23.2 C
Shimoga
Sunday, November 27, 2022

ರಾಜ್ಯ ಸರ್ಕಾರಕ್ಕೆ ತುಕ್ಕು ಹಿಡಿದಿದೆ ; ಕಲಗೋಡು ರತ್ನಾಕರ ಗಂಭೀರ ಆರೋಪ

ಹೊಸನಗರ : ಬಿಜೆಪಿ ಆಡಳಿತ ರಾಜ್ಯ ಸರ್ಕಾರಕ್ಕೆ ತುಕ್ಕು ಹಿಡಿದಿದೆ ಎಂದು ಕಲಗೋಡು ರತ್ನಾಕರ ಗಂಭೀರವಾಗಿ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಾದ ಗಾಂಧಿ ಮಂದಿರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರವರು ಕರೆದ ಮಾಧ್ಯಮ ಮಿತ್ರರ ಸಮಾಗಮದಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ತುಕ್ಕು ಹಿಡಿದು ನಿಷ್ಕ್ರಿಯಗೊಂಡ ಆಡಳಿತ ಬಗ್ಗೆ ಗಂಭೀರವಾಗಿ ಆರೋಪಿಸಿ, ರಾಜ್ಯದ ಜನತೆ ಎಂದೆಂದೂ ಕಾಣದಂತ ನಿಷ್ಕ್ರಿಯ ಸರ್ಕಾರವನ್ನು ಕಾಣುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸವಾಗಿದೆ. ಗ್ರಾಮಾಭಿವೃದ್ಧಿ ಮೂಲಕ ಸದೃಢ ಸರ್ಕಾರ ನೀಡುವ ಬಗ್ಗೆ ಜನರಿಗೆ ನೀಡಿದ ಭರವಸೆ ಹುಸಿಯಾಗಿದೆ. ಗ್ರಾಮ ಪಂಚಾಯಿತಿಗಳ ಅನುದಾನಗಳನ್ನು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬಳಸದೆ ಅವುಗಳ ಬೊಕ್ಕಸವನ್ನು ಸರ್ಕಾರವೇ ಬರಿದು ಮಾಡುತ್ತಿರುವುದು ಖಂಡನಾರ್ಹವಾಗಿದ್ದು ಗ್ರಾಮ ಪಂಚಾಯಿತಿಗಳು ನಿಷ್ಕ್ರಿಯವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು‌.

ಮಲೆನಾಡಿನಲ್ಲಿ ವಕ್ಕರಿಸಿದ ಎಲೆಚುಕ್ಕಿ ರೋಗದಿಂದ ಮಲೆನಾಡಿನ ಅಡಿಕೆ ಬೆಳಗಾರರು ಪರಿಹಾರ ಕಾಣದೆ ಹೈರಾಣಾಗಿದ್ದು ಆತ್ಮಹತ್ಯೆ ಒಂದೇ ದಾರಿ ಎಂಬ ಪರಿಸ್ಥಿತಿ ಎದುರಿಸುತ್ತಿದ್ದರು ರಾಜ್ಯ ಸರ್ಕಾರ ಯಾವುದೇ ಪುನರ್ ವ್ಯವಸ್ಥೆ ಕೈಗೊಳ್ಳದೆ ಜಡ್ಡು ಹಿಡಿದು ಕುಳಿತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಸರ್ಕಾರ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ಸಿಬಿಐ ತನಿಖೆ ಒಳಪಡಿಸುವ ದಾವಂತದಲ್ಲಿರುವುದು ರಾಜ್ಯದ ಜನರ ದುರಂತವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾನು ಸಹ ಒಬ್ಬ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಬಗ್ಗೆ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಆರ್ ಪ್ರಭಾಕರ್ ತಾಲೂಕ್ ಪಂಚಾಯತಿ ಮಾಜಿ ಸದಸ್ಯರಾದ ಎರಗಿ ಉಮೇಶ್, ಬಿ.ಜಿ ಚಂದ್ರಮೌಳಿ, ಜಯಶೀಲಪ್ಪ ಗೌಡ, ಈಶ್ವರಪ್ಪ ಗೌಡ, ಸಿದ್ದಪ್ಪ, ಎಂ.ಪಿ ಸುರೇಶ್, ಕೆ ಕೆ ಅಶ್ವಿನಿ ಕುಮಾರ್, ನಾಗರಾಜ ಗೌಡ, ಶ್ರೀನಿವಾಸ್, ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.

ಡಿ.ಎಂ ಸದಾಶಿವ ಶೆಟ್ಟಿ ಸ್ವಾಗತಿಸಿದರು. ಮಧು ವಂದಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!