ರಾಜಕೀಯ ಉದ್ದೇಶಕ್ಕಾಗಿ ಹೋರಾಟವಲ್ಲ ಸಮಾಜದ ಒಳಿತಿಗಾಗಿ ಹೋರಾಟ: ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ

0
717

ರಿಪ್ಪನ್‌ಪೇಟೆ: ಯಾವುದೇ ರಾಜಕೀಯ ಉದ್ದೇಶಕ್ಕಾಗಿ ನಾನು ಹೋರಾಟ ಮಾಡುತ್ತಿಲ್ಲ ಸಮಾಜದ ಕಟ್ಟಕಡೆಯ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಮಲೆನಾಡಿನ ವ್ಯಾಪ್ತಿಯಲ್ಲಿರುವ ಮಲ್ಲಗೌಡರು ವಿದ್ಯಾವಂತ ರೈತಮಕ್ಕಳಿಗೆ ಸರ್ಕಾರದಲ್ಲಿ 2(ಎ) ಮೀಸಲಾತಿ ಅನುಷ್ಠಾನಗೊಳಿಸುವುದರೊಂದಿಗೆ ಸರ್ಕಾರಿ ಉದ್ಯೋಗ ಇನ್ನಿತರ ಸೌಲಭ್ಯಗಳು ದೊರಕಿಸುವ ಉದ್ದೇಶದಿಂದ ಹೋರಾಟ ನಡೆಸುತ್ತಿರುವುದಾಗಿ ಕೂಡಲಸಂಗಮದ ಪಂಚಮಸಾಲಿ ಮಹಾಪೀಠದ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪ್ರತಿಜ್ಞಾ ಪಂಚಾಯ್ತಿ ಬೃಹತ್ ರಾಜ್ಯ ಅಭಿಯಾನ ಕಾರ್ಯಕ್ರಮದಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸದಲ್ಲಿ ಗವಟೂರು ಈಶ್ವರಪ್ಪಗೌಡರ ಮನೆಯಲ್ಲಿ ಸಂಘಟಿಸಲಾದ ಮಲ್ಲಗೌಡರ ಸಮಾಜದ ಮುಖಂಡರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹೊಸನಗರ ತಾಲ್ಲೂಕಿನ ಮಲ್ಲಗೌಡರು ಮೂಲ ಕಸಬು ಕೃಷಿಯಾಗಿದ್ದು ವಿದ್ಯಾವಂತರಾಗಿದ್ದರೂ ಕೂಡಾ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ವಿಫಲರಾಗಿದ್ದಾರೆ, ಕಾರಣ ಮೀಸಲಾತಿ ಆದ್ದರಿಂದ ಐಎಎಸ್-ಐಪಿಎಸ್ ಕೆಎಎಸ್ ಹೀಗೆ ಉನ್ನತ ಹುದ್ದೆಗಳಲ್ಲಿ ಲಿಂಗಾಯಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆಂದು ಕಳವಳಕಾರಿ ಸಂಗತಿಯಾಗಿದೆ. ಈ ಉದ್ದೇಶದಿಂದಾಗಿ ನಾನು ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಿಂದ ರಾಜಧಾನಿಯವರೆಗೆ ಪಾದಯಾತ್ರೆ ನಡೆಸುವುದರೊಂದಿಗೆ ನಮ್ಮ ಹೋರಾಟಕ್ಕೆ ಬೀದಿಗೆ ಬಂದಿದ್ದೇನೆ‌. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ ಇದು ಸಮಾಜದ ಒಳಿತಿಗಾಗಿ ಎಂದು ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತರು ಬಹುಸಂಖ್ಯಾತರಾಗಿದ್ದರೂ ಮಲೆನಾಡಿನಲ್ಲಿ ಅಲ್ಪಸಂಖ್ಯಾತರರಾಗಿದ್ದೀರಿ ಅಲ್ಲದೆ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಗ್ರಾಮ ತಾಲ್ಲೂಕು ಜಿಲ್ಲಾ ಪಂಚಾಯ್ತಿ ಬಿಟ್ಟರೆ ಉಳಿದಂತೆ ಎಂ.ಎಲ್.ಸಿ ಎಂ.ಎಲ್.ಎ ಇನ್ನಾವುದೆ ಜನಪ್ರತಿನಿಧಿಗಳಾಗಲು ಸಾಧ್ಯವಾಗುತ್ತಿಲ್ಲ. ಉಪಪಂಗಡಗಳಲ್ಲಿ ಕೆಲವರು ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಅದರೆ ಪಂಚಮಸಾಲಿ ಮತ್ತು ಮಲ್ಲಗೌಡರು ಹೀಗೆ ಹಲವು ಉಪಪಂಗಡದ ಜನಾಂಗದವರು ಮೀಸಲಾತಿಯಲ್ಲಿ ವಂಚಿತರಾಗಿ ಉದ್ಯೋಗ ವ್ಯಾಸಂಗದಲ್ಲಿ ಹಿಂದುಳಿಯುವಂತಾಗಿದೆ ಎಂದು ವಿಷಾದ ವ್ಯಕ್ತಪಡಿದ ಅವರು, ಇದೇ ಸೆಷ್ಟಂಬರ್ 20 ರೊಳಗೆ ಸರ್ಕಾರ ನಮ್ಮ ಹೋರಾಟದ ಬೇಡಿಕೆಗೆ ಸ್ಪಂದಿಸಿ 2(ಎ) ಮೀಸಲಾತಿ ಘೋಷಿಸದಿದ್ದರೆ ನಮ್ಮ ಹೋರಾಟವನ್ನು ಇನ್ನೂ ಕಠಿಣಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪಶ್ಚಾತ್ತಾಪ ಪಡುವ ಕಾಲ ದೂರವಿಲ್ಲ:

ಮಲೆನಾಡಿನ ಮಲ್ಲಗೌಡರು ಸೇರಿದಂತೆ ಪಂಚಮಸಾಲಿ ಲಿಂಗಾಯಿತ ಸಮಾಜದ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮತ್ತು ಉನ್ನಿತ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ವಂಚಿತರಾಗಿ ಪಶ್ಚಾತ್ತಾಪ ಪಡುವಂತ ಕಾಲ ದೂರವಿಲ್ಲ ಎಂದು ಶ್ರೀಗಳು ಹೇಳಿದರು. ಆ ಕಾರಣದಿಂದಾಗಿ ನಾನು ಈಗಾಗಲೇ ಸಮಾಜದ ಸಂಘಟನೆಯ ಮೂಲದೇಯದೊಂದಿಗೆ ಸಮಾಜದ ಕಟ್ಟಕಡೆಯ ಕುಟುಂಬದ ಯುವ ಪೀಳಿಗೆಗೆ ಇತರ ಸಮಾಜದವರಿಗೆ ದೊರೆಯುವಂತೆ ನಮ್ಮ ಸಮಾಜದ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ದೊರೆಕಿಸುವ ಉದ್ದೇಶದಿಂದಾಗಿ ಹೋರಾಟದ ಕಿಚ್ಚು ಹೊತ್ತಿಸಿದು ತಾವು ಈ ಹೋರಾಟದ ಮೂಲಕ ಹಕ್ಕು ಪ್ರತಿಪಾದಿಸಿ ಎಂದು ಮನವಿ ಮಾಡಿದರು.

ಕೆಳದಿ ಶಿವಪ್ಪ ನಾಯಕ ಮತ್ತು ಚನ್ನಮ್ಮನವರು ಆಳಿದ ನಾಡು:

ಮಲ್ಲಗೌಡರು ಶಾಂತಿ ಸಾಮರಸ್ಯದ ಪ್ರತೀಕರು ಅವರ ನರನಾಡಿಯೂ ಹೋರಾಟದ ಉಸಿರು ವೀರ ಚನ್ನಮ್ಮ ಮತ್ತು ಕೆಳದಿ ಶಿವಪ್ಪನಾಯರು ಆಳಿದ ನಾಡಿನಲ್ಲಿನ ಮಲ್ಲಗೌಡರು ಹೋರಾಟದ ಮೂಲಕ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆಯಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ ಕಾರಣ ಹೋರಾಟಗಾರರನ್ನು ಹತ್ತಿಕ್ಕುವ ಮೂಲಕ ಸಂಘಟಕರಲ್ಲಿ ಒಡಕು ಹುಟ್ಟುಹಾಕಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹೊರಟಿರುವ ವಿರೋಧಿಗಳಿಗೆ ಮುಂದಿನ ದಿನಗಳಲ್ಲಿ ಹೋರಾಟದ ಶಕ್ತಿ ಏನು ಎಂಬ ಅರಿವು ಗೊತ್ತಾಗುತ್ತದೆಂದರು.

ಸಾಗರ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, 2(ಎ) ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿರುವ ಬಸವಮೃತ್ಯುಂಜಯ ಸ್ವಾಮಿಜಿಗೆ ಬೆಂಬಲಿಸುವ ಮೂಲಕ ಮಲೆಗೌಡ ಸಮಾಜದವರನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸುವುದರೊಂದಿಗೆ ಸ್ವಾಮೀಜಿಯರ ಯಾವುದೇ ಹೋರಾಟದ ಕರೆಗೂ ನಾವು ಸಿದ್ದರಾಗಿದ್ದೇವೆ ಇದು ನಮ್ಮ ಹಕ್ಕೊತ್ತಾಯ ಎಂದು ಹೇಳುವುದರೊಂದಿಗೆ ಸ್ವಾಮಿಜಯ ಹೋರಾಟಕ್ಕೆ ಸಂಪೂರ್ಣ ಬೆಂಬಲಯಿದೆ ಎಂದು ಘೋಷಿಸಿದರು.

ಹೊಸನಗರ ತಾ.ಪಂ. ಮಾಜಿ ಸದಸ್ಯ ಬಿ.ಜಿ. ಚಂದ್ರಮೌಳಿ, ವೇದಾಂತಪ್ಪಗೌಡ ಕೋಡೂರು, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಡಿ.ಈ.ಮಧುಸೂದನ್, ಗವಟೂರು ಈಶ್ವರಪ್ಪಗೌಡ, ನಿವೃತ್ತ ಪೊಲೀಸ್ ಅಧಿಕಾರಿ ನಾಗಪ್ಪ ಅಲುವಳ್ಳಿ, ಯಶೋಧ ಈಶ್ವರಪ್ಪಗೌಡ, ಮಹೇಂದ್ರಗೌಡರು ಇನ್ನಿತರರು ಹಾಜರಿದ್ದರು.

ಅಭಿಷೇಕ ಸ್ವಾಗತಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here