ರಾಷ್ಟ್ರಧ್ವಜ ಆಟಿಕೆ ವಸ್ತುವಲ್ಲ ರಾಷ್ಟ್ರದ ಭವ್ಯತೆಯ ಸಂಕೇತ, ಅದನ್ನು ಪೂಜ್ಯ ಭಾವನೆಯಲ್ಲಿ ಕಾಣಬೇಕು ; ಶಾಸಕ ಹರತಾಳು ಹಾಲಪ್ಪ

0
362

ರಿಪ್ಪನ್‌ಪೇಟೆ: ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 70 ಸಾವಿರ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವುದಾಗಿ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ರಿಪ್ಪನ್‌ಪೇಟೆಯಲ್ಲಿನ ಹಿಂದು ಮಹಾಸಭಾ ಸಭಾಭವನದಲ್ಲಿ ಹರ್-ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ರಾಷ್ಟ್ರಧ್ವಜವನ್ನು ಸಿದ್ದಪಡಿಸುವ ಕಾರ್ಯದಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಕಂದಾಯ – ಶಿಕ್ಷಣ ವಿಶ್ವವಿದ್ಯಾಲಯಗಳು ಮತ್ತು ಅಂಗನವಾಡಿ ಅರಣ್ಯ ರಕ್ಷಣಾ ಇಲಾಖೆ ಇನ್ನಿತರ ಸಂಘಸಂಸ್ಥೆಯ ಪದಾಧಿಕಾರಿಗಳಿಗೆ ಧ್ವಜವನ್ನು ಹೇಗೆ ಕಟ್ಟಬೇಕು ಅದರ ಬಗ್ಗೆ ಮಾಹಿತಿ ನೀಡಿದ ಶಾಸಕರು, ರಾಷ್ಟ್ರಧ್ವಜ ಆಟಿಕೆಯ ವಸ್ತುವಲ್ಲ ರಾಷ್ಟ್ರದ ಭವ್ಯತೆಯ ಸಂಕೇತ ಅದನ್ನು ಪೂಜ್ಯ ಭಾವನೆಯಲ್ಲಿ ಗೌರವಿಸುವ ಗುರುತರ ಜವಾಬ್ದಾರಿ ನಮ್ಮದಾಗಬೇಕು ಎಲ್ಲೆದರಲ್ಲಿ ಧ್ವಜವನ್ನು ಬಿಸಾಕಿ ಅದಕ್ಕೆ ಅಗೌರವ ಮಾಡದಂತೆ ಮತ್ತು ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ರಾಷ್ಟ್ರ ಭಕ್ತಿ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವ ಉದ್ದೇಶದಿಂದಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈಗಾಗಲೇ ಕೇಂದ್ರದ ಪಕ್ಷದ ಮುಖಂಡರು ಸಚಿವರುಗಳಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದು ಆಗಸ್ಟ್ 15 ಅಮೃತ ಮಹೋತ್ಸವಕ್ಕೆ ಸಹಕರಿಸುವ ಮೂಲಕ ದೇಶ ಪ್ರೇಮ ಬೆಳಸಿಕೊಳ್ಳಲು ಇದೊಂದು ಪ್ರೇರಣೆಯಾಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರೆ ನಾವು ಮನೆಮನೆಯಲ್ಲಿ ಬಾವುಟ ಹಾರಿಸಿ ಹೋರಾಟದ ನೆನಪು ಮಾಡಿಕೊಳ್ಳೋಣ ಎಂದರು.

ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಅದರಂತೆ ಹಗಲಿನಂತೆಯೇ ಹಾರಿಸುವ ರಾತ್ರಿಯಲ್ಲಿಯೂ ರಾಷ್ಟ್ರಧ್ವಜ ಅವಕಾಶವಿದೆ. ಅದೇ ರೀತಿ ಪ್ಲಾಸ್ಟಿಕ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳಿಂದ ತಯಾರಿಸಿದ ಧ್ವಜವನ್ನು ಬಳಸಬಹುದಾಗಿದೆ ಎಂದರು.

ಧ್ವಜಗಳನ್ನು ಖರೀದಿಸಿ ಅವುಗಳನ್ನು ಉಚಿತವಾಗಿ ಸರಬರಾಜು ಮಾಡುವಂತೆ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳಿಗೆ ಈಗಾಗಲೇ ಸರಕಾರ ನಿರ್ದೇಶನ ನೀಡಲಾಗಿದೆ.

ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಧ್ವಜಗಳನ್ನು ಪೂರೈಸಲಾಗುತ್ತದೆ. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಧ್ವಜ ಹಾರಾಟದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಹೊಸನಗರ ತಾಲೂಕು ತಹಸಿಲ್ದಾರ್ ವಿ ರಾಜೀವ್ ಮಾತನಾಡಿ, ಆ.13ರ ಬೆಳಿಗ್ಗೆ 6 ಗಂಟೆಯಿಂದ ಆ. 15ರ ಸಂಜೆ 6ರವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಲಾಗಿದ್ದು, ಮನೆ ಅಥವಾ ಕಟ್ಟಡ ಮೇಲ್ಭಾಗದಲ್ಲಿ ಕಟ್ಟಬೇಕು. ಆ. 15ರ ನಂತರ ರಾಷ್ಟ್ರಧ್ವಜವನ್ನು ಇಳಿಸಿ ಸುರಕ್ಷಿತವಾಗಿಡಬೇಕು ಎಂದರು.

ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಬೃಹತ್ ಸಂಖ್ಯೆಯ ಸಾರ್ವಜನಿಕರನ್ನು ಒಳಗೊಂಡಂತೆ ರಾಷ್ಟ್ರಧ್ವಜ ಪ್ರದರ್ಶಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಹರ್-ಘರ್ ತಿರಂಗಾ ಅಭಿಯಾನ ಕಾರ್ಯಕ್ರಮದಲ್ಲಿ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಇಓ ಪ್ರವೀಣ್ ಕುಮಾರ್, ಬಿಇಓ ಕೃಷ್ಣಮೂರ್ತಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಪಿಡಿಓ ಜಿ.ಚಂದ್ರಶೇಖರ್, ಪಿಎಸ್‌ಐ ಶಿವಾನಂದಕೋಳಿ, ಮೆಣಸೆ ಆನಂದ, ವಾಟಗೋಡು ಸುರೇಶ್, ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮಿ, ಆರ್.ಟಿ.ಗೋಪಾಲ್, ಎಂ.ಸುರೇಶ್‌ಸಿಂಗ್, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here