ರಿಪ್ಪನ್ಪೇಟೆ: ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲಿ, ಆನೆಗದ್ದೆ ಸಂಪರ್ಕ ರಸ್ತೆಯ 125ಮೀ. ಉದ್ದದ ಕಾಂಕ್ರೀಟ್ ರಸ್ತೆ ಮತ್ತು ಡಾಂಬರೀಕರಣ ರಸ್ತೆಯ ಕಾಮಗಾರಿಗೆ ಸರ್ಕಾರ ಮಂಜುರಾತಿ ಆದೇಶ ನೀಡಲಾಗಿದ್ದು ಕಾಮಗಾರಿ ಗುತ್ತಿಗೆದಾರರು ಮೂಡ್ಲಿ ಎಸ್.ಟಿ ಬಡಾವಣೆಯ ಕಾಂಕ್ರೀಟ್ ರಸ್ತೆ ಮಾಡದೆ ಆನೆಗದ್ದೆ ಕಡೆಯಿಂದ ಮಾಡುತ್ತಿದ್ದಾರೆಂದು ಆರೋಪಿಸಿ ಕಾಮಗಾರಿ ತಡೆದು ಇಂದು ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಕಾಮಗಾರಿಗೆ ರಾಜ್ಯ ಗೃಹಸಚಿವರು ಶಂಕುಸ್ಥಾಪನೆ ನೇರವೇರಿಸಿದ್ದು ಇದನ್ನು ಮಂಜೂರಾದ ಸ್ಥಳದಿಂದ ಕಾಮಗಾರಿಗೆ ಪ್ರಾರಂಭಿಸದೆ ಬೇರೆ ಭಾಗದಲ್ಲಿ ಕಾಮಗಾರಿ ಆರಂಭಸಿದ್ದಾರೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ಈ ಪ್ರತಿಭಟನೆಯ ನೇತೃತ್ವವನ್ನು ರತ್ನಾಕರಗೌಡ್ರು ಕಬ್ಬಿನಮಕ್ಕಿ, ಲಿಂಗಪ್ಪ, ಅರುಣ, ಕುಮಾರ್, ಚಂದನ್, ದಿವಾಕರ್, ನೀಲಪ್ಪ, ಪುರುಷೋತ್ತಮ್, ಸೋಮಶೇಖರ, ಪಣಿರಾಜ್, ಗುರುಭಂಡಾರಿ, ಗೀತಾ, ವಿದ್ಯಾ, ರಾಮಚಂದ್ರ, ಲಕ್ಷ್ಮಣ ಆಚಾರ್, ಟೀಕಾಚಾರ್, ರವಿಗೌಡರ್, ಆದರ್ಶ ಹುಂಚದಕಟ್ಟೆ, ಕೇಶವ ನಾಗರಹಳ್ಳಿ, ಸುರೇಶ ಗುಡ್ಡೆಕೊಪ್ಪ, ಗುರುರಾಜ್ ಸುಣಕಲ್ಲು, ಉಲ್ಲಾಸ್ ಕಡಸೂರು, ರಾಜಶೇಖರ ಹೀರೆಬೈಲು, ಪೃಥ್ವಿರಾಜ್.ಕೆ.ಸಿ ಇನ್ನಿತರರು ಪ್ರತಿಭಟನೆ ನಡೆಸಿ ಹುಂಚ ನಾಡಕಛೇರಿಗೆ ಮತ್ತು ಗ್ರಾಮ ಪಂಚಾಯತಿಗೆ ತೆರಳಿ ಮನವಿ ಸಲ್ಲಿಸಿ ಕಾಮಗಾರಿಯನ್ನು ಮೂಡ್ಲಿ ಕಡೆಯಿಂದಲೇ ಆರಂಭಿಸಬೇಕೆಂದು ಆಗ್ರಹಿಸಿದರು.