ಯಾರು ಕಾನೂನನ್ನು ಗೌರವಿಸುತ್ತಾರೊ ಅವರಿಗೆ ಕಾನೂನಿನ ರಕ್ಷಣೆ ಸದಾ ಲಭ್ಯ ; ಪಿಎಸ್ಐ ನೀರರಾಜ್ ಬಿ

0
549

ಹೊಸನಗರ : ಯಾರು ಕಾನೂನನ್ನ ಗೌರವಿಸುತ್ತಾರೊ ಅವರಿಗೆ ಕಾನೂನಿನ ರಕ್ಷಣೆ ಸದಾ ಲಭ್ಯ ಇರುತ್ತದೆ. ಆದ ಕಾರಣ ಕಾನೂನು ಉಲ್ಲಂಘನೆ ಮಾಡದೆ ಕಾನೂನು ಪಾಲನೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕೆಂದು ಹೊಸನಗರ ಆರಕ್ಷಕ ಠಾಣೆಯ ನೂತನ ಪಿಎಸ್ಐ ನೀರರಾಜ್ ಬಿ ನರಲಾಲ್ ಸಲಹೆ ನೀಡಿದರು.

ಅವರು ಇಂದು ಪಟ್ಟಣದ ಪ್ರತಿಷ್ಠಿತ ಸಾರ್ವಜನಿಕ ಸೇವಾ ಸಂಸ್ಥೆ ಸ್ಫೋರ್ಟ್ಸ್ ಅಸೋಸಿಯೇಶನ್ ಅವರು ತಮ್ಮನ್ನ ಗೌರವಿಸುವುದಕ್ಕಾಗಿ ಅಭಿನಂದಿಸಿ, ನಾನು ಉತ್ತರ ಕರ್ನಾಟಕದವನು ಮಲೆನಾಡಿನ ಸೊಬಗಿನ ವಾತಾವರಣ ಅನುಭವಿಸಲು ಶಿವಮೊಗ್ಗ ಜಿಲ್ಲೆಗೆ ಬಂದಿದ್ದೇನೆ. ಇಲ್ಲಿ ನನ್ನ ಸೇವೆ ದಿನದ 24 ಗಂಟೆಯೂ ಲಭ್ಯವಿದೆ. ಯಾವುದೇ ಸಮಸ್ಯೆ ಇದ್ದರೂ ಯಾರೇ ಆಗಲಿ ನೇರವಾಗಿ ಬಂದು ಸಂಪರ್ಕಿಸಿ. ನಮ್ಮ ವ್ಯಾಪ್ತಿಯ ಯಾವುದೇ ಕೆಲಸ ಕಾರ್ಯಗಳಿದ್ದರೂ ನಿಮ್ಮ ಸೇವೆಗೆ ಇಲಾಖೆ ಸದಾ ಸಿದ್ಧವಾಗಿದೆ. ಏನೇ ಸಮಸ್ಯೆ ಬಂದರೂ ಮುಜುಗರ ಪಡದೆ ನೇರವಾಗಿ ಸಂಪರ್ಕಿಸುವಂತೆ ಅವರು ಸಾರ್ವಜನಿಕರನ್ನು ಕೋರಿದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗುಬ್ಬಿಗ ಅನಂತರಾವ್ ಅವರು, ನೂತನ ಪಿಎಸ್ಐ ನೀರರಾಜ ಬಿ ನರಲಾಲ್ ರವರಿಗೆ ನೆನಪಿನ ಕಾಣಿಕೆ ನೀಡಿ ಸಾರ್ವಜನಿಕ ಸೇವೆಗೆಂದು ಸಂಸ್ಥೆಯಿಂದ ಎರಡು ಬ್ಯಾರಿಕೇಡ್ಗಳನ್ನು ನೀಡಿದರು.

ಬಿ.ಎಸ್ ಸುರೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿದೆ ಸಂಸ್ಥೆಯಿಂದ ಮಕ್ಕಳಿಗಾಗಿ ಆಟೋಪಕರಣ ನಿರ್ಮಿಸಲಾಗಿದೆ. ಜಿಮ್, ಸಂಗೀತ ಶಾಲೆ ಸಾರ್ವಜನಿಕರಿಗಾಗಿ ನಡೆಸಲಾಗುತ್ತಿದೆ. ರಾಜ್ಯಮಟ್ಟದ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಳ್ಳುತ್ತಿದೆ. ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿ ಆಸಕ್ತರಿಗೆ ನೆರವು ನೀಡಲಾಗುತ್ತಿದೆ. ಅಲ್ಲದೆ ಪಟ್ಟಣದ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಉತ್ತಮಶಿಕ್ಷಣ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಈ ಸಮಾರಂಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಬಿ. ಪರಮೇಶ್ವರ್ ರಾವ್, ಉಮೇಶ್ ಕಂಚುಗಾರ, ಹೆಚ್.ಬಿ ಕಲ್ಯಾಣಗೌಡ, ಬಿ.ಎಂ ಶ್ರೀಧರ್, ಎಂ.ವಿ ಸುರೇಶ್, ಜಿ.ಕೆ ರಾಮಚಂದ್ರ ಮುರಾರ್ಜಿ, ಕೆಎಸ್ ಜಯಕುಮಾರ್ ಕೆ, ಸುರೇಶ್ ಕುಮಾರ್, ಕೆ.ಬಿ ಮಂಜುನಾಥ್, ಸತ್ಯನಾರಾಯಣ ಮೊದಲಾದವರು ಪಾಲ್ಗೊಂಡಿದ್ದರು.

ಬಿ.ಆರ್ ಪ್ರಭಾಕರ್ ಸ್ವಾಗತಿಸಿದರು. ಎಂ.ಪಿ ಸುರೇಶ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here