ ಮಾಣಿಕೆರೆ ಮತ್ತು ಕೆ.ವಿ.ಲಿಂಗಪ್ಪ ಕಗ್ಗಲಿ, ಕುಷನ್ ದೇವರಾಜ್, ವಿಜಯ ಕೆರೆಹಳ್ಳಿ, ಪ್ರಕಾಶ್ ದೂನ ಇನ್ನಿತರರಾದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಆರೋಪಿಯ ವಿರುದ್ದ ದೂರು ದಾಖಲಿಸುವಲ್ಲಿ ಪಿಎಸ್‌ಐ ನಿರ್ಲಕ್ಷ್ಯ: ಕಟ್ಟುಕೋವಿಯ ಗುಂಡು ಸಿಡಿದು ರೈತನ ಬಲಗಾಲು ಪೀಸ್ ಪೀಸ್..!

ಕಟ್ಟುಕೋವಿ ಗುಂಡು ಸಿಡಿದ ಪ್ರಕರಣ: ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಗೃಹ ಸಚಿವರಿಂದ ಭರವಸೆ

ಜಾಹಿರಾತು

LEAVE A REPLY

Please enter your comment!
Please enter your name here