ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರ ಜಿಲ್ಲಾ ಪ್ರವಾಸ

0
84


ಶಿವಮೊಗ್ಗ: ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾದ ಗೋವಿಂದ ಜಟ್ಟಪ್ಪನಾಯ್ಕ ಇವರು ಸೆ.26 ಮತ್ತು 27 ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳುವರು.


ಅಧ್ಯಕ್ಷರು ಸೆ.26 ರಂದು ಬೆಳಿಗ್ಗೆ 04 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗಕ್ಕೆ ತಲುಪಿ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಭೇಟಿ ನೀಡುವರು. ಬೆಳಿಗ್ಗೆ 8.45 ಕ್ಕೆ ತ್ಯಾವರೆಕೊಪ್ಪದಿಂದ ಹೊರಟು ಬೆಳಿಗ್ಗೆ 9.15 ಕ್ಕೆ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 2.30 ಕ್ಕೆ ಮಲೆಶಂಕರಕ್ಕೆ ಭೇಟಿ ನೀಡಿ ಸ್ಥಳೀಯರು ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸುವರು. ಮಧ್ಯಾಹ್ನ 3.3.0 ಕ್ಕೆ ಗುಳೆ ಗುಳೆ ಶಂಕರ ಹಾಗೂ ಮಧ್ಯಾಹ್ನ 3.45 ಕ್ಕೆ ಬೆನವಳ್ಳಿ ಅತಿಥಿಗೃಹಕ್ಕೆ ಭೇಟಿ ನೀಡುವರು. ಸಂಜೆ 4.30 ಕ್ಕೆ ಅಮ್ಮನಘಟ್ಟಕ್ಕೆ ಭೇಟಿ ನೀಡಿ ಸ್ಥಳೀಯರು ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸುವರು. ಸಂಜೆ 5.30 ಕ್ಕೆ ಹುಂಚದ ಹೊಂಬುಜಾಶ್ರೀ ಜೈನಮಠಕ್ಕೆ ಭೇಟಿ ನೀಡುವರು. ಸಂಜೆ 6.30 ಕ್ಕೆ ಅಂಬುತೀರ್ಥ ಮಾರ್ಗದಲ್ಲಿ ಕುಮುದ್ವತಿ ತೀರ್ಥ ಶ್ರೀ ಬಿಲ್ಲೇಶ್ವರ ದೇವರಕಾಡು ಪರಿಶೀಲನೆ ನಡೆಸುವರು. ಸಂಜೆ 7.30 ಕ್ಕೆ ರಾಮಚಂದ್ರಾಪುರ ಮಠದ ಗೋಶಾಲೆಗೆ ಭೇಟಿ ನೀಡುವರು. ರಾತ್ರಿ 8.10 ಕ್ಕೆ ಕಾರ್ಗಡಿ(ಕಾರಣಗಿರಿ) ಸ್ಥಳೀಯರು ಮತ್ತು ಪರಿಸರ ತಜ್ಞರೊಂದಿಗೆ ಸಮಾಲೋಚನೆ ನಡೆಸುವರು. ರಾತ್ರಿ 9 ಗಂಟೆಗೆ ಚಕ್ರಾನಗರಕ್ಕೆ ತೆರಳುವರು.


ಸೆ.27 ರಂದು ಬೆಳಿಗ್ಗೆ 9.30 ಕ್ಕೆ ಚಕ್ರಾನಗರದಿಂದ ಹೊರಟು 9.45 ಕ್ಕೆ ಮಾಸ್ತಿಕಟ್ಟೆಯಲ್ಲಿ ಸ್ಥಳೀಯರು ಹಾಘೂ ಅರಣ್ಯ ಅಧಿಕಾರಗಳೊಂದಿಗೆ ಸಮಾಲೋಚನೆ ನಡೆಸುವರು. ಬೆಳಿಗ್ಗೆ 10.30 ಕ್ಕೆ ಹುಲಿಕಲ್ ಚಂಡಿಕಾಂಬದಲ್ಲಿನ ಘಟ್ಟ ಪ್ರದೇಶ ಪರಿಶೀಲನೆ, ಮಧ್ಯಾಹ್ನ 12 ಗಂಟೆಗೆ ಕಮಲಶಿಲೆ ಯಡಮೊಗ್ಗೆಯ ಅದ್ಭುತಗುಹೆಗೆ ಭೇಟಿ ನೀಡಿ ಪರಿಶೀಲಿಸುವರು. ಮಧ್ಯಾಹ್ನ 1 ಗಂಟೆಗೆ ಕೊಲ್ಲೂರಿಗೆ ತೆರಳುವರು.

ಜಾಹಿರಾತು

LEAVE A REPLY

Please enter your comment!
Please enter your name here