ರಸಗೊಬ್ಬರ ಬೆಲೆ ಏರಿಕೆ ರೈತರಿಗೆ ಮಾಡಿದ ಅನ್ಯಾಯ: ತಾಪಂ ಸದಸ್ಯ ಚಂದ್ರಮೌಳಿಗೌಡ

0
424

ಹೊಸನಗರ: ಕೇಂದ್ರ ಸರ್ಕಾರ ಶೇಖಡ 60% ಪ್ರಮಾಣದಲ್ಲಿ ರಸಗೊಬ್ಬರ ಬೆಲೆ ಏರಿಸುವುದು ರೈತರಿಗೆ ಮಾಡಿದ ಅನ್ಯಾಯ ಎಂದು ಹೊಸನಗರದ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿಗೌಡ ಕೇಂದ್ರ ಸರ್ಕಾರದ ವಿರುದ್ಧ ದೂರಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಎಪಿ ಗೊಬ್ಬರದ ಬೆಲೆ ಕ್ವಿಂಟಾಲ್‌ಗೆ 1200 ರಿಂದ ಒಂದೇ ಬಾರೀ ಕೇಂದ್ರ ಸರ್ಕಾರ 1700 ರೂಪಾಯಿಗೆ ಏರಿಸಿದೆ ಪಿವಿಸಿ ಪೈಪ್‌ಗಳ ಬೆಲೆ ಮೂರು ಪಟ್ಟು ಏರಿದೆ ಹೀಗಾದರೇ ರೈತರು ಹಾಗೂ ಜನ ಸಮಾನ್ಯರು ಬದುಕುವುದು ಹೇಗೆ? ಎಂದು ಪ್ರಶ್ನೀಸಿದರು.

ಕೇಂದ್ರ ಬಿಜೆಪಿಯ ನರೇಂದ್ರ ಮೋದಿಯವರ ಆಡಳಿತದಲ್ಲಿ ರೈತರ ಸ್ಥತಿ ಚಿಂತಜನಕವಾಗಿದೆ ರೈತರು ಇರುವ ಅದಾಯವನ್ನು ಕಳೆದುಕೊಂಡು ಬೀದಿ ಪಾಲಾಗುತ್ತಿದ್ದು ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂಬ ಕೇಂದ್ರ ಸರ್ಕಾರದ ಭರವಸೆ ಘೋಷಣೆ ಬರೀ ಹುಸಿಯಾಗಿದ್ದು ಗೊಬ್ಬರದ ಬೆಲೆ ಏರಿಕೆ ಹಾಗೂ ಪೈಪ್‌ಗಳ ಬೆಲೆ ಏರಿಕೆಯಿಂದ ಸಾಬೀತಾಗಿ ಕೃಷಿ ಉತ್ಪಾದನ ವೆಚ್ಚ ಕಡಿಮೆಯಾದರೆ ಮಾತ್ರ ರೈತರ ಆದಾಯ ಹೆಚ್ಚಿಸಲು ಸಾಧ್ಯ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಗೊಬ್ಬರಕ್ಕೆ ಸಬ್ಸಿಡಿ ನೀಡುತ್ತಿತ್ತು ಇಂದಿನ ಬಿಜೆಪಿ ಸರ್ಕಾರ ಸಬ್ಸಿಡಿಯನ್ನು ಕಡಿತಗೊಳಿಸಿ ಬೆಲೆ ಏರಿಕೆಗೆ ಕಾರಣವಾಗಿದೆ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಗೊಬ್ಬರಗಳು ರೈತರಿಗೆ ಬೇಕಾಗಿರುವ ಸಲಕರಣೆಗಳು ಪೈಪ್‌ಗಳ ಬೆಲೆ ಕಡಿಮೆಯಾಗದಿದ್ದರೆ ರೈತರು ಕಂಗೆಟ್ಟು ಹೋಗುತ್ತಾರೆ. ಇದನ್ನು ಅರಿತು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪೈಪ್‌ಗಳ ಬೆಲೆ ಇಳಿಸಿದರೆ ಮಾತ್ರ ಬದುಕಬಹುದು. ಕೇಂದ್ರ ಸರ್ಕಾರ ಕೂಡಲೇ ಗೊಬ್ಬರದ ಬೆಲೆ ಹಾಗೂ ಪೈಪ್‌ಗಳ ಬೆಲೆ ಇಳಿಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಅನಿವಾರ್ಯ ಎಂದರು.

ಸರ್ಕಾರದ ರಾತ್ರಿ ಕೊರೊನಾ ಕರ್ಫ್ಯೂ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಎಲ್ಲರೂ ಮಲಗುವ 10 ಗಂಟೆಯಿಂದ ಬೆಳಿಗ್ಗೆ 5ಗಂಟೆಯ ವರೆವಿಗೆ ಕರ್ಫ್ಯೂ ಕರ್ನಾಟಕ ರಾಜ್ಯದಲ್ಲಿ ಜನರ ಮೇಲೆ ಹೇರಿದೆ ಇದು ಆವೈಜ್ಞಾನಿಕವಾಗಿದ್ದು ಅದೇ ಹಗಲಿನಲ್ಲಿ ಜನ ಓಡಾಡುವ ಸಮಯದಲ್ಲಿ ಕೊರೊನಾ ವೈರಸ್ ಹರಡಿವುದಿಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಆದೇಶ ಆವೈಜ್ಞಾನಿಕವಾಗಿದ್ದು ರಾಜ್ಯದ ಬಿಜೆಪಿ ಆಡಳಿತ ವೈಖರಿಯ ಬಗ್ಗೆ ಅನೇಕ ಟೀಕೆಯಿಂದ ಮೈಗೂಡಿಸಿಕೊಂಡಿದ್ದು ರಾಜ್ಯದಲ್ಲಿರುವ ಸರ್ಕಾರದ ತಜ್ಞರ ಅಧಿಕಾರಿಗಳ ಅಭಿಪ್ರಾಯ ಪಡೆದು ಸರ್ಕಾರದ ಆಡಳಿತ ನಡೆಸುತ್ತಿದ್ದರೂ ಇಲ್ಲವೂ ಎಂಬುದು ಅರ್ಥವಾಗುತ್ತಿಲ್ಲ. ತಜ್ಞ ಸಚಿವರು ಕೆಬಿನೆಟ್‌ನಲ್ಲಿ ಇದ್ದರೂ ಅವರ ಮಾತಿಗೆ ಕಿಚ್ಚಿತ್ತು ಬೆಲೆ ನೀಡುತ್ತಿಲ್ಲ ಎಂದು ಹೇಳಲಾಗಿದ್ದು ಸರ್ಕಾರ ಬೆಳಿಗ್ಗೆ ಒಂದು ಆದೇಶ, ಮಧ್ಯಾಹ್ನ ಒಂದು ಆದೇಶ, ರಾತ್ರಿ ಒಂದು ಆದೇಶ, ಮಾಡುತ್ತಿದ್ದು ಮಾಧ್ಯಮದವರು ಸರ್ಕಾರದ ವಿರುದ್ಧ ಟೀಕೆ ಮಾಡಿದ ತಕ್ಷಣ ಎಚ್ಚೆತ್ತುಕೊಳ್ಳುವ ಪರಿಸ್ಥಿತಿ ಬಂದಿದೆ. ಅದು ಅಲ್ಲದೇ ಇಂದಿನ ಬಿಜೆಪಿಯ ಆಡಳಿತ ನಗೆ ಪಾಟಲಿಗೆ ಗುರಿಯಾಗುತ್ತಿದೆ ರಾಜ್ಯದಲ್ಲಿ ಕೊರೊನಾ ತಡೆಯುವಲ್ಲಿ ವೈಪಲ್ಯ, ಆಡಳಿತ ನಡೆಸುವಲ್ಲಿ ವೈಪಲ್ಯಕ್ಕೆ ಒಳಗಾಗಿದ್ದು ರಾಜ್ಯದಲ್ಲಿ ಭ್ರಷ್ಠಾಚಾರ ತುಂಬಿ ತೋಳುಕುತ್ತಿದೆ.

ಹಿಂದಿನ 2 ತಿಂಗಳ ಕಾಲ ಸಿಡಿ ಸರ್ಕಾರ, ಮೂರು ತಿಂಗಳು ಪ್ರತಿಭಟನೆಗೆ ಸೀಮಿತವಾಗಿ ಇನ್ನೂ ನಾಲ್ಕು ತಿಂಗಳು ಕೊರೊನಾದ ಅರ್ಭಟದಲ್ಲಿ ನಲುಗುತ್ತಿದೆ ಇದೇ ರೀತಿ ಸರ್ಕಾರದ ವೈಪಲ್ಯಗಳಿಂದ ಜನ ಸಾಮಾನ್ಯರು ಕೊರೊನಾದಿಂದ ಸಾಯುವುದರಲ್ಲಿ ಅನುಮಾನವಿಲ್ಲ. ತಕ್ಷಣ ಇಂದಿನ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡು ತಜ್ಞರಿಂದ ಕೊರೊನಾದ ಬಗ್ಗೆ ಮಾಹಿತಿ ಪಡೆದು ರಾಜ್ಯದಿಂದ ಓಡಿಸುವ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here