ರಂಜಾನ್ ಸಂಭ್ರಮದಲ್ಲಿ ಭಾವೈಕ್ಯತೆ ಮೆರೆದ ಮುಸ್ಲಿಂ ಭಾಂದವರು

0
491

ರಿಪ್ಪನ್‌ಪೇಟೆ: ಕಳೆದ ಒಂದು ತಿಂಗಳ ಕಾಲ ಉಪವಾಸವನ್ನು ಅಚರಿಸಿ ಇಂದು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಇಲ್ಲಿನ ಜುಮ್ಮಾ ಮಸೀದಿಯವರು ಮತ್ತು ಮೆಕ್ಕಾ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯಿಂದ ಮುಸ್ಮಿಂ ಭಾಂದವರು ಆಚರಿಸಿದರು.

ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಭಕ್ತಿಯೊಂದಿಗೆ ಪ್ರವಾದಿ ಮಹಮ್ಮದ್ ಪೈಗಂಬರ್‌ಗೆ ಪ್ರಾರ್ಥನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಂತರದಲ್ಲಿ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, ಪೈಗಂಬರ್ ಜೀವನ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಸಾರ್ಥಕವಾಗುವುದು ಎಲ್ಲ ಧರ್ಮದ ಸಾರವುದು ಒಂದೇ ಅಗಿದೆ ಭಾರತ ದೇಶ ವಿವಿಧತೆಯಲ್ಲಿ ಏಕತೆಯ ದೇಶವಾಗಿದೆ ಯಾವುದೇ ಜಾತಿ ಭಾವನೆ ತೋರದೆ ಸರ್ವ ಧರ್ಮದ ಭಾವೈಕ್ಯತೆಯ ದೇಶ ಭಾರತ ಎಂದು ಹೇಳಿ ಮುಸ್ಲೀಂ ಜನಾಂಗದವರು ಎಂಬ ಕೆಟ್ಟ ಭಾವನೆಯನ್ನು ಹೋಗಲಾಡಿಸಿಕೊಳ್ಳಲು ನಾವುಗಳು ಎಲ್ಲರೂ ಸೋದರತ್ವ ಸಾಮರಸ್ಯ ಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪನವರನ್ನು ಮತ್ತು ಸಾಹಿತಿ ಮಹ್ಮದ್‌ರಫಿ ಚಾಬುಸಾಬ್ ಇವರನ್ನು ಮುಸ್ಲಿಂ ಸಮಾಜದವರು ರಂಜಾನ್ ಹಬ್ಬದಲ್ಲಿ ಸನ್ಮಾನಿಸಿ ಗೌರವಿಸಿ ಭಾವೈಕ್ಯತೆ ಮೆರೆದರು.

ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫಿಕ್,ಮೆಕ್ಕಾ ಮಸೀದಿ ಅಧ್ಯಕ್ಷ ಪಾಜೀಲ್, ಗ್ರಾ.ಪಂ.ಸದಸ್ಯ ಅಸಿಫ್‌ ಭಾಷಾಸಾಬ್, ಆರ್.ಎ.ಚಾಬುಸಾಬ್, ಅಮ್ಮೀರ್‌ಹಂಜಾ, ಆರ್.ಎಸ್.ಶಂಶುದ್ದೀನ್, ಕೆ.ಹೆಚ್.ಆರ್.ಮೋಣು, ಮೀನುಖಾಸಿಂ, ಮುಸ್ತಾಫ್, ರಹಿಮಾನ್, ಹಸನಬ್, ಬಾಪುಖಾನ್ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here