ಯಾವುದೇ ಸಾರ್ವಜನಿಕ, ಧಾರ್ಮಿಕ, ಮದುವೆ, ಶುಭ ಕಾರ್ಯಗಳಿಗೆ ತಾಲ್ಲೂಕು ಆಡಳಿತದ ಪಾಸ್ ಕಡ್ಡಾಯ ಇಲ್ಲವಾದಲ್ಲಿ ಕೇಸ್ ಗ್ಯಾರಂಟಿ: ತಹಶೀಲ್ದಾರ್ ವಿ.ಎಸ್. ರಾಜೀವ್

0
1384

ಹೊಸನಗರ: ಸರ್ಕಾರದ ಸುತ್ತೋಲೆ, ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೊಸನಗರ ತಾಲ್ಲೂಕಿನಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ಮದುವೆ ಇತ್ಯಾಧಿಗಳನ್ನು ನಡೆಸಲು ತಾಲ್ಲೂಕು ಆಡಳಿತದ ಪಾಸ್ ಕಡ್ಡಾಯವಾಗಿದ್ದು ಸಭೆ, ಸಮಾರಂಭ ಶುಭ ಕಾರ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವವರು ಸರ್ಕಾರದ ಕಟ್ಟುನಿಟ್ಟಿನ ಕಾನೂನುಗಳನ್ನು ಮಾರ್ಗಸೂಚಿಗಳಿಗೆ ಅನುಗುಣವಾಗಿ ತಾಲ್ಲೂಕು ಕಛೇರಿಯಿಂದ ಪಾಸ್ ಪಡೆದು ಕಾರ್ಯಕ್ರಮಗಳನ್ನು ನಡೆಸಬೇಕೆಂದು ಹೊಸನಗರದ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ತಿಳಿಸಿ, ಯಾವುದೇ ಅನಧಿಕೃತವಾಗಿ ಸಭೆ ಸಮಾರಂಭ ಧಾರ್ಮಿಕ ಕಾರ್ಯಕ್ರಮ ಹಾಗೂ ಮದುವೆಯಂತಹ ಕಾರ್ಯಕ್ರಮಗಳನ್ನು ನಡೆಸಿದ್ದೆ ಆದಲ್ಲಿ ಆಯೋಜಕರ ಮೇಲೆ ಕೇಸು ಹಾಕುವುದರ ಜೊತೆಗೆ ಸಭೆ ಸಮಾರಂಭ ನಡೆಸುವ ಕಲ್ಯಾಣ ಮಂಟಪದ ಮೇಲೆ ಕೇಸು ಹಾಕಲಾಗುವುದು ಎಂದು ತಿಳಿಸಿದರು.

ಹೊಸನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಈ ವಿಷಯ ಅವರು ತಿಳಿಸಿದರು.

ಜಾತ್ರೆಗಳನ್ನು ನಡೆಸುವ ಹಾಗಿಲ್ಲ:

ಸರ್ಕಾರ ಮಾರ್ಗಸೂಚಿ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೆ ಹೊಸನಗರ ತಾಲ್ಲೂಕಿನಲ್ಲಿ ಯಾವುದೇ ಜಾತ್ರೆಗಳನ್ನು ಮಾಡುವ ಹಾಗಿಲ್ಲ. ಮದುವೆ ಸಮಾರಂಭಗಳನ್ನು ನಡೆಸುವವರು 100 ಜನರಿಗೆ ಮಾತ್ರ ಅವಕಾಶವಿದ್ದು ಅದನ್ನು ಆಯೋಜಕರು ತಾಲ್ಲೂಕು ಕಛೇರಿಯಿಂದ ಪಾಸ್ ಪಡೆದು ಮದುವೆ ಸಮಾರಂಭಕ್ಕೆ ಹೋಗಬೇಕೇ ಹೊರತು ಪಾಸ್ ಇಲ್ಲದವರು ಮದುವೆ ಸಮಾರಂಭಗಳಲ್ಲಿ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಲ್ಯಾಣ ಮಂಟಪ್ಪಕ್ಕೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.

ಮಾಸ್ಕ್-ಸಾಮಾಜಿಕ ಅಂತರ ಕಡ್ಡಾಯ:

2020 ಮಾರ್ಚ್22ರಿಂದ ಕೊರೊನಾ ದೇಶದಲ್ಲಿ ಆರ್ಭಟ ಹೆಚ್ಚಾಗಿದ್ದು ಅಲ್ಲಿಂದ ಇಲ್ಲಿಯವರೆವಿಗೂ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸಬೇಕು ಎಂದು ಹೇಳುತ್ತಾ ಬಂದರೂ ಸಾರ್ವಜನಿಕರು ಸರ್ಕಾರದ ಆದೇಶ ಪಾಲಿಸದೇ ತಮ್ಮ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಿದ್ದಾರೆ ಈಗ ದೇಶದಲ್ಲಿ ಕೊರೊನಾ 2ನೇ ಅಲೆ ಆರ್ಭಟಿಸುತ್ತಿದ್ದು ಇಡೀ ದೇಶವೆ ಅಲ್ಲೋಲ್ಲ ಕಲ್ಲೋಲವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಓಡಾಟ ನಡೆಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವ್ಯವಹರಿಸಬೇಕು ಇದರಿಂದ ದೇಶದಲ್ಲಿ ಕೊರೊನಾ ಓಡಿಸಲು ಸಹಕಾರಿಯಾಗಲಿದ್ದು ಇಲ್ಲವಾದರೆ ಕೊರೊನಾ 2ನೇ ಅಲೆ ದೇಶದಲ್ಲಿ ಹೆಚ್ಚಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಲಿದೆ. ಸರ್ಕಾರದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಿರಿ ಇಲ್ಲವಾದರೆ ದಂಡ ಹಾಕುವುದು ಅನಿವಾರ್ಯವೆಂದರು.

ಜಾಹಿರಾತು

LEAVE A REPLY

Please enter your comment!
Please enter your name here