ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮಲೆನಾಡಿನ ಹಳ್ಳಿಗಾಡಿನ ಬಾಲಕಿಗೆ ಬೆಳ್ಳಿ ಪದಕ !

0
521

ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿಯ ಎಣ್ಣೆನೋಡ್ಲು ಗ್ರಾಮದ ಬಡ ಕುಟುಂಬದ ಬಾಲಕಿ ಕು. ಕಾವ್ಯ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 16 ವರ್ಷದೊಳಗಿನ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ.

ನವದೆಹಲಿಯಲ್ಲಿ ಸೋಮವಾರ ಮುಕ್ತಾಯಗೊಂಡ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಾವ್ಯ ಕೆ ಎನ್ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಗಳಿಸಿದ್ದು ಕರ್ನಾಟಕ ರಾಜ್ಯದ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕಾವ್ಯ ಕೆ.ಎನ್. ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಈ ಪ್ರತಿಭಾವಂತೆ ರಾಷ್ಟ್ರ ಮಟ್ಟದಲ್ಲಿ 5 ಬಾರಿ ಪ್ರಥಮ ಸ್ಥಾನವನ್ನು, 4 ಬಾರಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾಳೆ.

2020 ರಲ್ಲಿ ವರ್ಲ್ಡ್ ರೆಕಾರ್ಡ್ ಇಂಡಿಯಾ ಅಟೆಂಪ್ಟ್ ನಲ್ಲಿ ಭಾಗವಹಿಸಿ ವಿಶ್ವ ದಾಖಲೆಯನ್ನೂ ಸಹ ಮಾಡಿದ್ದಾಳೆ.

ಕಾವ್ಯ ಕೆ ಎನ್ ಗರ್ತಿಕೆರೆ ಸಮೀಪದ ಎಣ್ಣೆನೋಡ್ಲು ಗ್ರಾಮದ ಅತಿ ಬಡ ಕುಟುಂಬದವಳಾಗಿದ್ದು ಹುಂಚದಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಈ ಬಾರಿ ಎಸ್. ಎಸ್. ಎಲ್. ಸಿ.ಪರೀಕ್ಷೆಯಲ್ಲಿ ಶೇಕಡ 88 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಬಡಕುಟುಂಬದಲ್ಲಿ ಜನಿಸಿದ ಇವಳಿಗೆ ತಾಯಿ ಬಾಲ್ಯದಲ್ಲೇ ಮೃತಪಟ್ಟಿದ್ದು ಇಲ್ಲ. ತಂದೆ ಕೂಡ ಜೊತೆಯಲಿಲ್ಲ. ಕಡು ಬಡತನವಿದ್ದರೂ ಕೂಲಿ-ನಾಲಿ ಮಾಡಿಕೊಂಡು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತಿರುವ ದೊಡ್ಡಪ್ಪ ಎಣ್ಣೆನೋಡ್ಲು ಗ್ರಾಮದ ಕೃಷ್ಣಮೂರ್ತಿ ಕು. ಕಾವ್ಯಳಿಗೆ ದಾರಿದೀಪವಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here