ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಗೆ ಮಳಲಿ ಮಠದಲ್ಲಿ ಸಕಲ ಸಿದ್ಧತೆ

0
591

ರಿಪ್ಪನ್‌ಪೇಟೆ: ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ರಾಜ್ಯದ ಪ್ರತಿಷ್ಟಿತ ಮಠಗಳಲ್ಲಿ ಒಂದಾದ ಶ್ರೀಮಾನ್ ಮಹಾಸಂಸ್ಥಾನ ಮಳಲಿಮಠದ ಶ್ರೀಗುರುನಾಗಾರ್ಜುನಸ್ವಾಮಿ ಸನ್ನಿಧಿಯಲ್ಲಿ ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರ ಇಷ್ಟಲಿಂಗ ಶಿವಪೂಜಾನುಷ್ಟಾನ ಕಾರ್ಯಕ್ರಮವನ್ನು ನವೆಂಬರ್ 18 ರಂದು ಮಳಲಿ ಮಠದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಏರ್ಪಡಿಸಲಾಗಿದೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳಲಿ ಮಠದ ಕಾರ್ತೀಕ ದೀಪೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಅಂಗವಾಗಿ ಮಲೆನಾಡಿನ ಭಕ್ತರ ಅಭಿಲಾಷೆಯಂತೆ ಮಠದ ಶ್ರೀ ಡಾ.ಷ.ಬ್ರ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಯವರ ಅಧ್ಯಕ್ಷತೆಯಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರಗುರು ಚರಮೂರ್ತಿಗಳು ಮತ್ತು ರಾಜಕೀಯ ಗಣ್ಯರು ಭಾಗವಹಿಸುವರು.

ಇದೇ ದಿನ ಸಂಜೆ 5 ಗಂಟೆಗೆ ಜನಜಾಗೃತಿ ಧರ್ಮ ಸಮಾರಂಭದ ದಿವ್ಯಸಾನಿಧ್ಯವನ್ನು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಡಾ.ಪ್ರಸನ್ನರೇಣುಕ ವೀರಸೋಮೇಶ್ವರ ಭಗವತ್ಪಾದರು ವಹಿಸಿ ಆಶೀರ್ವಚನ ನೀಡುವರು.

ಈ ಸಂದರ್ಭದಲ್ಲಿ ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್, ಎನ್.ವರ್ತೇಶ್ ರಿಪ್ಪನ್‌ಪೇಟೆ, ಕಗ್ಗಲಿ ಲಿಂಗಪ್ಪ, ಮೋಹನ, ಧರ್ಮರಾಜ್ ಸಮಟಗಾರು, ಹೆಚ್.ಎಸ್ ಸತೀಶ್ ಹಾರೋಹಿತ್ತಲು, ಕೆ.ಬಿ. ನಾಗಭೂಷಣ್, ಪುಟ್ಟಸ್ವಾಮಿಗೌಡರು ಕಗ್ಗಲಿ,ನಾಗರಾಜ್‌ ಗೌಡ ಹೊಸಕೆರೆ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here