ಯುಗಾದಿ ಹಬ್ಬದಂದು ಹೊಸನಗರದಲ್ಲಿ ಸುರಿದ ಭಾರಿ ಮಳೆ

0
779

ಹೊಸನಗರ : ಹಿಂದೂಗಳ ಹೊಸವರ್ಷ ಪ್ಲವನಾಮ ಸಂವತ್ಸರದ ಪ್ರಥಮ ದಿನವಾದ ಯುಗಾದಿಯಂದು ಮಧ್ಯಾಹ್ನ ಗುಡುಗು ಸಹಿತ ಬಿದ್ದ ಅಶ್ವಿನಿ ಮಳೆ ಬಿಸಿಲ ಬೇಗೆಯಿಂದ ತತ್ತರಿಸಿದ ಮಲೆನಾಡಿನ ಜನತೆಗೆ ಹಬ್ಬದೂಟದೊಂದಿಗೆ ತಂಪನ್ನು ನೀಡಿತು.

ಸೋಮವಾರ ರಾತ್ರಿ ಸಹ ಗುಡುಗು-ಮಿಂಚಿನ ಅಬ್ಬರವಿದ್ದು ರಾತ್ರಿಯಿಂದ ತಾಲೂಕಿನ ಹೆಚ್ಚಿನ ಭಾಗದಲ್ಲಿ ಹಾಗೂ ಹಬ್ಬದ ದಿನದಂದು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿತ್ತು.

ಹೊಸನಗರ ತಾಲೂಕು ಪದೇ-ಪದೇ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ‌. ಆದರೂ ಇಲ್ಲಿ ಜನಪ್ರತಿನಿಧಿಗಳು ಇದ್ಯಾವುದೇ ಸಮಸ್ಯೆ ಅಲ್ಲವೆಂಬಂತೆ ಮೌನ ತಾಳಿರುವುದು ಈ ಭಾಗದ ಜನರಿಗೆ ತಟ್ಟಿದ ಶಾಪವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here