ರಪ್ತು ಉತ್ತೇಜನ ಕ್ರಿಯಾಶೀಲ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಿ: ಡಿಸಿ ಕೆ.ಎನ್ ರಮೇಶ್

0
159

ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಪ್ತು ಉತ್ತೇಜಿಸಲು ಮುಂದಿನ ದಿನಗಳಲ್ಲಿ ಕ್ರಿಯಾಶೀಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.

ನಗರದ ಎ.ಐ.ಟಿ ಕಾಲೇಜಿನ ನಡೆದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಡೆದ ವಾಣಿಜ್ಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ರಪ್ತು ಮಾಡಲು ಬಹಳಷ್ಟು ಅವಕಾಶವಿದ್ದು, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ನಮ್ಮ ದೇಶದ ರಫ್ತಿನ ಪ್ರಮಾಣ ಹೆಚ್ಚಿಸುವಂತೆ ಮಾಡಬಹುದು ಇಂದಿನ ದಿನಗಳಲ್ಲಿ ಕೃಷಿ ಮತ್ತು ಸಣ್ಣ ಉತ್ಪನ್ನಗಳನ್ನು ಕೂಡ ಅಂತರಾಷ್ಟ್ರೀಯ ಮಟ್ಟಕ್ಕೆ ಗುರುತಿಸುವಂತೆ ಮಾಡಬಹುದಾಗಿದ್ದು, ರಪ್ತು ಮಾಡಲು ಇಚ್ಚಿಸುವ ಉದ್ದಿಮೆದಾರರು ರಪ್ತುನ್ನು ಆಮದು ಮಾಡುವ ಬಗ್ಗೆ ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿರಬೇಕು ಈ ರೀತಿಯ ಕಾರ್ಯಕ್ರಮಗಳಿಂದ ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ ನಮ್ಮ ದೇಶದಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ಕಾಫಿ ಮತ್ತು ಮೆಣಸು ಮುಂತಾದ ಸಾಂಬಾರು ಪದಾರ್ಥಗಳು ರಫ್ತು ಆಗುತ್ತಿದ್ದು ಅದರಲ್ಲಿ ಶೇ. 85% ರಷ್ಟು ರಪ್ತು ಕರ್ನಾಟಕದ್ದಾಗಿದೆ ಎಂದು ತಿಳಿಸಿದರು.

ರಪ್ತು ಮಾಡುವ ಉದ್ದಿಮೆದಾರರು ಮೊದಲು ಸ್ಥಳೀಯ ಮಾರುಕಟ್ಟೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ರಫ್ತಿನ ಬಗೆಗಿನ ಮಾಹಿತಿಗಳನ್ನು ಪಡೆದುಕೊಂಡು ರಫ್ತನ್ನು ಉತ್ತೇಜನಗೊಳಿಸಿ ಮತ್ತು ಸರ್ಕಾರದಿಂದ ದೊರೆಯುವಂತಹ ಕೈಗಾರಿಕ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವಂತೆ ಹೇಳಿದರು.

ಈ ಸಂದರ್ಭದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಮಹೇಶ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸೈಯದ್ ಮುನೀರ್ ಅಹಮದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ಜಿಲ್ಲಾ ಕೈಗಾರಿಕ ಕೇಂದ್ರ ಜಂಟಿ ನಿರ್ದೇಶಕ ಸಿದ್ದರಾಜು, ಬೀರೂರು ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಈರಣ್ಣ, ಚಿತ್ರದುರ್ಗ ಎಫ್.ಕೆ.ಸಿ.ಸಿ.ಐ ಸತೀಶ್, ಎಐಟಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಸಿ.ಟಿ ಜಯದೇವ್, ಐಡಿಎಸ್‌ಜಿ ಕಾಲೇಜಿನ ಪ್ರೋಫೆಸರ್ ಸಂಪತ್ ಕುಮಾರ್, ಜಿಲ್ಲಾ ಲಿಂಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಉದ್ಯಮೇದರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here