ರಾಜಕೀಯ ಮಾಡಲು ಮಾತು ಬಲ್ಲವರಾಗಿರಬೇಕು, ಕ್ರೀಡೆಯಲ್ಲಿ ಗೆಲ್ಲಲು ದೈಹಿಕ ಶ್ರಮತೆ ಮತ್ತು ಚಾಣಕ್ಷತನ ಇರಬೇಕು: ಶಾಸಕ ಹರತಾಳು ಹಾಲಪ್ಪ

0
760

ಹೊಸನಗರ: ರಾಜಕೀಯ ಮಾಡಲು ಮಾತು ಬಲ್ಲವರಾಗಿರಬೇಕು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲಲು ದೈಹಿಕ ಶ್ರಮತೆ ಹಾಗೂ ಚಾಣಕ್ಷತನ ಇರಬೇಕೆಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರು ಹೇಳಿದರು.

ಹೊಸನಗರ ನೆಹರು ಮೈದಾನದಲ್ಲಿ ತಾಲ್ಲೂಕು ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯದಲ್ಲಿ ಎಷ್ಟೇ ನೈಪುಣ್ಯವಿದ್ದರೂ ಮಾತು ಬಲ್ಲವರಾಗಿದ್ದರೇ ಮಾತ್ರ ರಾಜಕೀಯದಲ್ಲಿ ಮುಂದೆ ಬರಲು ಸಾಧ್ಯ. ಅದೇ ರೀತಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವವರು ದೈಹಿಕ ಶ್ರಮತೆಯ ಜೊತೆಗೆ ಚಾಣಕ್ಷ ಬುದ್ಧಿವಂತರಾದರೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲಬಹುದೆಂದರು ಈ ಕ್ರೀಡಾಕೂಟದಲ್ಲಿ ಭಾಗವಹಿಸುವವರು ನಮ್ಮ ಹಾಗೇ ರಾಜಕೀಯ ಮಾಡುವವರೇ ನೀವು ಹೆಚ್ಚು ನಾವು ಹೆಚ್ಚು ಎಂಬುವುದಿಲ್ಲ ಸಣ್ಣ ರಾಜಕೀಯ ಮಾಡಿ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ನಡೆಸುತ್ತಿದ್ದೀರಿ ನಾವು ನಿಮಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಈ ಒಂದು ದಿನವಾದರೂ ರಾಜಕೀಯ ಮರೆತು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳಿ ಎಂದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಸಹಾಯಕ ನಿರ್ದೆಶಕರಾದ ಮಂಜುನಾಥ ಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿ.ಆರ್, ತಹಶೀಲ್ದಾರ್ ವಿ.ಎಸ್. ರಾಜೀವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, 30 ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಸದಸ್ಯರುಗಳು ಹಾಗೂ ಪಿಡಿಓಗಳು, ಎಲ್ಲಾ ಗ್ರಾಮ ಪಂಚಾಯಿತಿಯ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದು ಕ್ರೀಡೆಯಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮ ಯಶಸ್ವಿಯಾಗಲೂ ಕಾರಣರಾದ ದೈಹಿಕ ಶಿಕ್ಷಕರಿಗೆ ಶಾಲೆಯ ವಿದ್ಯಾರ್ಥಿಗಳಿಗೆ ಭಾಗವಹಿಸಿದ ಸಹಕರಿಸಿದ ಎಲ್ಲರನ್ನು ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ರವರು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here