ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು ಬಹಳಷ್ಟು ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಂಡಿದೆ ; ಬಿವೈಆರ್

0
726

ಶಿವಮೊಗ್ಗ: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಜೈರಾಂ ಗಡ್ಕರಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿರುತ್ತದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಗತ್ಯವಿರುವ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ದೊರಕಿಸಿಕೊಡಲು ಯಶಸ್ವಿಯಾಗಿದ್ದು ಬಹಳಷ್ಟು ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಂಡಿರುವುದು ಕಾಣಬಹುದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸುಮಾರು 203 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 766(2) ಬೈಂದೂರು – ರಾಣೇಬೆನ್ನೂರು ರಸ್ತೆ ರಾಜ್ಯದ ಮಧ್ಯ ಭಾಗ ಹಾಗು ಕರಾವಳಿ ಭಾಗವನ್ನು ಸಂಪರ್ಕಿಸುವ ಏಕಪಭ ಹಾಗು ಮದ್ಯಂತರ ಪಥದ ರಸ್ತೆಗಳಾಗಿದ್ದು ಇವುಗಳನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಕೋರಿದ ಫಲವಾಗಿ ಕೊಲ್ಲೂರು ಪಟ್ಟಣ, ನಾಗೋಡಿ, ಜಯನಗರ ದಿಂದ ಹೊಸನಗರ ಬಟ್ಟೆ ಮಲ್ಲಪ್ಪದಿಂದ ಯಡೇಹಳ್ಳಿ, ಕಿಟ್ಟದ ಹಳ್ಳಿಯಿಂದ ಮಾಸೂರು ರಟ್ಟಿ ಹಳ್ಳಿ, ಹಾಗು ಹಲಗೇರಿ ಭಾಗಗಳ ಒಟ್ಟು 27.78 ಕಿಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳಿಗೆ ರೂ 218.93 ಕೋಟಿಯ ಅಂದಾಜಿಗೆ ಮಂಜೂರಾತಿ ನೀಡಲಾಗಿದ್ದು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲಿದೆ. ಈಗ ಈ ಕೆಳಕಂಡ ಪ್ರಮುಕ ಕಾಮಗಾರಿಯ ಡಿ.ಪಿ.ಆರ್‌ ತಯಾರಿಸುವ ಕೆಲಸ ಅಂತಿಮ ಹಂತದಲ್ಲಿದ್ದು, ಶೀಘ್ರ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಲು ಯೋಜಿಸಲಾಗೊರುತ್ತದೆ.

• ರಾ.ಹೆ. 766 ಸಿ ನ ಕಿಮೀ 55.60 ರಿಂದ ಕಿ.ಮೀ 90.70 ರವರೆಗೆ ಸಂಪಕಟ್ಟೆ ಆಡುಗೋಡಿಯಿಂದ ಹೊಸನಗರದ ಮಾವಿನಕೊಪ್ಪ ವೃತ್ತ ಸಂಪರ್ಕಿಸುವ 14.50 ಕಿ.ಮೀ ಉದ್ದದ ಬೈಪಾಸ್ ರಸ್ತೆ ಹಾಗು ಸೇತುವೆಗಳ ನಿರ್ಮಾಣ ಕಾಮಗಾರಿ.

ರಾಷ್ಟ್ರೀಯ ಹೆದ್ದಾರಿ 766 ಸಿ ನ ಕಿ.ಮೀ 55.60 ರಿಂದ 90.70 ರವರೆಗಿನ ಸುಮಾರು 35.10 ಕಿ.ಮೀ ಉದ್ದದ ರಸ್ತೆಯು ಬಹುತೇಕ ಘಾಟಿ ರಸ್ತೆಯಾಗಿದ್ದು ಅತಿ ಅಪಾಯಕಾರಿ ಹಾಗು ಕ್ಲಿಷ್ಟಕರವಾದ ತಿರುವುಗಳಿಂದ ಕೂಡಿದ್ದು ಇದರಲ್ಲಿ ಪ್ರಯಾಣಿದುವುದು ದುಸ್ತರವಾಗಿದ್ದು, ಇದಕ್ಕೆ ಪಠ್ಯಾಯವಾಗಿ ಕೇವಲ 14,50 ಕಿ.ಮೀ ಉದ್ದದ ಬೈಪಾಸ್ ರಸ್ತೆಯನ್ನು ಹೊಸನಗರ ಮಾವಿನ ಕೊಪ್ಪ ವೃತ್ತದಿಂದ ಹೊಸನಗರ ಪಟ್ಟಣದ ಬೈಪಾಸ್ ರಸ್ತೆ ಸೇರಿದಂತೆ ಹೊಸನಗರದ ಹೋಲಿ ರಿಡೀಮರ್ ಶಾಲೆಯ ಹಿಂಭಾಗದಲ್ಲಿ ಹಾಗು ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ 2 ಭಾರೀ ಸೇತುವೆ ಮತ್ತು ಆಡುಗೋಡಿ ಬಳಿ 2 ಸೇತುವೆಗಳ ನಿರ್ಮಾಣ ಮಾಡುವುದರೊಂದಿಗೆ ಈ ಭಾಗದ ಸುತ್ತಾ ಟೆಂಕೆಜೈಲು, ಎಲ್. ಗುಡ್ಡೆಕೊಪ್ಪ, ಹೆಬ್ಬುರ್ಲಿ, ಹೊಸೂರು ಗ್ರಾಮಗಳ ಮೂಲಕ ಆಡುಗೋಡಿ ಸೇರುವ ದ್ವಿಪಥದ ರಸ್ತೆಯನ್ನು 100 ಕಿ.ಮೀ ವೇಗದಲ್ಲಿ ಸರಾಗವಾಗಿ ಚಲಿಸಲು ವಿನ್ಯಾಸಗೊಳಿಸಿ ಡಿ.ಪಿ.ಆರ್ ತಯಾರಿಸುವ ಕೆಲಸ ಪೂರ್ಣಗೊಂಡಿರುತ್ತದೆ. ಕೇಂದ್ರ ಭೂಸಾರಿಗೆ ಮಂತ್ರಾಲಯವು 2022-23 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ 180 ಕೋಟಿರೂಗಳ ಸದರಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಡಿ.ಪಿ.ಆರ್. ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಸದರಿ ಬೈಪಾಸ್ ರಸ್ತೆ ನಿರ್ಮಾಣದಿಂದ ಸುರಕ್ಷಿತ ಪ್ರಯಾಣ, ಸಮಯ ಹಾಗು ಇಂದನ ವೆಚ್ಚ ಉಳಿತಾಯವಾಗುವುದರೊಂದಿಗೆ ಈ ಭಾಗದ ಹಿಂದುಳಿದ ಗ್ರಾಮಗಳ ಸಂಪರ್ಕ ಸಹ ಕಲ್ಪಿಸಬಹುದಾಗಿರುತ್ತದೆ.

ಸದರಿ ಯೋಜನೆಗೆ ಒಟ್ಟು 108 ಎಕರೆಯಷ್ಟು ಜಾಗದ ಅಗತ್ಯವಿದ್ದು ಇದರ ಪೈಕಿ 73 ಎಕರೆ ಜಾಗ ಕರ್ನಾಟಕ ಸರ್ಕಾರದ ಕೆ.ಪಿ.ಸಿ., ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ್ದು ಇವುಗಳ ಬಿಡುಗಡೆಗೆ ಸಹ ಈಗಾಗಲೇ ಪ್ರಸ್ಥಾವನೆ ಸಲ್ಲಿಸಿ ಅಗತ್ಯ ಕ್ರಮವಹಿಸಲಾಗಿರುತ್ತದೆ. ಮತ್ತು ಬಾಕಿ ಉಳಿದ ಭೂ ಮಾಲೀಕರ ಜಮೀನಿಗೆ ನಿಯಮಾನುಸಾರ ಪರಿಹಾರ ನೀಡಿ ಭೂಸ್ವಾಧೀನ ಮಾಡಲು ಸಹ ಅಗತ್ಯ ಕ್ರಮವಹಿಸಲಾಗಿರುತ್ತದೆ.

• ರಾ.ಹೆ. 766 ಸಿ ಬೈಂದೂರು ರಾಣೆ ಬೆನ್ನೂರು ರಸ್ತೆ ಶಿಕಾರಿಪುರ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣ.

ರೂ 100 ಕೋಟಿ ಅಂದಾಜಿನ ಸದರಿ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮಂತ್ರಾಲಯವು 2022-23 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ನೀಡಿದ್ದು, ಶಿಕಾರಿಪುರ ಪಟ್ಟಣಕ್ಕೆ ಅಗತ್ಯವಿದ್ದ ಒಟ್ಟು 6.50 ಕಿ.ಮೀ ಉದ್ದದ ಬೈಪಾದ್ ರಸ್ತೆ ನಿರ್ಮಾಣ ಕೆಲಸದ ಡಿ.ಪಿ.ಆರ್ ತಯಾರಿಸುವ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಿ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here