ಯುವಕನ ಬರ್ಬರ ಹತ್ಯೆ ಪ್ರಕರಣ, ಮೂವರ ಬಂಧನ: ಎಸ್ಪಿ

0
13277

ಚಿಕ್ಕಮಗಳೂರು: ಕಳೆದ ಬುಧವಾದ ದೀಪಾವಳಿ ಹಬ್ಬ ದಿನದಂದು ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿ ಸಹೋದರರು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.

ಮತ್ತಾವರದ ಪ್ರಕೃತ್ ತಮ್ಮ ಕಾಫಿ ತೋಟದಿಂದ ಕಟಾವು ಮಾಡಿದ್ದ ಕಾಫಿ ಬೀಜಗಳ ಚೀಲವನ್ನು ಬೈಕಿನಲ್ಲಿ ಹಾಕಿಕೊಂಡು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹಿಂಬದಿಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿತ್ತು.

ಪ್ರಕರಣದ ಸಂಬಂಧ ತನಿಖೆ ನಡೆಸಿದಾಗ ಹತ್ಯೆಯಾದ ಯುವಕ ಪ್ರಕೃತ್ ನ ತಂದೆ ಹಾಗೂ ಸೋದರ ಮಾವಂದಿರುಗಳ ನಡುವೆ ಜಮೀನಿನ ವಿಷಯದಲ್ಲಿ ತಕರಾರು ಇತ್ತು. ಈ ಹಿಂದೆಯೇ ಕೆಲವು ಸಲ ಜಗಳ ನಡೆದು ಪೊಲೀಸ್ ಠಾಣೆ ರಾಜಿ ಸಂಧಾನ ಮಾಡಿ ಕಳಿಸಲಾಗಿತ್ತು. ಅದೇ ಜಮೀನಿನ ದ್ವೇಷದಿಂದ ಮೃತ ಯುವಕನ ಸಹೋದರ ಮಾವಂದಿರಾದ ನಾಗರಾಜು, ಬೈರೇಗೌಡ ಹಾಗೂ ಚಂದ್ರೇಗೌಡ ಸೇರಿ ಮುಂಚಿತವಾಗಿ ರೂಪಿಸಿದಂತ ಯೋಜನೆಯಂತೆ ಪ್ರಕೃತ್ ಕೊಲೆ ಮಾಡಿ ತೋಟದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದರು, ಅವರನ್ನು ಪತ್ತೆ ಹಚ್ಚುವುದರ ಜೊತೆಗೆ ಹತ್ಯೆಗೆ ಬಳಸಿದ್ದ ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here