ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಹಳ್ಳಾಡಿ ಜಯರಾಮ ಶೆಟ್ಟಿಯವರಿಗೆ ಸನ್ಮಾನ

0
459

ಹೊಸನಗರ: ತಾಲೂಕಿನ ನಾಗರಕೊಡಿಗೆ ಗ್ರಾಮದ ತ್ರಿಣಿವೆ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಗೀತಾ ಜಯರಾಮಶೆಟ್ಟಿ ಇವರ ಮನೆ ಅಂಗಳದಲ್ಲಿ ದೀಪದರ್ಪಣ ಎಂಬ ಯಕ್ಷಗಾನ ಕಥಾಪ್ರಸಂಗ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಹಟ್ಟಿಯಂಗಡಿ ಯಕ್ಷಗಾನ ಮೇಳದ ಹಿರಿಯ ಕಲಾವಿದ, ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಹಳ್ಳಾಡಿ ಜಯರಾಮ ಶೆಟ್ಟಿ ಅವರನ್ನು ನಾಗರಕೊಡಿಗೆ ವಲಯದ ಬಂಡರ ಯಾನೆ ನಾಡವರ ಸಂಘದ ಕಾರ್ಯದರ್ಶಿ, ಕೊಡುಗೈದಾನಿ ಎಂದೇ ಬಿಂಬಿತರಾಗಿರುವ ತ್ರಿಣಿವೆ ಜಯರಾಮ ಶೆಟ್ಟಿ ಅವರು ಆತ್ಮೀಯವಾಗಿ ಸನ್ಮಾನಿಸಿದರು.

ಹೊಸನಗರ ತಾಲೂಕು ಬಂಟರ ಸಂಘದ ಗೌರವಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ, ಕೋಣಂದೂರು ತಾಲೂಕು ಪಂಚಾಯತಿ ಮಾಜಿ ಸದಸ್ಯ ಮೋಹನ್ ಶೆಟ್ಟಿ, ಅರಳಸುರಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್.ಆರ್. ರಂಗೇಗೌಡ, ತ್ರಿಣಿವೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷ ಕೃಷ್ಣಮೂರ್ತಿ ತೊಗರೆ, ನಾಗರಕೊಡಿಗೆ ತಬಲವಾದಕ ಪ್ರಭಾಕರ್, ಮೇಳದ ವ್ಯವಸ್ಥಾಪಕ ರಂಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here