ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ ಮಹಾಪಾದುಕಾ ಪೂಜೆ | ಕಾಲ ಬದಲಾಗುತ್ತಿರುತ್ತದೆ ಆದರೆ ನಮ್ಮ ಜೀವನ ಧರ್ಮ ಎಂದೂ ಬದಲಾಗಬಾರದು ; ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

0
594

ಹೊಸನಗರ : ಕಾಲ ಬದಲಾಗುತ್ತಿರುತ್ತದೆ ಆದರೆ ನಮ್ಮ ಜೀವನ ಧರ್ಮ ಎಂದೂ ಬದಲಾಗಬಾರದು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ರಾಮೋತ್ಸವದ ಶುಭಾವಸರದಲ್ಲಿ ನಡೆದ ಯೋಗ ಪಟ್ಟಾಭಿಷೇಕ ಹಾಗೂ ಮಹಾಪಾದುಕಾ ಪೂಜೆಯ ಧಾರ್ಮಿಕ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮ ಎನ್ನುವುದು ಸೇತುವೆ ಇದ್ದಂತೆ ಜೀವ-ದೇವರ ನಡುವೆ, ಕತ್ತಲ ಬೆಳಕಿನ ನಡುವೆ, ಕೆಡುಕು ಒಳಿತುಗಳ ನಡುವೆ ಸೇತುವೆ, ಇದರರ್ಥ ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಹಾಗೂ ಒಳ್ಳೆಯ ಸಂಸ್ಕಾರದ ಪಡೆಯುವ ಕ್ರಮ ನಮ್ಮದಾಗಿರಬೇಕು. ತೇತ್ರಾಯುಗದಲ್ಲಿ ಜಗತ್ತನ್ನು ಆಳಿದ ರಾಮ, ತನ್ನ ತಂದೆ-ತಾಯಿ, ಗುರು ಹಿರಿಯರು ಅಕ್ಕಪಕ್ಕದಲ್ಲಿದ್ದಾಗ ಒಮ್ಮೆಯೂ ಏರು ಧ್ವನಿಯಲ್ಲಿ ಮಾತನಾಡಿದವನಲ್ಲ, ಅದು ಹಿರಿಯರಿಗೆ ಗೌರವ ನೀಡುವ ಕಿರಿಯನ ಸಂಸ್ಕಾರ. ಈಗ ಯುಗ ಬದಲಾಗಿದೆ ಎನ್ನುವ ಕಾರಣಕ್ಕೆ ನಾವು ನಮ್ಮ ತಂದೆ-ತಾಯಿಗೆ, ಗುರು ಹಿರಿಯರಿಗೆ ನೀಡುವ ಗೌರವ ಖಂಡಿತಾ ಬದಲಾಗಬಾರದು, ಅಂತಹ ಬದಲಾದ ಜೀವನ ಪದ್ದತಿ ಧರ್ಮವಲ್ಲ ಎಂದ ಅವರು, ಅಂದು ಪರಶುರಾಮ, ಶಿವ ಧನಸ್ಸು ಮುರಿದಾಗ ವೈಷ್ಣವ ಧನಸ್ಸು ಹೆದಗೇರಿಸು ಎನ್ನುವ ಸವಾಲು ಹಾಕುವ ಒಂದು ಸನ್ನಿವೇಶ, ಇಂತಹ ಸವಾಲು ಎದುರಾದಾಗ ಕ್ಷತ್ರೀಯನ ರಕ್ತ ಸಹಜವಾಗಿ ಕುದಿಯುತ್ತದೆ, ರಾಮನಿಗೂ ಕುದಿಯಿತು ಆದರೆ ತಂದೆ ದಶರಥ ಅಲ್ಲಿಯೇ ಇದ್ದ ಎನ್ನುವ ಕಾರಣಕ್ಕೆ ಸವಾಲು ನೀಡಿದ ಪರಶುರಾಮರ ಜತೆ ಅತ್ಯಂತ ವಿನೀಯತೆಯಿಂದ ಮಾತನಾಡುವ ರಾಮನ ಜೀವನ ಪ್ರತಿಯೊಬ್ಬರಿಗೂ ಆದರ್ಶ ಎಂದರು.

ಇಂದು ಗುರು ಹಿರಿಯರು ಎದುರು ಬಂದಾಗ ನಮಸ್ಕರಿಸುವ ಕಿರಿಯರು ವಿರಳವಾಗುತ್ತಿದ್ದಾರೆ. ಇದು ನಮ್ಮ ಜೀವನ ಪದ್ದತಿ ಅಲ್ಲ ಎಂದ ಅವರು ಕಾಲ ಯಾವುದೇ ಇರಲಿ ನಮ್ಮ ಧರ್ಮ ಸಂಸ್ಕಾರಗಳು ಬದಲಾಗುವುದಿಲ್ಲ, ನಾವು ಬದಲಿಸಬಾರದು ಎಂದರು.

ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಪಾದಕೆಯ ಪೂಜೆ ಎನ್ನುವುದು ಇಂದು ನಿನ್ನೆಯದಲ್ಲ. ರಾಮಾಯಣ ಕಾಲದಲ್ಲಿ ತಾನು ಪಟ್ಟವನ್ನು ಏರದೆ ರಾಮನ ಪಾದುಕೆಯನ್ನು ಪಟ್ಟದಲ್ಲಿಟ್ಟು ಪೂಜಿಸಿ ರಾಜ್ಯಭಾರ ನಡೆಸಿದ ಭರತನ ಕತೆ ಎಲ್ಲರಿಗೂ ತಿಳಿದಿದೆ. ಇದು ನಮ್ಮ ಪದ್ದತಿ ಮಾತ್ರ ಅಲ್ಲ ನಮ್ಮ ನಂಬಿಕೆ ಎಂದರು.

ರಾಮತಾರಕ ಹವನವೂ ಸೇರಿದಂತೆ ವಿವಿಧ ಧಾರ್ಮಿಕ ಕರ‍್ಯಕ್ರಮಗಳು ಜರುಗಿತು. ಮಹಾ ಪಾದುಕ ಪೂಜೆಯ ನಿಮಿತ್ತ ರಾಜ್ಯದ ಬೇರೆಬೇರೆ ಭಾಗದ ಸಹಸ್ರಾರು ಭಕ್ತರು ಪಾಲ್ಗೊಂಡು ಧನ್ಯತೆ ಪಡೆದರು.

ಸಂಸ್ಕೃತ ವಿದ್ವಾನ್ ಗೋಕರ್ಣದ ಸತ್ಯನಾರಾಯಣ ಶರ್ಮಾ, ಸಿಗಂದೂರ ಪ್ರಧಾನ ಆರ್ಚಕ ಶೇಷಗಿರಿ ಭಟ್, ರಾಘವೇಂದ್ರ ಮಧ್ಯಸ್ಥ, ಕೋಡೂರು ವಿಜೇಂದ್ರ ಭಟ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here