ಯುಗಾದಿ ದಿನವೇ ಈ ಮನೆಗೆ ಆವರಿಸಿದ ಸೂತಕ‌ ; ವಿಷ ಕುಡಿದು ನವ ವಿವಾಹಿತೆ ಸಾವು !!

0
1065

ಮೂಡಿಗೆರೆ: ರಾಜ್ಯಾದ್ಯಂತ ಬಹುತೇಕ ಎಲ್ಲರೂ ಯುಗಾದಿಯ ಸಂಭ್ರಮದಲ್ಲಿ ಮುಳುಗಿದ್ದರೆ, ಇಲ್ಲೊಂದು ಕಡೆ ಹಬ್ಬದಂದೇ ಮನೆಗೆ ಸಾವಿನ ಸೂತಕ ಆವರಿಸಿದೆ. ನವವಿವಾಹಿತೆಯೊಬ್ಬಳು ಯುಗಾದಿ ದಿನವಾದ ಇಂದು ಸಾವಿಗೀಡಾಗಿದ್ದಾಳೆ.

ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದ ಗಾನವಿ (27) ಸಾವಿಗೀಡಾದ ಯುವತಿಯಾಗಿದ್ದು, ಎನ್.ಆರ್. ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿ ಕಳೆದ ವರ್ಷವಷ್ಟೇ ನಂದಿತ್ ನನ್ನ ಮದುವೆಯಾಗಿದ್ದರು. ಇಂದು ಪತಿಯ ಮನೆಯಲ್ಲಿ ಸಂಭವಿಸಿದ ಗಾನವಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೇಗೌಡ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಹೊರಿಸಲಾಗಿದೆ. ಗಾನವಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ.

ಗಾನವಿ ತಂದೆ ಲೋಕಪ್ಪ ಗೌಡ ಇತ್ತೀಚೆಗಷ್ಟೇ ಅಳಿಯನ ಕಡೆಯವರಿಗೆ 2 ಲಕ್ಷ ರೂ. ಕೊಟ್ಟಿದ್ದರು ಎನ್ನಲಾಗಿದೆ. ಅದಾಗ್ಯೂ ಅಲ್ಲಿ ಗಾನವಿ ಮೇಲೆ ಹಲ್ಲೆ ನಡೆದಿದ್ದು, ಅದನ್ನು ಆಕೆ ರೆಕಾರ್ಡ್ ಮಾಡಿಟ್ಟುಕೊಂಡಿದ್ದು, ಈಗ ವಿಷ ಕುಡಿಸಿ ಸಾಯಿಸಿದ್ದಾರೆ ಎಂದು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here