ಯುವಕನನ್ನು ಅಡ್ಡಗಟ್ಟಿ ಡ್ರ್ಯಾಗರ್’ನಿಂದ ಇರಿದು ಕೊಲೆ ಮಾಡಿ ಆರೋಪಿ ಪರಾರಿ !

0
792

ಚಿಕ್ಕಮಗಳೂರು : ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಯುವಕನೋರ್ವ ಕೊಲೆಗೀಡಾದ ಘಟನೆ ನಡೆದಿದೆ.

ನಗರದ ಕೋಟೆ ಟ್ಯಾಂಕ್ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತ ಯುವಕನನ್ನು ಗವನಹಳ್ಳಿ ಮೂಲದ ಧ್ರುವರಾಜ್ (23) ಎಂದು ಗುರುತಿಸಲಾಗಿದೆ.

ಡ್ರ್ಯಾಗರ್ ಮೂಲಕ ಇರಿದು ಕೊಲೆ ಮಾಡಲಾಗಿದ್ದು ಆರೋಪಿ ವಸ್ತಾರೆಯ ಪ್ರಮೋದ್ ತಲೆಮರೆಸಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಕ್ರಿಕೆಟ್ ಬೆಟ್ಟಿಂಗ್ ಮೂಲ ಕಾರಣ ಎನ್ನಲಾಗಿದ್ದು, ಹಣದ ವಿಷಯವಾಗಿ ಮಾತುಕತೆ ನಡೆಸಲು ಯುವಕನನ್ನು ಕರೆಸಿ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಜಾಹಿರಾತು

LEAVE A REPLY

Please enter your comment!
Please enter your name here