23.2 C
Shimoga
Sunday, November 27, 2022

ರಾತಿಬ್- ದಫ್ ರ‍್ಯಾಲಿ ಈದ್ ಮಿಲಾದ್ ಮೆರವಣಿಗೆಯ ಆಕರ್ಷಣೆ


ರಿಪ್ಪನ್‌ಪೇಟೆ: ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಮಕ್ಕಾ ಜುಮಾ ಮಸೀದಿ ತಝೀಝುಲ್ ಇಸ್ಲಾಂ ಮದ್ರಸ ಮೀಲಾದ್ ಸ್ವಾಗತತ ಸಮಿತಿ ಬದ್ರಿಯಾ ಮದ್ರಸ ಸಮಿತಿ ಎಸ್.ಎಸ್.ಎಫ್,ಮತ್ತು ಎಸ್.ವೈ.ಎಸ್. ಇವರ ಸಹಯೋಗದಲ್ಲಿ ಆಯೋಜಿಸಲಾದ ಇಲಲ್ ಹಬೀಬ್ ಮೀಲಾದ್’ಸಮಾರಂಭದ ಸಮಾರೋಪ ಕಾರ್ಯಕ್ರಮವು ಹೊಸನಗರ ರಸ್ತೆಯಿಂದ ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿನ ದರ್ಗಾಕ್ಕೆ ಮುಸ್ಲಿಂ ಯುವಕರರಾತಿಬ್ ಆಕರ್ಷಣೆಯೊಂದಿಗೆ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಮೆರವಣಿಗೆ ತೆರಳಿ ದರ್ಗದಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಅ.20 ರಿಂದ 23 ರವರೆಗೆ ಇಲಲ್ ಹಭೀಬ್ ಮೀಲಾದ್ ಕಾನ್ಫರೆನ್ಸ್ ಸೌಹಾರ್ಧ ಸಮ್ಮಿಲನ ಹಾಗೂ ಉರ್ದುವಿನಲ್ಲಿ
ಮದ್‌ಹರ‍್ರಸೂಲ್ ಪ್ರಭಾಷಣ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮ್ಮಾಮಸೀದಿ ಅಧ್ಯಕ್ಷ ಮಹಮ್ಮದ್ ರಫೀಕ್ ವಹಿಸಿದ್ದರು.


ಈದ್‌ಮೀಲಾದ್ ಸಮಿತಿಯ ಅಧ್ಯಕ್ಷ ಮುಸ್ತಾಫ್ ಕೆ.ಹೆಚ್.ಆರ್, ಮುಖಂಡರಾದ ಆರ್.ಎ.ಚಾಬುಸಾಬ್, ಅಮ್ಮೀರ್ ಹಂಜಾ, ಕೆ.ಹೆಚ್.ಆರ್.ಮೋಣು, ಆಸಿಫ್ ಭಾಷಾ ಸಾಬ್, ಮಹಮ್ಮದ್‌ಸಾಬ್ ಚಾಲಿ, ಸಯೈದ್ ಜಾಫರ್ ಸ್ವಾದಿಕ್, ಮನ್ಸೂರು, ನೂರುಲ್ಲಾ, ಮಹಮ್ಮದ್ ಶಫಿ, ಆರ್.ಎಸ್.ಇಲಿಯಾಸ್, ಆರ್.ಈ ಹಮೀದ್‌ಸಾಬ್, ಹಸನಬ್ಬ, ಹನೀಫ್, ಹಸೈನಾರ್, ಮೂಹಿಯುದ್ದೀನ್ ಜೀರಿಗೆಮನೆ, ನಾಸೀರ್, ಅದಂಸಾಬ್, ಅಬೂಬಕರ್ ಸಾಬ್, ಹಂಜಾ, ಅಬ್ದುಲ್ಲಾ, ಚಾಬುಸಾಬ್, ಫಯಾಝ್, ಬಾನುಸಾಬ್, ಬಾಬು, ಆರ್.ಎಸ್.ಶಂಶುದ್ದೀನ್, ಇಬ್ರಾಹಿಂ ಅಬ್ದುಲ್ ಸಿದ್ದೀಕ್ಮಮುಖ್ತಿಯಾರ್‌ ಅಹಮದ್ ಸಾಬ್, ಆರ್.ಹೆಚ್.ಮೊಯುದೀನ್‌ಸಾಬ್, ಅಬುದುಲ್ ನದೀಂ ಮಹಮದ್ ಕುಞ್ಞ ಸಾಬ್ ಮತ್ತಿತರರು ಇದ್ದರು.

ಅಕ್ಟೋಬರ್ 27 ರಂದು ವಲಯಮಟ್ಟದ ಪ್ರತಿಭಾ ಕಾರಂಜಿ :
ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಕೆರೆಹಳ್ಳಿ – ಹುಂಚ ಹೋಬಳಿ ವ್ಯಾಪ್ತಿಯ ಪ್ರೌಢಶಾಲೆಗಳ ವಲಯಮಟ್ಟದ 2022-23ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 27 ರಂದು ಗುರುವಾರ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಶ್ರೀಬಸವೇಶ್ವರ ಕನ್ನಡ ಮತ್ತು ಅಂಗ್ಲ ಮಾಧ್ಯಮ ಶಾಲಾ ಅವರಣದಲ್ಲಿ ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಜರುಗಲಿದೆ ಎಂದು ಬಸವೇಶ್ವರ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸೋಮಶೇಖರ ದೂನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯ ಅಧಿಕಾರಿಗಳು, ದೈಹಿಕ ಪರಿವೀಕ್ಷರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಶಿಕ್ಷನ ಸಂಯೋಜಕರು, ಸೇರಿದಂತೆ ಎಲ್ಲಾ ಶಾಲಾ ಎಸ್.ಡಿ.ಎಂ.ಸಿ ಪೋಷಕ ವರ್ಗ ಹಾಗೂ ಎಸ್.ಜೆ.ಜೆ.ವಿದ್ಯಾಪೀಠದ ನಿರ್ದೇಶಕರು ಭಾಗವಹಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!