ರಾಜಸ್ಥಾನದಲ್ಲಿ ಟೈಲರ್ ಕನ್ನಯ್ಯ ಲಾಲ್ ಶಿರಚ್ಛೇದನ | ಹೊಸನಗರದಲ್ಲಿ ಪ್ರತಿಭಟನೆ, ಶಿರಚ್ಛೇದನ ಮಾಡಿದ ಉಗ್ರರನ್ನು ಗಲ್ಲಿಗೇರಿಸಿ ; ಉಮೇಶ್ ಕಂಚುಗಾರ್

0
413

ಹೊಸನಗರ: ರಾಜಸ್ಥಾನದಲ್ಲಿ ಹಿಂದು ಟೈಲರ್ ಕನ್ನಯ್ಯ ಲಾಲ್ ಎಂಬ ಹಿಂದು ವ್ಯಕ್ತಿಯನ್ನು ಮೋಸದಿಂದ ಶಿರಾಚ್ಛೇದನ ಮಾಡಿದ್ದು ಇದನ್ನು ಖಂಡಿಸಿ ಹೊಸನಗರದ ಹಿಂದು ಯುವ ಪಡೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಉಮೇಶ್ ಕಂಚುಗಾರ್‌ರವರ ನೇತೃತ್ವದಲ್ಲಿ ಹೊಸನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಹೊಸಗರದ ಗ್ರೇಡ್ 2ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ಶಿರಚ್ಛೇದ ಮಾಡಿದ ಉಗ್ರರನ್ನು ತಕ್ಷಣ ಗಲ್ಲಿಗೇರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ತಾಲ್ಲೂಕು ಅಧ್ಯಕ್ಷರು ಹಾಗೂ ಆರ್‌ಎಸ್‌ಎಸ್ ಮುಖಂಡ ಗಣಪತಿ ಬಿಳಗೋಡು, ಕನ್ನಯ್ಯರವರಿಗೆ ಒಂದು ವಾರದಿಂದ ಬೆದರಿಕೆ ಪತ್ರಗಳು ಬರುತ್ತಿದ್ದರೂ ಅಲ್ಲಿನ ರಾಜಸ್ಥಾನ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವುದೇ ರಕ್ಷಣೆ ನೀಡದೇ ಒಬ್ಬ ವ್ಯಕ್ತಿಯನ್ನು ಕೊಲೆಯಾಗುವವರೆಗೆ ಕಣ್ಣು ಮುಚ್ಚಿ ಕುಳಿತುಕೊಂಡಿದೆ. ನಮ್ಮದು ಶಾಂತಿಯ ಭಾರತ ದೇಶವಾಗಿದ್ದು ಇಂಥಹ ಉಗ್ರರಿಗೆ ಹೆದರಿ ಹಿಂದುಗಳು ಕೈಕಟ್ಟಿಕೊಂಡು ಕುಳಿತಿಲ್ಲ ನಮ್ಮ ದೇಶದ ಮುಸ್ಲಿಮರು ಭಾರತ ದೇಶವನ್ನು ತಾಲಿಬಾನ್ ಮಾಡಲು ಹೋರಟಿದ್ದಾರೆ. ಇದಕ್ಕೆ ಕೆಲವು ಪಕ್ಷದ ನಾಯಕರು ತಾವು ಹಿಂದುಗಳು ಎಂಬುದನೇ ಮರೆತು ಅವರಿಗೆ ಸಾಥ್ ನೀಡುತ್ತಿದ್ದಾರೆ ನಾವು ಎಂದಿಗೂ ಭಾರತ ದೇಶವನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ ಎಂತಹ ಸಂದರ್ಭ ಬಂದರೂ ನಮ್ಮ ಎದೆಯ ರಕ್ತ ಚೆಲ್ಲಿಯಾದರೂ ನಮ್ಮ ದೇಶವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ನಮಗಿದೆ. ಕೆಲವು ಪಕ್ಷಗಳು ಅಲ್ಪ ಸಂಖ್ಯಾತರ ಓಟಿನ ರಾಜಕೀಯಕ್ಕಾಗಿ ನಮ್ಮ ದೇಶವನ್ನೇ ಮರೆತು ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ. ಇದು ಸರಿಯಲ್ಲ ಇದರ ಜೊತೆಗೆ ಪ್ರಧಾನಿಯವರಿಗೂ ಬೆದರಿಕೆ ಹಾಕಿದ್ದಾರೆ. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಇಂಥಹ ಬೆದರಿಕೆಗಳಿಗೆ ಬಗ್ಗುವುದಿಲ್ಲಸ ಭಾರತ ದೇಶದಲ್ಲಿ ತಾಲಿಬಾನ್ ಸಂಸ್ಕೃತಿಯನ್ನು ಹುಟ್ಟು ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಗಲ್ಲಿಗೆ ತಕ್ಷಣ ಏರಿಸಬೇಕೆಂದರು.

ಈ ಪ್ರತಿಭಟನೆಯ ನೇತೃತ್ವ ವಹಿಸಿದ ಆರ್‌ಎಸ್‌ಎಸ್ ಹಿರಿಯ ಮುಖಂಡ ಉಮೇಶ್ ಕಂಚುಗಾರ್ ಮಾತನಾಡಿ, ಈ ಹಿಂದೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಆಳ್ವಿಕೆಯಲ್ಲಿ ಹತ್ತಾರು ಹಿಂದೂಗಳ ಹತ್ಯೆಯಾಗಿದ್ದು ಕೇವಲ ಅಲ್ಪ ಸಂಖ್ಯಾತ ಮತಗಳ ಬ್ಯಾಂಕಿಂಗ್ ಗಾಗಿ ಮುಸ್ಲಿಂ ಸಮಾಜಗಳ ಓಲೈಕೆಗಾಗಿ ಹಿಂದೂಗಳನ್ನು ಬೆದರಿಸಲು ಕಾರಣವಾಗಿದೆ ಈ ಪ್ರಯುಕ್ತ ಕೊಲೆಕಡುಕ ಸಹೋದರರನ್ನು ಗಲ್ಲಿಗೆ ಏರಿಸಬೇಕು ಹಾಗೂ ಇಂತಹ ಕೃತ್ಯಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷವನ್ನು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಿಬೇಕೆಂದು ಹಾಗೂ ಮೃತರ ಕುಟುಂಬಕ್ಕೆ ಅಲ್ಲಿನ ರಾಜ್ಯ ಸರ್ಕಾರ ಒಂದು ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಎಂ.ಎನ್ ಸುಧಾಕರ್, ಮಂಡಾಣಿ ಮೋಹನ್, ಚಂದ್ರಪ್ಪ, ಶ್ರೀಧರ ಉಡುಪ, ಸತ್ಯನಾರಾಯಣ ವಿ, ಹೆಚ್.ಎಸ್.ಮಂಜುನಾಥ, ಪಟ್ಟಣ ಪಂಚಾಯಿತಿ ಸದಸ್ಯರಾದ ಗುರುರಾಜ್ ಆರ್, ಗಾಯತ್ರಿ ನಾಗರಾಜ್, ಗುಡ್ಡೆಕೊಪ್ಪ ಪ್ರವೀಣ್, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಚಾಲುಕ್ಯ ಬಸವರಾಜ್, ಮಾವಿನಕೊಪ್ಪ ಗೌತಮ್, ವಿಜಯಕುಮಾರ್, ಗುಲಾಬಿ ಮರಿಯಪ್ಪ, ಶಂಕರಣ್ಣ, ಮಾವಿನಕೊಪ್ಪ ಶ್ರೀಧರ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here