ಯುವತಿ ಮೇಲೆ ಆ್ಯಸಿಡ್ ಎರಚಿದ ನಾಲ್ವರು ಕಿರಾತಕರಿಗೆ ಜೀವಾವಧಿ ಶಿಕ್ಷೆ..! 20 ಲಕ್ಷ ರೂ. ದಂಡ..!!

0
1352

ಚಿಕ್ಕಮಗಳೂರು: ಶೃಂಗೇರಿಯ ಮೆಣಸೆಯಲ್ಲಿ ನಡೆದ ಯುವತಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ನಾಲ್ವರು ಕಿರಾತಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರೂ. ನಂತೆ 20 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಗಣೇಶ್, ಮಹಮ್ಮದ್, ಕಬೀರ್, ವಿನೋದ್ ಹಾಗೂ ಅಬ್ದುಲ್ ಮಜೀದ್ ಆರೋಪಿಗಳ ವಿರುದ್ಧ ನ್ಯಾಯಾಧೀಶರಾದ ಮಂಜುನಾಥ ತೀರ್ಪನ್ನು ನೀಡಿದ್ದಾರೆ.

ಏನಿದು ಪ್ರಕರಣ ?

2015 ಏಪ್ರಿಲ್ 18 ರಂದು ಯುವತಿ ಒಬ್ಬರು ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ ಸಂದರ್ಭದಲ್ಲಿ ಮೆಣಸೆಯ ಯುವತಿ ಮನೆಯ ಬಳಿ ಈ ಕೃತ್ಯ ನಡೆದಿದ್ದು, ಮುಖ್ಯ ಆರೋಪಿ ಗಣೇಶ್ ಶೃಂಗೇರಿಯಲ್ಲಿ ನೆಲೆಸಿದ್ದು ಮದುವೆಯಾಗುವಂತೆ ಆಕೆಯನ್ನು ಪೀಡಿಸುತ್ತಿದ್ದ ಆದರೆ ಆಕೆ ನಿರಾಕರಿಸಿದ್ದಳು.

ಸಂತ್ರಸ್ತೆಯ ಎಡಗಣ್ಣು ಹಾನಿಯಾಗಿದ್ದರೆ, ಮೈಕೈ ಸುಟ್ಟಿದೆ. ಸಂತ್ರಸ್ತ ಮಹಿಳೆ ಸರ್ಕಾರಿ ಕಚೇರಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಫೋನ್ ಕರೆ ವಿವರ ಆಧರಿಸಿ ಅಂದಿನ ವೃತ್ತ ನಿರೀಕ್ಷಕ ಸುಧೀರ್ ಹೆಗ್ಡೆ ಮತ್ತವರ ಸಿಬ್ಬಂದಿ ಪ್ರಕರಣ ಭೇದಿಸಿದ್ದು ಸರ್ಕಾರದ ಪರವಾಗಿ ಬಿ.ಎಸ್. ಮಮತಾ ವಾದ ಮಂಡಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here