ರಸ್ತೆ ಮಧ್ಯ ಭಾಗದಲ್ಲೇ ರಾಜಾರೋಷವಾಗಿ ಓಡಾಡಿದ ಕಾಡಾನೆ‌..!

0
570

ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ 11ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿಗೆ ಕಾರಣವಾಗಿದೆ.

ರಸ್ತೆ ಮಧ್ಯ ಭಾಗದಲ್ಲೇ ನಿಂತಿರುವ ಕಾಡಾನೆಯನ್ನು ಕಂಡು ಧರ್ಮಸ್ಥಳ ಮತ್ತು ಮಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರು ಭಯ ಭೀತರಾಗಿದ್ದಾರೆ. ಇದನ್ನ ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆ ಹಿಡಿದು ಹರಿ ಬಿಟ್ಟಿದ್ದಾರೆ.

ಇತ್ತ ಕಾಡಾನೆ ಪ್ರತ್ಯಕ್ಷದಿಂದಾಗಿ ಪ್ರವಾಸಿಗರೂ ಸೇರಿದಂತೆ ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here