ರಾಜ್ಯ ಪಠ್ಯ ಪುಸ್ತಕ ಸಮಿತಿಯಿಂದ ತಕ್ಷಣ ರೋಹಿತ್ ಚಕ್ರತೀರ್ಥರವರನ್ನು ವಜಾ ಮಾಡಿ ಇಲ್ಲವಾದರೇ ಸರ್ಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯ ; ಹಾಲಗದ್ದೆ ಉಮೇಶ್

0
246

ಹೊಸನಗರ: ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸುವ ರೀತಿಯಲ್ಲಿ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ಉಣ ಬಡಿಸಿದ್ದು ತಕ್ಷಣ ಈ ಪಠ್ಯಪುಸ್ತಕವನ್ನು ವಾಪಸ್ಸು ಪಡೆಯಬೇಕು ಹಾಗೂ ಹಿಂದಿನ ಸಾಲಿನಲ್ಲೇ ಇದ್ದ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಅದರ ಜೊತೆಗೆ ಕರ್ನಾಟಕ ರಾಜ್ಯ ಪುಸ್ತಕ ಸಮಿತಿಯಿಂದ ರೋಹಿತ್ ಚಕ್ರತೀರ್ಥರವರನ್ನು ವಜಾ ಮಾಡುವುದರ ಜೊತೆಗೆ ದೇಶ ದ್ರೋಹಿ ಕೇಸು ಹಾಕಿ ಜೈಲಿಗೆ ಕಳುಹಿಸಬೇಕೆಂದು ಹಾಲಗದ್ದೆ ಉಮೇಶ್‌ರವರು ಆಗ್ರಹಿಸಿದರು.

ಹೊಸನಗರದ ಎಲ್ಲ ಪಕ್ಷದ ನಾಯಕರುಗಳ ಹಾಗೂ ಕೆಲವು ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಪಠ್ಯ ಪುಸ್ತಕವನ್ನು ತೆಗೆದು ಹಾಕುವಂತೆ ಹಾಗೂ ಚಕ್ರತೀರ್ಥರವರ ವಿರುದ್ಧ ಪ್ರತಿಭಟನಾ ಮೆರವಣಿಗೆ ಹಾಗೂ ತಹಶೀಲ್ದಾರ್‌ರವರಿಗೆ ಮನವಿ ಪತ್ರವನ್ನು ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ನೇತೃತ್ವ ವಹಿಸಿ ಮನವಿ ಪತ್ರ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಕಾಲೇಜಿನ ಪ್ರಾಂಶುಪಾಲರಾದ ಸೊನಲೆ ಶ್ರೀನಿವಾಸ್‌, ರೋಹಿತ್ ಚಕ್ರತೀರ್ಥನು ಅಪ್ರಭುದ್ಧ ಹಾಗೂ ನಾಡಪ್ರಜ್ಞೆ ಇಲ್ಲದ ವ್ಯಕ್ತಿಯಾಗಿದ್ದು ಈತನ ಮಾತು ಮತ್ತು ಬರಹಗಳು ದೇಶದ ಸಂವಿಧಾನದ ಅಶಯಗಳಿಗೆ ಹಾಗೂ ಬಹುತ್ವಕ್ಕೆ ವಿರುದ್ಧವಾಗಿದೆ ಹೀಗಾಗಿ ನಾಡು ಮತ್ತು ದೇಶದ ಅಶಾಂತಿಗೆ ಕಾರಣರಾಗುತ್ತಿರುವ ಈತನನ್ನು ಅತ್ಯಂತ ಜವಾಬ್ದಾರಿಯುತವಾದ ಹುದ್ದೆಗೆ ನೇಮಿಸಿರುವುದು ಸರ್ಕಾರದ ತಪ್ಪು ಹೆಜ್ಜೆಯಾಗಿದೆ ಹೀಗಾಗಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರೋಹಿತ್ ಚಕ್ರತೀರ್ಥನನ್ನು ವಜಾ ಮಾಡಲಿ ಎಂದರು.

ರಿಪ್ಪನ್‌ಪೇಟೆಯ ಚಾಬುಸಾಬ್‌ರವರು ಈ ಸಂದರ್ಭದಲ್ಲಿ ಮಾತನಾಡಿ, ರೋಹಿತ್ ಚಕ್ರತೀರ್ಥ ಹಿಂದಿನಿಂದಲೂ ತನ್ನ ಬರಹಗಳ ಮೂಲಕ ಸದಾ ಸಂವಿಧಾನದ ಅಶಯಗಳಿಗೆ ನಾಡಿನ ಬಹುತ್ವಕ್ಕೆ ಅಪಚಾರ ಮಾಡಿಕೊಂಡು ಬರುತ್ತಿರುವುದು ಆತನ ಸಾಮಾಜಿಕ ಜಾಲತಾಣಗಳ ಬರಹಗಳ ಮೂಲಕ ತಿಳಿದು ಬರುತ್ತಿದೆ ಹೀಗಿದ್ದೂ ಸರ್ಕಾರ ಅತ್ಯಂತ ಕೆಟ್ಟ ಹೆಜ್ಜೆಯ ಮೂಲಕ ಅತ್ಯಂತ ಪವಿತ್ರವಾದ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ಖಂಡನೀಯ ಎಂದು ಹೇಳಿ ತಕ್ಷಣ ಇವರನ್ನು ಸಮಿತಿಯಿಂದ ವಜಾ ಮಾಡಿ ಎಂದರು.

ನಂತರ ಗ್ರೇಡ್ 2ತಹಸೀಲ್ದಾರ್ ರಾಕೇಶ್ ಹಾಗೂ ಪ್ರಥಮ ದರ್ಜೆಗುಮಾಸ್ಥರಾದ ವಿನಯ್ ಎಂ ಆರಾಧ್ಯರವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ರಾಜ್ಯಪಾಲರಿಗೆ ಕಳುಹಿಸುವಂತೆ ಮನವಿ ಮಾಡಿದರು. ಈ ಪ್ರತಿಭಟನೆ ಮೆರವಣಿಕೆ ಹಾಗೂ ಮನವಿ ಪತ್ರ ನೀಡುವ ಸಂದರ್ಭದಲ್ಲಿ ವಾಟಗೋಡು ಸುರೇಶ್, ಮಂಜುನಾಥ್ ಬ್ಯಾಣದ್, ಮಂಜುನಾಥ್ ಶ್ರೇಷ್ಠಿ, ರಾಘವೇಂದ್ರ ಹೆಚ್.ಎಸ್, ಜಯನಗರ ಶುಭಾಕರ, ಜಯನಗರ ಗುರು, ಕೆ ಇಲಿಯಾಸ್, ಗ್ಯಾಸ್ ಮಹೇಂದ್ರ, ಬಿ.ಜಿ ನಾಗರಾಜ್, ಕೆ ಇಲಿಯಾಸ್, ಡಾ|| ಪ್ರವೀಣ್‌ಕುಮಾರ್, ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆ ಟಿ.ಆರ್. ಕೃಷ್ಣಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಸಿಂಥಿಯಾ, ಶಾಹಿನಾ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here