ಯಾವುದೇ ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಸಾರಥಿಯ ಗುಣ ನಡತೆ ಉತ್ತಮವಾಗಿರಬೇಕು: ಮೂಲೆಗದ್ದೆ ಶ್ರೀಗಳು

0
472

ಹೊಸನಗರ: ಯಾವುದೇ ಸಂಘ ಸಂಸ್ಥೆಗಳು ತಮ್ಮ ವ್ಯಾವಹಾರ ವ್ಯಾಪಾರ ಉತ್ತಮ ರೀತಿಯಲ್ಲಿ ನಡೆಸಬೇಕೆಂದರೆ ಆ ಸಂಸ್ಥೆಯ ಸಾರಥಿಯ ಗುಣ ನಡತೆ ಉತ್ತಮ ರೀತಿಯಲ್ಲಿರಬೇಕೆಂದು ಹೊಸನಗರ ತಾಲ್ಲೂಕು ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.

ಹೊಸನಗರದ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಅಡಿಕೆ ಮಂಡಿಗೆ ಮೂಲೆಗದ್ದೆ ಸ್ವಾಮೀಜಿಯವರು ಭೇಟಿ ನೀಡಿ ಮಾತನಾಡಿ,ಸಂಸ್ಥೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಉತ್ತಮ ಗ್ರಾಹಕರನ್ನು ಹೊಂದಿ ಮುಂದಿನ ದಿನದಲ್ಲಿ ಸಂಸ್ಥೆಯು ಎಲ್ಲರಿಗೂ ದಾರಿ ದೀಪವಾಗಿ ಬೆಳೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಾರದ ವಿವಿದ್ದೋದೇಶ ಸೌಹಾರ್ದ ಸಹಕಾರಿ ಮಂಡಿಯ ವ್ಯವಸ್ತಾಪಕ ಶಮಂತ್ ಎನ್.ಆರ್, ರಂಜಿತ್ ಡಿ.ಎನ್, ರಕ್ಷಿತಾ ಜಿ.ಎಸ್, ಭಾರ್ಗವಿ ಆರ್, ವಿದ್ಯಾ ಕೆ, ಜಬಗೋಡು ಹಾಲಪ್ಪ ಗೌಡ, ದರ್ಶನ್ ಗೌಡ, ಸಾತ್ವಿಕ್, ಚಿದಾನಂದ ಗೌಡ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸಂಘಟಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here