ರಾಜಕೀಯದಲ್ಲಿ ಜೀವಂತವಾಗಿದ್ದೇನೆಂದು ತೋರಿಸಲು ಗೋಪಾಲಕೃಷ್ಣ ಶಾಸಕ ಹಾಲಪ್ಪನವರ ಮೇಲೆ ಆರೋಪ ಮಾಡುತ್ತಿದ್ದಾರೆ..!

0
1193

ರಿಪ್ಪನ್‌ಪೇಟೆ: ಶಾಸಕರ ಹರತಾಳು ಹಾಲಪ್ಪ ದ್ವೇಷದ ರಾಜಕೀಯ ಮಾಡದೆ ಸದಾ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಅಂತವರ ವಿರುದ್ದ ಉದ್ದೇಶ ಪೂರ್ವಕವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ ನೈತಿಕತೆ ಏನಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಮತ್ತು ಬೆಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವಾನಿ ದಿವಾಕರ್ ಪ್ರಶ್ನಿಸಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರುರವರನ್ನು ತರಾಟೆಗೆ ತಗೆದುಕೊಂಡ ಅವರು, ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಸಾರ್ವಜನಿಕರನ್ನು ನಿತ್ಯ ಅಲೆದಾಡಿಸುತ್ತಿರುವುದರ ಬಗ್ಗೆ ಈಗಾಗಲೇ ಇಬ್ಬರು ಶಾಸಕರು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ನೌಕರರು ಮತ್ತು ಗ್ರಾಮ ಸಹಾಯಕರು ಕಛೇರಿಗೆ ಬರುವ ಫಲಾನುಭವಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆಂಬ ದೂರುಗಳು ಸಾಕಷ್ಟು ಬರುತ್ತಿದ್ದು ಅದರಂತೆ ರಿಪ್ಪನ್‌ಪೇಟೆ ನಾಡಕಛೇರಿಯ ಗ್ರಾಮ ಸಹಾಯಕನ ಮೇಲೆ ಸಾಕಷ್ಟು ಭ್ರಷ್ಟಾಚಾರದ ದೂರುಗಳು ಸಾರ್ವಜನಿಕರಿಂದ ಬಂದಿರುವ ಕಾರಣ ಅಧಿಕಾರಿಗಳು ನೌಕರನ ಮೆಲೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ಕರ್ತವ್ಯದಿಂದ ವಜಾಗೊಳಿಸಲಾದ ಅಣ್ಣಪ್ಪ ಯಾನೆ ಪ್ರವಿಣ್ ಬಿನ್ ಸತ್ಯನಾರಾಯಣ ಎಂಬುವರು ನೇಮಕಾತಿ ಸಮಯದಲ್ಲಿ ಪೊಲೀಸ್ ಇಲಾಕೆಯ ನಿರಾಪೇಕ್ಷಣಾ ಪತ್ರ ಪಡೆಯುವ ಸಂದರ್ಭದಲ್ಲಿ ಪ್ರವೀಣ ಬಿನ್ ಸತ್ಯನಾರಾಯಣ ಹೆಚ್ ಎಂದು ದಾಖಲೆ ನೀಡಿ ಉದ್ಯೋಗ ಪಡೆಯಲಾಗಿ ಇಲಾಖೆ ತನಿಖೆಯಲ್ಲಿ ಪತ್ತೆಯಾಗಿದ್ದು ಆ ಕಾರಣದಿಂದಾಗಿ ವಜಾ ಮಾಡಲಾಗಿದೆ ಹೊರತು ಶಾಸಕ ಹರತಾಳು ಹಾಲಪ್ಪನವರ ಕೈವಾಡದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ವೃದ್ಧಾಪ್ಯ-ವಿಧವಾ ವೇತನ ಸೇರಿದಂತೆ 94c ಅಡಿ ಹಕ್ಕುಪತ್ರ ನೀಡುವ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರದ ದೂರುಗಳು ಇದ್ದು ಕಾನೂನಿನಡಿಯಲ್ಲಿ ವಜಾಗೊಳಿಸಲಾಗಿದೆ ಹೊರತು ಶಾಸಕರ ಕೈವಾಡದಿಂದಲ್ಲ ಎಂಬುದನ್ನು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸುವ ಮೊದಲು ಸತ್ಯವನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಸಲಹೆ ನೀಡಿ ರಾಜಕೀಯದಲ್ಲಿ ಜೀವಂತವಾಗಿದ್ದೇನೆಂಬುದನ್ನು ತೋರಿಸಿಕೊಳ್ಳಲು ಶಾಸಕ ಹರತಾಳು ಹಾಲಪ್ಪನವರ ವಿರುದ್ದ ದುರುದ್ದೇಶದ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆಂದು ಕುಟುಕಿದರು.

ಶಾಸಕರು ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ಈಗಾಗಲೇ ನೂರಾರು ಕೋಟಿ ರೂ. ಅನುದಾನವನ್ನು ತರುವುದರೊಂದಿಗೆ ಶಾಸನ ಸಭೆಯಲ್ಲಿ ಶರಾವತಿ ಮುಳುಗಡೆ ರೈತರ ಮತ್ತು 192 ಕೆಪಿಸಿ ಲ್ಯಾಂಡ್ ವಿಚಾರವನ್ನು ಸದನದಲ್ಲಿ ಧ್ವನಿ ಎತ್ತಿದ್ದು ಅಲ್ಲದೆ ಸಾಗರ-ಹೊಸನಗರ ತಾಲ್ಲೂಕಿನ ಹಲವು ಗ್ರಾಮಗಳಿಗೆ ಶರಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆ ಕುರಿತು ಚರ್ಚಿಸಿಲಾಗಿದ್ದು ಮಾಜಿ ಶಾಸಕರಿಗೆ ತಿಳಿದಂತೆ ಇಲ್ಲ ಎಂದು ವ್ಯಂಗ್ಯವಾಡಿದರು.

ತಾಲ್ಲೂಕು ಕಛೇರಿ ಮತ್ತು ಹೋಬಳಿ ಕಛೇರಿಯಲ್ಲಿ ದಲ್ಲಾಳಿಗಳದೆ ಕಾರುಬಾರು ಎಂಬ ಬಗ್ಗೆ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಪತ್ರಕರ್ತರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೀರೇಶ್ ಆಲವಳ್ಳಿ, ನಮ್ಮ ಗಮನಕ್ಕೂ ಬಂದಿದೆ ಆದಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಶಾಸಕರು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಆದರೂ ಕಲಿತ ಚಾಳಿ ಬಿಡುವುದು ಹೇಗೆ ಎಂಬಂತೆ ನೌಕರರನ್ನು ಹತೋಟಿಯಲ್ಲಿಡುವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿರುತ್ತಾರೆ ಆದರೂ ಬುದ್ದಿ ಬಿಟ್ಟಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವಜಾಗೊಂಡ ಗ್ರಾಮ ಸಹಾಯಕ ಪಡೆದ ವೇತನ ವಾಪಸ್ ಮಾಡಿಸಲು ಒತ್ತಾಯ:

“ಗ್ರಾಮ ಸಹಾಯಕ ಅಣ್ಣಪ್ಪ ಯಾನೆ ಪ್ರವೀಣ್ ಬಿನ್ ಸತ್ಯನಾರಾಯಣ ರವರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು ನೇಮಕಾತಿಗೊಂಡು ಅವಧಿಯಿಂದ ಇಲ್ಲಿಯವರೆಗೆ ಪಡೆಯಲಾದ ವೇತನವನ್ನು ವಾಪಾಸ್ಸ್ ಪಡೆಯುವಂತೆ ಸರ್ಕಾರ ಮತ್ತು ಕಂದಾಯ ಸಚಿವರಿಗೆ ಮನವಿ ಮೂಲಕ ಒತ್ತಾಯಿಸಲಾಗುವುದೆಂದು ಹೇಳಿದರು.”

“ರಾಜಕೀಯವಾಗಿ ಜೀವಂತವಾಗಿರುವ ಬಗ್ಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರಾಜಧಾನಿಯಿಂದ ಊರಿಗೆ ಬಂದವರು. ಯಾರೋ ಹೇಳಿದ ಮಾತು ಕೇಳಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಗೇಲಿ ಮಾಡಿದರು‌.”

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಮೆಣಸೆ ಆನಂದ, ಬೆಳ್ಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಜೇಶ್‌ ಬುಕ್ಕಿವರೆ,ಬಾಳೂರು ಗ್ರಾ.ಪಂ ಉಪಾಧ್ಯಕ್ಷ ದಿವಾಕರ್, ಗ್ರಾಮ ಪಂಚಾಯ್ತಿ ಸದಸ್ಯರಾದ ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಅಶ್ವಿನಿ, ವಿನೋಧ, ದೀಪಾ ಸುಧೀರ್, ದಾನಮ್ಮ, ವನಮಾಲ, ಎಲ್.ನಿರೂಪ್, ಸುಧೀಂದ್ರ ಪೂಜಾರಿ‌ಇನ್ನಿತರರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here