ಶಿವಮೊಗ್ಗ : ರಾಬರ್ಟ್ ಸಿನಿಮಾ ನನ್ನ ಜೀವನದಲ್ಲಿ ಪ್ರಮುಖ ತಿರುವು ತಂದಿದೆ ಎಂದು ಚಿತ್ರದ ನಾಯಕ ನಟಿ ಭದ್ರಾವತಿಯ ಮೂಲದ ಆಶಾ ಭಟ್ ಹೇಳಿದ್ದಾರೆ.

ಅವರು ಇಂದು ಶಿವಮೊಗ್ಗ ಮತ್ತು ಭದ್ರಾವತಿಗೆ ತನ್ನ ಅಭಿನಯದ ರಾಬರ್ಟ್ ಚಿತ್ರದ ಪ್ರಮೋಷನ್ಗಾಗಿ ನಗರದ ಶಿವಪ್ಪನಾಯಕ ಮಾಲ್ನಲ್ಲಿ ಭಾರತ್ ಸಿನಿಮಾಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲಿಗೆ ಹಿಂದಿ ಚಲನ ಚಿತ್ರ ಜಂಗ್ಲಿಯಲ್ಲಿ ನಟಿಸಿದ್ದೆ. ನಂತರ ದೊರೆತ ಅವಕಾಶವೇ ರಾಬರ್ಟ್. ರಾಬರ್ಟ್ ಚಲನಚಿತ್ರ ನನ್ನ ಜೀವನದ ಐತಿಹಾಸಿಕ ತಿರುವು ಪಡೆದುಕೊಳ್ಳಲಿದೆ. ಖ್ಯಾತ ಹೀರೋ ದರ್ಶನ್ ಜೊತೆಗೆ ನಟಿಸಲು ಸಿಕ್ಕಿದ ಸುವರ್ಣ ಅವಕಾಶ ಸಿಕ್ಕಿದ್ದು ನನಗೆ ಹೆಚ್ಚಿನ ಕೀರ್ತಿಯನ್ನು ಮತ್ತು ಅಭಿಮಾನಿಗಳನ್ನು ಕೊಟ್ಟಿದೆ ಎಂದರು.
