ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್‍ನಲ್ಲಿ ಕೆವಿನ್ ಜೆ. ಹೊನ್ನಳ್ಳಿಗೆ ಪದಕ

0
155

ಶಿವಮೊಗ್ಗ: ಕೇಂದ್ರೀಯ ವಿದ್ಯಾಲಯದಲ್ಲಿ 3ನೇ ತರಗತಿ ಬಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕೆವಿನ್ ಜೆ. ಹೊನ್ನಳ್ಳಿ ಎಂಬ ಬಾಲಕ ಜೂನ್ 17 ರಿಂದ 19 ರ ವರೆಗೆ ಛತ್ತೀಸ್‍ಗಡ ರಾಜ್ಯದ ರಾಯ್‍ಪುರ್‍ದಲ್ಲಿ ನಡೆದ ಕ್ವಾಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಿಂಕ್ -1 (200 ಮೀ) ರಲ್ಲಿ ಬೆಳ್ಳಿಪದಕ ಹಾಗೂ ರಿಂಕ್-3 (800ಮೀ) ರಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಈ ಪ್ರತಿಭಾವಂತ ನಗರದ ಮಂಜುಳ ಮತ್ತು ಜೋಸೆಫ್ ಆರ್. ಹೊನ್ನಳ್ಳಿಯವರ ಮಗನಾಗಿದ್ದು, ಬಾಲಕನ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಅದ್ಯಾಪಕ ವರ್ಗದವರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here