ಯಗಟಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆ

0
174

ಕಡೂರು: ಗ್ರಾಮೀಣ ಸಮಸ್ಯೆಗಳು ಮತ್ತು ನಾಗರೀಕರಿಗೆ ಸೌಲಭ್ಯ ಕಲ್ಪಿಸುವ ಪರಮೋಚ್ಛ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ಇದೆ ಅದರ ಸದುಪಯೋಗವನ್ನು ಗ್ರಾಮ ಪಂಚಾಯಿತಿ ಆಡಳಿತವು ಮಾಡಿಕೊಳ್ಳಬೇಕೆಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

ತಾಲೂಕಿನ ಯಗಟಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇದರ ಅನುದಾನದ ಅಡಿಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ನಾಡ ಕಚೇರಿಯ ನೂತನ ಕಟ್ಟಡಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಗ್ರಾಮ ಪಂಚಾಯಿತಿಗಳಿಗೆ ಅನೇಕ ಯೋಜನೆಗಳನ್ನು ನೀಡಿದ್ದು ಅಭಿವೃದ್ದಿಗೆ ಸಾಕಷ್ಟು ಅನುದಾನ ಬಂದಿದೆ. ಸದಸ್ಯರು ಒಟ್ಟಾಗಿ ಇದ್ದುಕೊಂಡು ಗ್ರಾಮದ ಜನರ ವಿಶ್ವಾಸ ಪಡೆದು ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅಭಿವೃದ್ಧಿಯತ್ತ ಸಾಗಬೇಕು ಆಗ ಮಾತ್ರ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ತಾವು ಶಾಸಕರಾದ ನಂತರ ಪ್ರಾಮಾಣಿಕವಾಗಿ ಗ್ರಾಮೀಣ ಭಾಗಗಳ ರಸ್ತೆ, ಕೆರೆ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣ, ಬ್ಯಾರೇಜ್ ಮತ್ತಿತರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಉದಾಹರಣೆಗೆ ಯಗಟಿ ಕರೆಯೆ ಸಾಕ್ಷಿಯಾಗಿದೆ. ನಿಮ್ಮೂರಿನ ರಸ್ತೆಗಳೇ ನಿದರ್ಶನವಾಗಿವೆ ಎಂದರು.

ಗ್ರಾಮದ ಅಭಿವೃದ್ದಿಗೆ ಮುಂದೆಯೂ ಇದೇ ರೀತಿ ಶ್ರಮಿಸುತ್ತೇನೆ ಎಂಬ ಭರವಸೆ ನೀಡಿದರು.

ಜಿ. ಪಂ. ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ ಯಗಟಿ ಜಿ. ಪಂ. ವ್ಯಾಪ್ತಿ ತಾಲೂಕಿನಲ್ಲಿಯೇ ಬಹುದೊಡ್ಡ ಪಂಚಾಯಿತಿಯಾಗಿರುವುದರಿಂದ ಮೂಲ ಸೌಲಭ್ಯಗಳನ್ನು ಶಾಸಕರು ಮಾಡಿದ್ದು ಉಳಿದ ಕೆಲಸಗಳನ್ನೂ ಸಹ ಆದಷ್ಟು ಬೇಗ ಮಾಡಲಿ ಎಂದು ಆಗ್ರಹಿಸಿದರು.

ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಂಗಾಧರ್ ಮಾಹಿತಿ ನೀಡಿ ನಾಡ ಕಚೇರಿ ಕಟ್ಟಡಕ್ಕೆ 18.50 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿದೆ, ನೂತನ ಗ್ರಾಮ ಪಂಚಾಯಿತಿ ಕಟ್ಟಡವು 23.20 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿದೆ ಇದೇ ರೀತಿ ಕ್ಷೇತ್ರದಲ್ಲಿ ನಾಡಕಚೇರಿ ಕಟ್ಟಡಗಳು ಹಿರೇನಲ್ಲೂರು, ಸಿಂಗಟಗೆರೆಗಳಲ್ಲಿ ನಿರ್ಮಾಣವಾಗಿದೆ ಎಂದರು.

ಯಗಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್. ಜಿ. ಮಂಜುನಾಥ್ ಯಗಟಿ ಗ್ರಾಮಕ್ಕೆ ಶಾಸಕರು ನೀಡಿರುವ ಅಭಿವೃದ್ಧಿ ಕುರಿತು ಮಾತನಾಡಿದರು ಹಾಗೂ ಮತ್ತಷ್ಟು ಬೇಡಿಕೆಗಳನ್ನು ನೀಡಿದರು. ಉಪಾಧ್ಯಕ್ಷೆ ಭಾರತಿಬಸವರಾಜು, ಸದಸ್ಯರಾದ ವೈ. ಹೆಚ್. ಮೂರ್ತಿ, ಆರ್. ಶಂಕರನಾಯ್ಕ, ವೈ. ಸಿ. ಗೋವಿಂದಪ್ಪ, ವೈ. ಸಿ. ಸತೀಶ್, ಸುನೀಲ್, ಸಾಕಮ್ಮ ಈರಪ್ಪ, ಪಾರ್ವತಿಬಾಯಿ ಗೋವಿಂದನಾಯ್ಕ, ಎಂ. ಗಾಯಿತ್ರಿ ಆರ್. ರವಿಕುಮಾರ್, ಕಲಾವತಿ ಎಂ. ವೆಂಕಟೇಶ್, ಜ್ಯೋತಿವಿಶ್ವನಾಥ್ ಹಾಗೂ ಗ್ರಾಮದ ಹಿರಿಯ ಮುಖಂಡರಾದ ವೈ. ಕೆ. ರಂಗಪ್ಪ, ಯಗಟಿ ರವಿಪ್ರಕಾಶ್, ಬಿಜೆಪಿ ಶಕ್ತಿ ಕೇಂದ್ರದ ಯಗಟಿ ಕಿರಣ್ ಪ್ರಭು, ದೇವರಾಜ್(ಚಿನ್ನು), ತಹಸೀಲ್ದಾರ್ ಜೆ. ಉಮೇಶ್, ಇಓ ಡಾ. ದೇವರಾಜನಾಯ್ಕ, ಕಂದಾಯ ಇಲಾಖೆಯ ಮೂರ್ತಿ, ಪಿಎಸ್‌ಐ ಶಶಿಕುಮಾರ್ ಗ್ರಾಮ ಪಂಚಾಯಿತಿಯ ಹೆಚ್. ಅಣ್ಣಯ್ಯ, ಆರ್. ಕೃಷ್ಣಯ್ಯ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here