ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಠ್ಯಪುಸ್ತಕ ಕ್ರಮ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಜೂ. 15ರಂದು ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆ: ಕಿಮ್ಮನೆ ರತ್ನಾಕರ್

0
445

ಹೊಸನಗರ: ಬಿಜೆಪಿ ಪಕ್ಷದವರು ರಾಜ್ಯದ ಆಡಳಿತ ನಡೆಸುತ್ತಿದ್ದು ನಾಲ್ಕು ವರ್ಷಗಳಿಂದ ಯಾವುದಾದರೂ ಹಗರಣದಲ್ಲಿ ಭಾಗಿ ಆಗಿ ಅದನ್ನು ಮುಚ್ಚಿಕೊಳ್ಳಲು ಇನ್ನೊಂದು ಹಗರಣ ಮಾಡಿಕೊಳ್ಳುತ್ತಿದ್ದು ಅದರಂತೆ 1ರಿಂದ 10ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಸಮಾಜ ಸುಧಾರಕರು ಸಾಧು ಸಂತರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರನ್ನು ರಾಷ್ಟಕವಿ ಪ್ರಶಸ್ತಿ ಪಡೆದ ಕುವೆಂಪು, ನಾರಾಯಣಗುರು ಸ್ವಾಮೀಜಿಯವರು ಬಸವಣ್ಣನವರು, ಸಂವಿಧಾನ ಶಿಲ್ಪಿ, ಅಂಬೇಡ್ಕರ್, ಇವರುಗಳಿಗೆ ಪಠ್ಯದಲ್ಲಿ ಸೇರಿಸದೆ ಅವಮಾನಿಸಿದ್ದು ತಕ್ಷಣ ಈ ಪಠ್ಯಪುಸ್ತಕವನ್ನು ರದ್ದು ಮಾಡಬೇಕು ಹಾಗೂ ಹಿಂದಿನ ಸಾಲಿನಲ್ಲಿ ಇದ್ದ ಪಠ್ಯಪುಸ್ತಕವನ್ನು ಮುಂದುವರೆಸುವ ಸಲುವಾಗಿ ತೀರ್ಥಹಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿಯ ಗಾಯತ್ರಿ ಮಂದಿರದವರೆಗೆ ಜೂನ್ 15 ರಂದು ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್‌ರವರು ಹೇಳಿದರು.

ಹೊಸನಗರದ ಕಾಂಗ್ರೆಸ್ ಕಛೇರಿ (ಗಾಂಧಿ ಮಂದಿರ) ಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಈ ಪಾದಯಾತ್ರೆಯು ಪಕ್ಷತೀತವಾಗಿದ್ದು ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ, ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಜೆಡಿಎಸ್‌ನಿಂದ ವೈ.ಎಸ್ ವಿ ದತ್ತಾ, ರೈತಸಂಘದಿಂದ ರಾಜ್ಯಾಧ್ಯಕ್ಷ ಬಸವರಾಜ್, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಗುರುಮೂರ್ತಿ ಅನೇಕ ಜನ ಸಾಹಿತಿಗಳು ಹಾಗೂ ರಾಜಕೀಯ ನಾಯಕರು ಈ ಪ್ರತಿಭಟನೆಗೆ ಹಾಗೂ ಪಾದಯಾತ್ರೆಗೆ ಆಗಮಿಸಲಿದ್ದಾರೆ ಎಂದರು.

ಜೂನ್ 15ನೇ ಬುಧವಾರ ಬೆಳಿಗ್ಗೆ 7ಗಂಟೆಯಿಂದ ಕವಿಶೈಲದಿಂದ ಈ ಪಾದಯಾತ್ರೆ ಆರಂಭವಾಗಲಿದ್ದು 12ಗಂಟೆಗೆ ತೀರ್ಥಹಳ್ಳಿಯ ಗ್ರಾಯತ್ರಿ ಮಂದಿರ ತಲುಪಲಿದ್ದು ನಂತರ ಬೃಹತ್ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ ರಾಜಕೀಯ ನಾಯಕರುಗಳು ಈ ಸಭೆಯಲ್ಲಿ ಮಾತನಾಡಲಿದ್ದು ಬಂದಿರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ನಾನು ಶಿಕ್ಷಣ ಸಚಿವನಾಗಿದ್ದಾಗ ಪಠ್ಯಪುಸ್ತಕವನ್ನು ಬದಲಾಯಿಸುವ ಸಂದರ್ಭದಲ್ಲಿ 27 ಸಮಿತಿಯನ್ನು ರಚಿಸಿ 34 ಸಂಘಟನೆಗಳ ಮೂಲಕ ಒಪ್ಪಿಗೆ ಪಡೆದು ನಂತರ ಸದನಕ್ಕೆ ಒಪ್ಪಿಸಿ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ. ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ. ಪಠ್ಯವನ್ನು ಬದಲಾಯಿಸುವಾಗ 2ವರ್ಷಗಳ ಕಾಲವನ್ನು ತೆಗೆದುಕೊಂಡಿದ್ದೇವೆ ಆದರೆ ಇಂದಿನ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್‌ರವರು ಕೇವಲ ಒಂದು ತಿಂಗಳಲ್ಲಿ ಪಠ್ಯ ಪುಸ್ತಕ ಬದಲಾಯಿಸುವ ಪ್ರಮೇಯವೇನಿತ್ತು? ಎಂದು ಪ್ರಶ್ನೀಸಿದರು.

ಕರ್ನಾಟಕ ರಾಜ್ಯದಲ್ಲಿ 10ಲಕ್ಷ ಮಕ್ಕಳ ಭವಿಷ್ಯ ಈ ಪಠ್ಯಕ್ರಮದಿಂದ ಅತಂತ್ರವಾಗಿದ್ದು ತಕ್ಷಣ ಹೊಸ ಪಠ್ಯವನ್ನು ರದ್ದು ಪಡಿಸಲಿ ಹಿಂದಿನ ಪಠ್ಯವನ್ನು ಮಕ್ಕಳಿಗೆ ಕಲಿಸಲಿ ಎಂದು ಪಠ್ಯ ರದ್ದಗುವವರೆಗೆ ಹೋರಾಟ ಅನಿವಾರ್ಯ ಎಂದರು.

ಈ ಜೂನ್ 15ನೇ ಬುಧವಾರ ನಡೆಯುವ ಕುವೆಂಪು ವಿಶ್ವ ಮಾನವ ಪ್ರತಿಭಟನೆ ಹಾಗೂ ಬೃಹತ್ ಕಾರ್ಯಕ್ರಮಕ್ಕೆ ಹೊಸನಗರ ತಾಲ್ಲೂಕಿನಿಂದ ಅತೀ ಹೆಚ್ಚು ಜನರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.

ಈ ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲ್ಲೂಕು ಮಾಜಿ ಪಂಚಾಯಿತಿ ಸದಸ್ಯ ಚಂದ್ರಮೌಳಿ, ಎರಗಿ ಉಮೇಶ್, ಹಿರಿಯರಾದ ಜಯಶೀಲಪ್ಪ ಗೌಡ, ಪ್ರಭಾಕರ್, ಅಶ್ವಿನಿಕುಮಾರ್, ಲೇಖನಮೂರ್ತಿ, ಕಳೂರು ಕೃಷ್ಣಮೂರ್ತಿ, ಬಂಡಿ ರಾಮಚಂದ್ರ, ಜಯನಗರ ಗುರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here