ರಸ್ತೆಗೆ ಅಪ್ಪು ಸರ್ಕಲ್ ಎಂದು ನಾಮಕರಣ ಮಾಡಿದ ಅಭಿಮಾನಿಗಳು

0
433

ಸೊರಬ : ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಗ್ರಾಮಸ್ಥರು ಕನ್ನಡ ಚಿತ್ರರಂಗದ ಖ್ಯಾತ ನಟ, ದೊಡ್ಮನೆ ಹುಡುಗ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಮರಣೆಗಾಗಿ ತಮ್ಮ ಗ್ರಾಮದಲ್ಲಿ ಕಲ್ಲಿನ ನಾಮಫಲಕದ ಮೇಲೆ ದೊಡ್ಮನೆ ಹುಡುಗನ ಭಾವ ಚಿತ್ರವನ್ನು ಚಿತ್ರಿಸಿ ಅದರ ಮೇಲೆ ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಎನ್ನುವ ಸಾಲುಗಳ ಮೂಲಕ ಆ ರಸ್ತೆಗೆ ‘ಅಪ್ಪು ಸರ್ಕಲ್’ ಎಂದು ಊರ ಗ್ರಾಮಸ್ಥರು ಹಾಗೂ ಅಪ್ಪು ಅಭಿಮಾನಿಗಳು ನಾಮಕರಣ ಮಾಡಿದ್ದಾರೆ.

ಗ್ರಾಮದ ಸುಮಾರು 250ಕ್ಕೂ ಹೆಚ್ಚು ಜನರು ನಾಮಫಲಕ ಉದ್ಘಾಟನೆ ವೇಳೆಯಲ್ಲಿ ಸಣ್ಣ ಪುಟ್ಟ ಮಕ್ಕಳಿಂದ, ವಯಸ್ಸಾದ ಹಿರಿಯವರು ಕೂಡ ಮೊಂಬತ್ತಿ ಹಿಡಿದು ಸಂತಾಪಿಸಿದರು. ಈ ವೇಳೆಯಲ್ಲಿ ಪುನೀತ್ ರಾಜ್‍ಕುಮಾರ್ ನಡೆದು ಬಂದ ಹಾದಿಯನ್ನು ಹಾಗೂ ಬಡವರಿಗಾಗಿ, ಮತ್ತು ಕನ್ನಡಕ್ಕಾಗಿ ಅವರ ಸೇವೆಯನ್ನು ಮೈಕ್ ನಲ್ಲಿ ಅವರ ಜೀವನ ವಾಣಿಯನ್ನು ತಿಳಿಸಲಾಯಿತು.

ಅಪ್ಪು ಹೆಸರಿನಲ್ಲೇ ಸಿಹಿ ಹಾಗೂ ಅನ್ನಸಂತರ್ಪಣೆ ಕೂಡ ನಡೆಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here