ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಬಡ ಗ್ರಾಮೀಣ ಕ್ರೀಡಾಪಟು | ಹಾಕಿ ಕ್ರೀಡಾಪಟು ಪೂಜಿತಾಗೌಡಳಿಗೆ ಒಕ್ಕಲಿಗ ಯವವೇದಿಕೆಯಿಂದ ಸನ್ಮಾನ

0
539

ರಿಪ್ಪನ್‌ಪೇಟೆ: ಸಾಧನೆ ಮಾಡಲು ಇಂತಹದೇ ಕ್ಷೇತ್ರ ಎಂಬುದಿಲ್ಲ ಎಂಬುದಕ್ಕೆ ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಬಡ ರೈತ ಕುಟುಂಬದ ಪೂಜಿತಾಗೌಡ ಪ್ರತ್ಯೇಕ್ಷ ಸಾಕ್ಷಿಯಾಗಿ ಊರಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾಳೆ.

ಬರುವೆ ಗ್ರಾಮದ ನಾಗೇಶ್‌ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತಾ ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜದ ತಂಡದಿಂದ ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ತಂಡ ದ್ವಿತೀಯ ಸ್ಥಾನಪಡೆಯಲು ಪ್ರಮುಖ ಪಾತ್ರವನ್ನು ವಹಿಸಿದ್ದರು.ಇವಳ ಅಪ್ರತಿಮ ಸಾಧನೆಗೆ ರಿಪ್ಪನ್‌ಪೇಟೆ ಒಕ್ಕಲಿಗ ಸಮಾಜದ ಯುವ ವೇದಿಕೆಯ ಮುಖಂಡರಾದ ರವೀಂದ್ರ ಕೆರೆಹಳ್ಳಿ ಹೆಚ್.ಎನ್.ಉಮೇಶ್, ಬುಕ್ ಸ್ಟಾಲ್ ವೆಂಕಟೇಶ್, ರಾಜೇಶ್ ಹಾಲುಗುಡ್ಡೆ, ಹರೀಶ್, ಚಿಂತು ಹಾಲುಗುಡ್ಡೆ, ಸರ್ವೋತ್ತಮ್, ಪ್ರಮೋದ್, ದಯಾಕರ, ಸುದೀಪಗೌಡ, ರಾಘವೇಂದ್ರ ಬೈರಾಪುರ, ದಯಾಕರ ಹಾಲುಗುಡ್ಡೆ ಇನ್ನಿತರರು ಪೂಜಿತಾಳ ಮನೆಗೆ ಭೇಟಿ ನೀಡಿ ಅರ್ಥಿಕಾ ನೆರವು ನೀಡಿ ಶುಭಹಾರೈಸಿದರು.

ಗ್ರಾಮೀಣ ಪ್ರದೇಶದ ವರಾಹಿ, ಸಾವೆಹಕ್ಲು ಮುಳುಗಡೆ ಸಂತ್ರಸ್ತ ನಾಗೇಶ್‌ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾಗಿ ಕಡು ಬಡತನದ ರೈತ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪಡೆದು ನಂತರ ಕ್ರೀಡಾ ಶಾಲೆಗೆ ಸೇರಿ ಕಠಿಣ ಪರಿಶ್ರಮ ನಿರಂತರ ಅಭ್ಯಾಸದ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಯುವ ಕ್ರಿಡಾಪಟು ಕುಮಾರಿ ಪೂಜಿತ ಇಂದು ರಾಷ್ಟ್ರ ಮಟ್ಟದಲ್ಲಿ ರಿಪ್ಪನ್‌ಪೇಟೆಯ ಕೀರ್ತಿ ಪತಾಕೆಯನ್ನು ಕ್ರೀಡಾಲೋಕದಲ್ಲಿ ಹಾರಿಸಿದ್ದಾಳೆಂದು ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿ ಗ್ರಾಮಾಡಳಿತದಿಂದಲೂ ಗ್ರಾಮಾಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸುಧೀಂದ್ರ ಪೂಜಾರಿ, ಆಸಿಫ್, ಆರ್.ಎ.ಚಾಬುಸಾಬ್, ಎನ್.ವರ್ತೇಶ್, ನರಸಿಂಹ, ಆರ್.ಎನ್.ಮಂಜುನಾಥ, ನಾಗೇಶ್‌ಗೌಡ, ಪಿಡಿಓ ಜಿ.ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here