ರಸ್ತೆಯಲ್ಲಿ ಅಡ್ಡ ಬಂದ ಮಂಗಗಳನ್ನು ತಪ್ಪಿಸಲು ಹೋಗಿ ಗೂಡ್ಸ್ ಆಟೋ ಪಲ್ಟಿ..! ಓರ್ವ ಸ್ಥಳದಲ್ಲೇ ಸಾವು

0
902

ಶಿವಮೊಗ್ಗ :‌ ಶಿವಮೊಗ್ಗದಿಂದ ತೀರ್ಥಹಳ್ಳಿ ಲಗೇಜ್ ಆಟೋದಲ್ಲಿ ತೆರಳುತ್ತಿರುವಾಗ ಸಕ್ರೇಬೈಲು ಸಮೀಪ ರಸ್ತೆಯಲ್ಲಿ ಮಂಗಗಳು‌ ದಿಢೀರಾಗಿ ಅಡ್ಡ ಬಂದ ಕಾರಣ ಅವುಗಳನ್ನು ತಪ್ಪಿಸಲು ಹೋಗಿ ಗೂಡ್ಸ್ ಆಟೋ ಮಗುಚಿ ಬಿದ್ದ ಪರಿಣಾಮ ಚಾಲಕ ಬುಡೇನ್‌ಸಾಬ್ (62) ಸ್ಥಳದಲ್ಲೇ ಸಾವು ಕಂಡಿದ್ದು, ಈತನ ಪುತ್ರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಸಕ್ರೇಬೈಲ್‌ನಿಂದ 5 ಕಿ.ಮೀ. ದೂರದಲ್ಲಿ ಲಗೇಜ್ ಆಟೋದಲ್ಲಿ ತೆರಳುತ್ತಿದ್ದಾಗ (ಕೆ.ಎ.14 ಬಿ.8792) ಈ ಘಟನೆ ಸಂಭವಿಸಿದೆ. ಬುಡೇನ್ ಸಾಬ್‌ರವರು ಬೊಮ್ಮನಕಟ್ಟೆ ನಿವಾಸಿಯಾಗಿದ್ದು, ಹಾಸಿಗೆ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here