ರಾಜ್ಯಕ್ಕೆ ಮಾದರಿ: ಶ್ರಮದಾನದೊಂದಿಗೆ ಸರ್ಕಾರಿ ಕೆರೆ ಹೂಳೆತ್ತುವ ಕಾಯಕದಲ್ಲಿ ಕಲ್ಲುಕೊಪ್ಪದ ರೈತರು..!

0
569

ರಿಪ್ಪನ್‌ಪೇಟೆ: ಸರ್ಕಾರವೇ ಎಲ್ಲವನ್ನು ಮಾಡಬೇಕು ಎನ್ನುವ ಇಂದಿನ ದಿನಗಳಲ್ಲಿ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲುಕೊಪ್ಪ ಗ್ರಾಮದ ರೈತ ಕುಟುಂಬದವರು ನಿವೃತ್ತ ಶಿಕ್ಷಕ ದಿ.ಹೆಚ್.ಸಿ. ರುದ್ರಪ್ಪಗೌಡರ ಸ್ಮರಣಾರ್ಥ ಸರ್ವೇ ನಂಬರ್ 7 ರ ಸರ್ಕಾರಿ ಕೆರೆಯ ಹೂಳೆತ್ತುವ ಮೂಲಕ ತಮ್ಮ ಕೃಷಿಭೂಮಿಗೆ ಕೆರೆಯ ಗೋಡಯನ್ನು (ಫಲವತ್ತಾದ ಕೆರೆಯ ಮಣ್ಣಯನ್ನು) ಹೊಡೆದುಕೊಳ್ಳುವುದರೊಂದಿಗೆ ಜಮೀನಿನ ಮೇಲ್ಭಾಗದ ಕೆರೆಯ ನೀರು ನಿಲ್ಲಿಸುವ ಅಂತರ್ಜಲವನ್ನು ವೃದ್ದಿಸಿಕೊಳ್ಳುವ ಕಾಯಕದಲ್ಲಿ ತೊಡಗಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಎಷ್ಟೋ ಕಡೆಗಳಲ್ಲಿ ಕೆರೆಗಳ ಹೂಳುತ್ತುವ ಕಾಯಕದಲ್ಲಿ ಲಕ್ಷಾಂತರ, ಕೋಟ್ಯಂತರ ಹಣವನ್ನು ದೋಚುವ ಕಾಯಕದಲ್ಲಿ ತೊಡಗಿರುವ ಉದಾಹರಣೆಗಳು ಜನಮಾನಸದಲ್ಲಿ ಉಳಿದಿರುವಾಗ ಜಮೀನಿನ ಮೇಲ್ಭಾಗದಲ್ಲಿನ ಕೆರೆಯಲ್ಲಿ ಹೂಳು ತುಂಬಿ ಕೆರೆಯಲ್ಲಿ ನೀರು ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು ಇಲ್ಲಿನ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಟ್ರ್ಯಾಕ್ಟರ್‌ಗಳ ಮೂಲಕ ಸರ್ಕಾರಿ ಕೆರೆಯ ಹೂಳತ್ತುವುದರೊಂದಿಗೆ ತಮ್ಮ ತೋಟ ಗದ್ದೆಗಳಿಗೆ ಫಲವತ್ತಾದ ಕೆರೆಯ ಮಣ್ಣನ್ನು ಹೊಡೆಸಿಕೊಳ್ಳುತ್ತಾ ಶ್ರಮದಾನದಲ್ಲಿ ತೊಡಗಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಹೂಳೆತ್ತುವ ಕಾಯಕದಲ್ಲಿ ನಿರತರಾದ ರೈತ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಆರ್.ರೂಪಾಧರ ಹಾಗೂ ಆರ್.ನಾಗರಾಜ್ ಮತ್ತು ಕಮಲಾಕ್ಷಪ್ಪನವರ ಅನಿಸಿಕೆಯನ್ನು ಪ್ರಸ್ತಾಪಿಸಿದಾಗ, ನಾವು ರೈತರು ನಮ್ಮೂರಿನ ಕೆರೆಯ ಫಲವತ್ತಾದ ಮಣ್ಣು ತೋಟಗದ್ದೆಗಳಿಗೆ ಬಳಸುವುದರಿಂದ ಭೂಮಿಯ ಫಲವತ್ತತೆ ವೃದ್ದಿಯಾಗುವುದು ಮತ್ತು ಬೆಳೆಯಲ್ಲಿ ಇಳುವರಿ ಹೆಚ್ಚಾಗುವುದು, ಅಲ್ಲದೆ ಕೆರೆಯಲ್ಲಿ ಅಂತರ್ಜಲ ಹೆಚ್ಚಾಗುವುದರಿಂದ ಕೆರೆಯ ಅಚ್ಚುಕಟ್ಟುದಾರರಿಗೆ ಬೇಸಿಗೆಯಲ್ಲಿ ತೋಟ ಗದ್ದೆಯಲ್ಲಿನ ಬೆಳೆಗೆ ನೀರು ಹರಿಸಲು ಸಹಕಾರಿಯಾಗುವುದರೊಂದಿಗೆ ವನ್ಯಜೀವಿಗಳಿಗೂ ಜಾನುವಾರುಗಳಿಗೂ ಬೇಸಿಗೆಯಲ್ಲಿ ಕುಡಿಯಲು ನೀರು ದೊರೆಯುವುದೆಂದರು.

ಹೀಗೆ ಎಲ್ಲ ರೈತರಲ್ಲಿ ಇಂತಹ ಆಲೋಚನೆಗಳು ಮೂಡಿದರೆ ಸರ್ಕಾರದ ದುಂದುವೆಚ್ಚಕ್ಕೆ ಕಡಿವಾಣ ಬೀಳುವುದರೊಂದಿಗೆ ಕೆರೆಗಳ ಜೀರ್ಣೋದ್ದಾರದೊಂದಿಗೆ ಸಂವೃದ್ದಿಯನ್ನು ಕಾಣಲು ಸಾಧ್ಯವಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here