ಶಿವಮೊಗ್ಗ: ಸಾರಿಗೆ ಕಾರ್ಮಿಕರು ತಮ್ಮ ಪ್ರತಿಷ್ಟೆಯನ್ನು ಕೈಬಿಟ್ಟು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು ಎಂದು ಶಾಸಕ ಆಯನೂರು ಮಂಜುನಾಥ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆರ್ಥಿಕ ಸ್ಥಿತಿ ಕುಂಠಿತವಾಗಿರುವುದರಿಂದ ಪ್ರತಿಷ್ಟೆಯನ್ನು ಬದಿಗಿಟ್ಟು ಕೆಲಸಕ್ಕೆ ಹಾಜರಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಸರ್ಕಾರದ ಅಡಿಯಲ್ಲಿ 70 ಕ್ಕೂ ಹೆಚ್ಚು ನಿಗಮಗಳು ಬರುವುದರಿಂದ 6ನೇ ವೇತನ ಆಯೋಗದ ಶಿಫಾರಸ್ಸನ್ನು ಸಾರಿಗೆ ನೌಕರರಿಗೆ ಜಾರಿ ಮಾಡಿದರೆ ಉಳಿದ ಅಷ್ಟು ನಿಗಮದ ನೌಕರರಿಗೂ ಅದು ಅನ್ವಯವಾಗುವ ಸಂಭವವಿದೆ. ಈ ಹಿನ್ನಲೆಯಲ್ಲಿ ವಸ್ತುಸ್ಥಿತಿಯನ್ನು ಅರಿತು ಕಾರ್ಮಿಕರು ಮುಷ್ಕರವನ್ನು ಹಿಂಪಡೆಯುವುದು ಸೂಕ್ತ ಎಂದರು.
ಕಾರ್ಮಿಕ ಮುಖಂಡರ ಹೆಜ್ಜೆ ತಪ್ಪಾದರೆ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಕೋಡಿಹಳ್ಳಿ ಚಂದ್ರಶೇಖರ್ರನ್ನು ನಂಬಿದರೆ ಸಾರಿಗೆ ನೌಕರರಿಗೆ ಚೋಂಬು ಗತಿಯಾಗುತ್ತದೆ. ಕಾರ್ಮಿಕರು ಎಚ್ಚರವಹಿಸಬೇಕೆಂದು ಕಿವಿ ಮಾತು ಹೇಳಿದ ಅವರು ಸಾರಿಗೆ ನೌಕರರ ಹೋರಾಟಕ್ಕೆ ಯಾವುದೇ ಆಕ್ಷೇಪವಿಲ್ಲ. ಅವರು ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದರು.
ಕೋಡಿಹಳ್ಳಿಯವರಿಗೆ ಕಾರ್ಮಿಕ ಹೋರಾಟದ ಅನುಭವವಿಲ್ಲ. ಹಿಂದೆ ಮಹರಾಷ್ಟ್ರದಲ್ಲಿ ಬಟ್ಟೆಗಿರಣಿ ಕಾರ್ಮಿಕರು 15 ತಿಂಗಳು ಇದೇ ರೀತಿ ಪಟ್ಟುಹಿಡಿದು ಪ್ರತಿಭಟನೆ ಮಾಡಿದ್ದರಿಂದ ಮಿಲ್ಗಳು ಬಂದಾಗಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬರಬೇಕಾಯಿತು. ಉದ್ಯೋಗ ಕಳೆದುಕೊಂಡರು ದತ್ತ ಸಾವಂತ್ ಎಂಬ ಹೋರಾಟ ಗಾರನ ಮಾತುಕೇಳಿ ಕಾರ್ಮಿಕರ ಭವಿಷ್ಯ ಕತ್ತಲಲ್ಲಿ ಮುಳುಗಿಹೋಯಿತು. ಹಾಗಾಗುವುದು ಬೇಡ ಈಗಾಗಲೇ ಕಾರ್ಮಿಕ ಸಂಘಟನೆ ಕಾನೂನು ಬಾಹೀರವಾಗಿ ನೋಟಿಸ್ಕಿಂತ ಮುಂಚೆಯೇ ಪ್ರತಿಭಟನೆ ಪ್ರಾರಂಭಮಾಡಿದ್ದರಿಂದ ಒಂದು ತಪ್ಪು ನಡೆದುಹೋಗಿದೆ ಎಂದರು.
ಪ್ರತಿಷ್ಟೆ ಮತ್ತು ಬಿಗಿ ನಿಲುವು ಬೇಡ ಹೋರಾಟದಲ್ಲಿ 2 ಹೆಜ್ಜೆ ಹಿಂದೆ ಇಡುವುದು ಕೂಡ ತಂತ್ರಗಾರಿಕೆಯ ಭಾಗವಾಗಿದೆ. ಈಗಾಗಲೇ ಸಾರಿಗೆ ನೌಕರರ 8 ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಮಾತುಕತೆಗೆ ಸಿ.ಎಂ. ಕರೆದಾಗ ಹೋಗಿ ಮಾತುಕತೆ ಮೂಲಕವೇ ಬಗೆ ಹರಿಸಿಕೊಳ್ಳುವುದು ಒಳಿತು. ನಾನು ರಾಜಕೀಯ ಪಕ್ಷದ ಶಾಸಕನಾಗಿ ಅಥವಾ ಸರ್ಕಾರದ ಪರವಾಗಿ ಮಾತನಾಡುತ್ತಿಲ್ಲ. ಕಾರ್ಮಿಕ ಹೋರಾಟದಿಂದ ಬಂದ ಕಾರಣ ಅನುಭವದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.
ಒಂದು ವೇಳೆ ಲಾಕ್ಡೌನ್ ಆದಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು. ಯಾರು ಈಗ ಕೆಲಸಕ್ಕೆ ಹಾಜರಾಗಿದ್ದರೋ ಅವರಿಗೆ ಮಾತ್ರ ಕಾನೂನಿನ ಪ್ರಕಾರ ಪರಿಗಣಿಸಲಾಗುತ್ತದೆ. ನಿಮ್ಮ ಚಳವಳಿ ಏನಿದ್ದರೂ ತಟ್ಟೆ ಲೋಟಕ್ಕೆ ಸೀಮಿತವಾಗಿರಲಿ. ಯಾರದೋ ಮಾತುಕೇಳಿ ಎಡವಿದರೆ ಸಾರಿಗೆ ಕಾರ್ಮಿಕರಿಗೆ ಖಂಡಿತವಾಗಿಯೂ ಚೊಂಬೇ ಗತಿ ಎಂದರು.
ಈ ಸಂದರ್ಭದಲ್ಲಿ ನಾಗರಾಜ್ ಉಪಸ್ಥಿತರಿದ್ದರು.
Related
ಆಯನೂರು ಮಂಜುನಾಥ ಸಾಹೇಬ್ರೆ
ಕಾರಿಗನೂರು ಚಂದು ಗತಿಯಾದರೆ
ಬೇರೆ ಕಡೆ ಹೋಗಿ ಕೂಲಿಮಾಡಿ ಬದುಕುತ್ತೇವೆ
ನಿಮ್ಮ ಬಗ್ಗೆ ಯೋಚನೆ ಮಾಡಿಕೊಳ್ಳಿ.
ಸಾಕು.