ರಾಜ್ಯದಲ್ಲೇ ಅತಿ ಹೆಚ್ಚು ಬಾರಿ ವಿದ್ಯುತ್ ವ್ಯತ್ಯಯಗೊಳ್ಳುವ ತಾಲೂಕು ಯಾವುದು ಗೊತ್ತಾ?

0
2329

ಹೊಸನಗರ : ಇಡಿ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಶರಾವತಿ ವಿದ್ಯುದಾಗಾರಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕು ತನ್ನ ಇಡಿ ಭೂ ಪ್ರದೇಶವನ್ನು ಶರಾವತಿ ಹಿನ್ನೀರಿಗೆ ತನ್ನ ಒಡಲು ಒಪ್ಪಿಸಿದ್ದರೂ ಸಹ ತಾನು ಉತ್ಪಾದಿಸುವ ವಿದ್ಯುತ್ತನ್ನು ಪಡೆಯುವಲ್ಲಿ ವಿಫಲವಾಗಿ ರಾಜ್ಯದಲ್ಲೇ ತಾಲೂಕು ಅತಿ ಹೆಚ್ಚು ಬಾರಿ ವಿದ್ಯುತ್ ವ್ಯತ್ಯಯಗೊಳ್ಳುವ ತಾಲೂಕೆಂಬ ಖ್ಯಾತಿಗೆ ಒಳಗಾಗಿದೆ.

ಇದೀಗ ಗೌರಿ, ಗಣೇಶ ಹಬ್ಬದ ಸಮಯವಾಗಿದ್ದು ವಿದ್ಯುತ್ ತೊಂದರೆಯಿಂದ ಬಸವಳಿದ ಪಟ್ಟಣದ ವರ್ತಕ ಸಂಘದವರು ಇಂದು ಕಚೇರಿಗೆ (K.E.B – ಕರೆಂಟ್ ಇರಲ್ಲ ಬಿಡಿ) ತೆರಳಿ ಹಬ್ಬದ ಸಂಭ್ರಮ ಕಳೆಯುವವರೆಗಾದರೂ ದಿನವಿಡೀ ವಿದ್ಯುತ್ ನೀಡಲು ಆಚರಿಸುವಂತೆ ಅಭಿಯಂತರವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಮಲೇಬೈಲ್ ಪೂರ್ಣೇಶ್, ವಾದಿರಾಜ ಭಟ್, ಬಿ.ಎಸ್ ಸುರೇಶ್, ಮಂಜು, ವಿಠಲ್ ರಾವ್, ಸ್ವಾಮಿಗೌಡ್ರು ಮೊದಲಾದವರು ಮೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಎರಡು ವರ್ಷದ ಲಾಕ್‌ಡೌನ್ ನಿಂದ ವ್ಯಾಪಾರಸ್ಥರು ಹೈರಾಣಾಗಿದ್ದು ಈ ಬಾರಿಯ ಗಣೇಶೋತ್ಸವ ಸಮಯದಲ್ಲಾದರೂ ಪೂರ್ಣ ಪ್ರಮಾಣದ ವಿದ್ಯುತ್ ನೀಡುವ ಮೂಲಕ ವರ್ತಕರ ಹಾಗೂ ಅವರನ್ನು ನಂಬಿರುವ ನಾಗರಿಕರ ನೆರವಿಗೆ ಬರಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿಗೆ ಉತ್ತರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಬ್ಬ ಕಳೆಯುವವರೆಗೂ ವಿದ್ಯುತ್ ವ್ಯತ್ಯಯ ಆಗದಂತೆ ನಿಗಾವಹಿಸುವ ಭರವಸೆ ನೀಡಿದ ಬಗ್ಗೆ ತಿಳಿದುಬಂದಿದೆ.

ಹೊಸನಗರ ತಾಲೂಕಿನ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ತಾಲೂಕಿನ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸಿರುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ವರದಿ: ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here